ಶಾಸಕರಿಂದ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ,ಶುದ್ಧ ಕುಡಿಯುವ ನೀರಿನ ಘಟಕ (ಆರ್. ಓ ಪಿಲ್ಟರ್) ಉದ್ಘಾಟನೆ

ಕೊಪ್ಪಳ-೨೧: ಕ್ಷೇತ್ರದ ಹುಲಗಿ ಗ್ರಾಮದಲ್ಲಿ ೨೦೧೩-೧೪ ನೇ ಸಾಲಿನ ಸಮಾಜ ಕಲ್ಯಾಣ ಇಲಾಖೆಯ ವಿಶೇಷ ಘಟಕ ಯೋಜನೆಯಡಿ ರೂ. ೮.೦೦ ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಕೊಪ್ಪಳ ಕ್ಷೇತ್ರದ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿ  ಕೊಪ್ಪಳ ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ಅತ್ಯುತ್ತಮ ಗುಣಮಟ್ಟದ ಸಿಸಿ ರಸ್ತೆಗಳನ್ನು ನಿರ್ಮಾಣ ಮಾಡಲಾಗುವುದೆಂದು ತಿಳಿಸಿ ಗುತ್ತಿಗೆದಾರರಾಗಿ ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಲು ಸೂಚಿಸಿದರು.  
 ಈ ಸಂದರ್ಭದಲ್ಲಿ ಟಿ. ಜನಾರ್ಧನ, ಕೆ. ರಮೇಶ ಹಿಟ್ನಾಳ, ಗವಿಸಿದ್ದಪ್ಪ ಮುದಗಲ್, ಪ್ರಸನ್ನ ಗಡಾದ, ದೇವಣ್ಣ ಮೆಕಾಳಿ, ಪಾಲಾಕ್ಷಯ್ಯ, ಬಾಬುಗೌಡ ಪಾಟೀಲ್, ಪ್ರಭು ರಾಜ, ಮರ್ಧಾನಪ್ಪ ಬಿಸರಳ್ಳಿ, ವೆಂಕಟೇಶ್ ಹುಲಗಿ, ನಾಗರಾಜ ಪಟ್ವಾರಿ, ಮಲಿಕಾರ್ಜುನ ಅಗಳಕೇರಾ, ಅಬುಲ್ ಪಾಶಾ ಹಾಗೂ ಅಮೀರಖಾನ್ ಹುಲಗಿ ಉಪಸ್ತಿತರಿದ್ದru.
ಶಾಸಕರಿಂದ  ಶುದ್ಧ ಕುಡಿಯುವ ನೀರಿನ ಘಟಕ (ಆರ್. ಓ ಪಿಲ್ಟರ್) ಉದ್ಘಾಟನೆ
ಕೊಪ್ಪಳ – ೨೧: ಕ್ಷೇತ್ರದ ಹುಲಗಿ ಗ್ರಾಮದಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಶುದ್ಧ ಕುಡಿಯುವ ನೀರಿನ ಆರ್ ಓ ಪಿಲ್ಟರ್ ಘಟಕವನ್ನು ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ ಇವರು ಉದ್ಘಾಟಿಸಿದರು.  ಈ ಸಂದರ್ಭದಲ್ಲಿ ಸುಮಾರು ೧೦೦೦ ನೀರಿನ ಕ್ಯಾನ್‌ಗಳನ್ನು ಬಡವರಿಗೆ ನೀಡಿ ಶುದ್ಧ ಕುಡಿಯುವ ನೀರಿನ ಸದುಪಯೋಗಮಾಡಿಕೊಳ್ಳಬೇಕೆಂದು ಕರೆ ನೀಡಿ  ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ಬರುವ ದಿನಗಳಲ್ಲಿ ಹಂತಹಂತವಾಗಿ ಆರ. ಓ ಫಿಲ್ಟರ್ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಟಿ. ಜನಾರ್ಧನ, ಕೆ. ರಮೇಶ ಹಿಟ್ನಾಳ, ಗವಿಸಿದ್ದಪ್ಪ ಮುದಗಲ್, ಪ್ರಸನ್ನ ಗಡಾದ, ದೇವಣ್ಣ ಮೆಕಾಳಿ, ಪಾಲಾಕ್ಷಯ್ಯ, ಬಾಬುಗೌಡ ಪಾಟೀಲ್, ಪ್ರಭು ರಾಜ, ಮರ್ಧಾನಪ್ಪ ಬಿಸರಳ್ಳಿ, ವೆಂಕಟೇಶ್ ಹುಲಗಿ, ನಾಗರಾಜ ಪಟ್ವಾರಿ, ಮಲಿಕಾರ್ಜುನ ಅಗಳಕೇರಾ, ಅಬುಲ್ ಪಾಶಾ ಹಾಗೂ ಅಮೀರಖಾನ್ ಹುಲಗಿ ಉಪಸ್ತಿತರಿದ್ದರ
Please follow and like us:
error