ಕೊಪ್ಪಳದ ವಿದ್ಯಾರ್ಥಿ ನೀರುಪಾಲು : ಸಚಿವರಿಂದ ಪರಿಹಾರ ವಿತರಣೆ

 ಬಳ್ಳಾರಿಯಲ್ಲಿ ಭಾನುವಾರ ಬಟ್ಟೆ ಒಗೆಯಲು ಹೋಗಿ ಆಕಸ್ಮಿಕವಾಗಿ ನಾಲೆಗೆ ಬಿದ್ದು ಮೃತಪಟ್ಟ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ ಕೊಪ್ಪಳ ಜಿಲ್ಲೆ ಕವಲೂರು ಗ್ರಾಮದ ಬಸವರಾಜ್(೧೯) ಮೃತದೇಹ ಆಂದ್ರಪ್ರದೇಶದ ಆನಂತಪುರ ಜಿಲ್ಲೆಯ ರಾಯದುರ್ಗ ತಾಲ್ಲೂಕಿನ ಕಣೇಕಲ್ಲು ಗ್ರಾಮದ ಬಳಿ ದೊರಕಿದ್ದು, ಮೃತ ಬಸವರಾಜ್  ಬಾಲಕರ ವಸತಿನಿಲಯದಲ್ಲಿ ವಾಸವಿದ್ದ. 
  ಬಸವರಾಜ್ ಮೂಲತಃ ಕೊಪ್ಪಳ ಜಿಲ್ಲೆಯ ಕವಲೂರು ಗಾಮದವನು ಎನ್ನಲಾಗಿದೆ. ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಹೆಚ್. ಆಂಜನೇಯ ಅವರು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ, ಮೃತ ವಿದ್ಯಾರ್ಥಿ ಪೋಷಕರಿಗೆ ಸಾಂತ್ವಾನ ಹೇಳಿ. ಸ್ಥಳದಲ್ಲೇ ೧ ಲಕ್ಷ ರೂ. ಪರಿಹಾರದ ಚೆಕ್ ಅನ್ನು ತಂದೆ ವೀರುಪಾಕ್ಷಪ್ಪ ಅವರಿಗೆ ನೀಡಿದರು. ಸಚಿವರ ಜೊತೆಯಲ್ಲಿ ಸರ್ಕಾರದ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಮತ್ತು ಇಲಾಖೆಯ ಜಿಲ್ಲಾ ಅಧಿಕಾರಿಗಳು ಇದ್ದರು.
Please follow and like us:

Leave a Reply