ರಕ್ತದಾನದಿಂದ ಹೊಸ ಚೈತನ್ಯ ಬರುತ್ತದೆ – ಮುದೇಗೌಡ ಪಾಟೀಲ್

ರಕ್ತದಾನ ಮಾಡುವುದರಿಂದ ಯಾವುದೇ ತೊಂದರೆ ಇಲ್ಲ ನೀವು ಮಾಡಿದ ರಕ್ತ ದಾನ ವರದಾನವಾಗಿಲಿದೆ ಮತ್ತು ಹೊಸ ಚೈತನ್ಯ ಬರುತ್ತದೆ ಎಂದು ತಾಲೂಕ ಪಂಚಾಯತಿ ಸದಸ್ಯ ಮುದೇಗೌಡ ಮಾಲಿ ಪಾಟೀಲ್ ಹೇಳಿದರು.
ಅವರು ಕೊಪ್ಪಳ ತಾಲೂಕಿನ ಕಾತರಕಿ ಗ್ರಾಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಕ್ತ ನಿಧಿ ಕೇಂದ್ರ ಕೊಪ್ಪಳ ಗ್ರಾಮ ಪಂಚಾಯತಿ ಕಾತರಕಿ ಗುಡ್ಲಾನೂರ ಶ್ರೀ ತಾಯ್ಮಮ ದೇವಿ ಭಜನಾ ಯುವಕ ಸಂಘ (ರಿ) ಕಾತರಕಿ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರದ ಜ್ಯೋತಿ ಬೆಳಗಿಸಿ ಮಾತನಾಡುತ್ತ ಜೀವನದಲ್ಲಿ ಒಂದಾದರೂ ಒಳಿತು ಮಾಡಬೇಕಾದರೆ ಮೊದಲು ರಕ್ತದಾನ ಮಾಡಿ ಸಾಯುತ್ತಿರುವವರನ್ನು ಬದುಕಿಸದರೆ ಅದಕ್ಕಿಂತ ಒಳ್ಳೆಯ ಕೆಲಸ ಯಾವುದು ಇಲ್ಲ ಎನ್ನುತ್ತಾ ತಾವು ರಕ್ತದಾನ ಮಾಡುವುದರ ಮೂಲಕ ರಕ್ತದಾನಿಗಳಿಗೆ ಸ್ಪೂರ್ತಿಯಾದರು ನಂತರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎ.ವಿ.ಉಪಾಧ್ಯಾಯ ಮಾತನಾಡಿ ಜನರನ್ನು ಬದುಕಿಸಲಿಕ್ಕೆ ಹಲವಾರು ವೈಧ್ಯಕೀಯ ವಿಜ್ಞಾನ ಸಾಕಷ್ಟು ಮುಂದುವರೆದಿದೆ ಪ್ರತಿದಿನ ಸಾಕಷ್ಟು ಅಪಘಾತಗಳು ಆಗುತ್ತವೆ. ಗರ್ಭಿಣಿ ಮತ್ತು ಮಹಿಳೆಯರು ಮರಣ ಹೊಂದುತ್ತಿದ್ದಾರೆ. ನಾವು ಹಣವನ್ನು ಹೇಗೆ ಜಮಾ ಮಾಡುತ್ತಿವೋ ಹಾಗೆಯೇ ರಕ್ತವನ್ನು ಕೂಡ ಜಮಾ ಮಾಡಬೇಕಾದ ಅವಶ್ಯಕತೆ ಇದೆ. ಆ ನಿಟ್ಟಿನಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ. ಹಣ ಆಪತ್ಕಾಲದಲ್ಲಿ ಉಪಯೋಗಕ್ಕೆ ಬಂದರೆ ರಕ್ತ ಮೂರು ಜೀವ ಉಳಿಸಲಿಕ್ಕೆ ಸಾಧ್ಯವಾಗುತ್ತದೆ ಎಂದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷೆ ಮಲ್ಲಮ್ಮ ಗಂ/ ಮಲ್ಲಪ್ಪ ಮಾಂತಪ್ಪನವರು ವಹಿಸಿಕೊಂಡಿದ್ದರು. ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಯಲ್ಲನಗೌಡ ಮಾಲಿ ಪಾಟೀಲ್ ರಕ್ತದಾನ ಶಿಬಿರ ಉಧ್ಘಾಟಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಕೋಟ್ರಯ್ಯ ಹಿರೇಮಠ ಗ್ರಾಮ ಪಂಚಾಯತ ಉಪಾಧ್ಯಕ್ಷ ಬಸವರಾಜ ಅಂಗಡಿ ಮಾತನಾಡಿದರು. ಗ್ರಾ.ಪಂ. ಸದಸ್ಯರಾದ ಪದ್ಮಾವತಿ ಹಿರೇಗೌಡ್ರ, ನಾಯಕಪ್ಪ ತಳವಾರ, ಸಿದ್ದರೆಡ್ಡಿ ದುರ್ಗದ, ಮಲ್ಲಿಕಾರ್ಜುನ ವೈಧ್ಯ, ಸಿದ್ದಪ್ಪ ಹರಿಜನ, ಸಿದ್ದಮ್ಮ ನಾಗಗೌಡ್ರ, ನಾಗರಾಜ ಹುರಕಡ್ಲಿ, ಭರಮಪ್ಪ ಹುರಿಜೋಳ, ದೇವಕ್ಕ ಉಳ್ಳಾಗಡ್ಡಿ, ಶಶಕಲಾ ಕಮ್ಮಾರ, ಗ್ರಾಮದ ಹಿರಿಯರಾದ ಮಲ್ಲಣ್ಣ ಗುಗ್ರಿ ಕೃಷ್ಣಪ್ಪ ಬೇಟಗೇರಿ, ಮೋದಿನ ಸಾಬ ಗಡ್ಡದ, ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಪಾರ್ವತಿ.ವಿ, ಕೊಟ್ರಯ್ಯ ಸ್ವಾಮಿ ಹಿರೇಮಠ ಇತರರು ವೇದಿಕೆ ಮೇಲೆ ಇದ್ದರು. 
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಂಚಾಲಕ ದೇವೆಂದ್ರಪ್ಪ ಪ್ರಾಸ್ತಾವಿಕ ನುಡಿದರು. ರಾಜ್ಯ ಯುವ ಪ್ರಶಸ್ತಿ ವಿಜೇತ ಜಗದಯ್ಯ ಸಾಲಿಮಠ ನಿರೂಪಿಸಿದರು. ಮಂಜುನಾಥ ಹಿರೇಗೌಡ್ರ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಫಕೀರೇಶ ಕಮ್ಮಾರ ವಂದಿಸಿದರು. 

Leave a Reply