ಗವಿಶ್ರೀ ಕೆರೆ ಅಭಿವೃದ್ಧಿ ಕಾಮಗಾರಿಗೆ ಜ. ೦೮ ರಂದು ಸಚಿವ ಶಿವರಾಜ ತಂಗಡಗಿ ಚಾಲನೆ.

ಕೊಪ್ಪಳ ಜ. ೦೭ (ಕ ವಾ) ಕೊಪ್ಪಳದ ಗವಿಶ್ರೀ ಕೆರೆ ಅಭಿವೃದ್ಧಿ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಜ. ೦೮ ರಂದು ಸಂಜೆ ೫-೩೦ ಗಂಟೆಗೆ ಗವಿಮಠದ ಬಳಿ ಚಾಲನೆ ನೀಡಲಿದ್ದಾರೆ.
     ಗವಿಶ್ರೀ ಕೆರೆಯನ್ನು ೦೧ ಕೋಟಿ ರೂ. ವೆಚ್ಚದಲ್ಲಿ ಅಬಿವೃದ್ಧಿಪಡಿಸಲು ಸಣ್ಣ ನೀರಾವರಿ ಇಲಾಖೆ ಯೋಜನೆ ರೂಪಿಸಿದೆ.  ಇದರಡಿ  ಕೆರೆಯ ಹೂಳು ತೆಗೆಯುವುದು, ರಕ್ಷಣಾ ಗೋಡೆ ನಿರ್ಮಿಸುವುದು, ವಾಕ ವೇ ನಿರ್ಮಿಸುವುದು, ಕೆರೆಯ ಏರಿಯ ಮೇಲೆ ಗ್ರಿಲ್‌ಗಳನ್ನು ಅಳವಡಿಸಿ ಸೌಂದರ್ಯಿಕರಣಗೊಳಿಸುವ ಕಾರ್ಯ ಮಾಡಲಾಗುವುದು ಎಂದು ಸಣ್ಣ ನೀರಾವರಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
Please follow and like us:
error