ಖಾಸಗಿ ಶಾಲೆಗಳ ಶುಲ್ಕ ನೀತಿಯ ಕರಡು ವರದಿಯ ಪ್ರತಿ ಸುಟ್ಟುಹಾಕಿ ಎಸ್.ಎಫ್.ಐ ಪ್ರತಿಭಟನೆ

   

   ಖಾಸಗಿ ಶಾಲೆಗಳ ಶುಲ್ಕ ನೀತಿಯ ಕರಡು ವರದಿಯನ್ನು ತಿರಸ್ಕರಿಸಲು ಎಸ್.ಎಫ್.ಐ ಆಗ್ರಹ

  ಕರಡು ವರದಿಯ ಪ್ರತಿ ಸುಟ್ಟುಹಾಕಿ ಪ್ರತಿಭಟನೆ.
ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ) ಜಿಲ್ಲಾ ಸಮಿತಿಯಿಂದ ಖಾಸಗಿ ಶಾಲೆಗಳ ಶುಲ್ಕ ನೀತಿಯ ಕರಡು ವರದಿಯನ್ನು ತಿರಸ್ಕರಿಸಲು ಒತ್ತಾಯಿಸಿ ಕೇತ್ರ ಶಿಕ್ಷಣಾಧಿಕಾರಿಗಳ ಕಛೆರಿಯ ಮುಂದೆ ಪ್ರತಿಭಟನೆ ನಡೆಸಲಾಯಿತು. ವರದಿಯ ಪ್ರತಿಯನ್ನು ಸುಟ್ಟು ಹಾಕುವ ಮೂಲಕ ಆಕ್ರೋಶವನ್ನು ವ್ಯಕ್ತಪಡಿಸಿದರು. ನಂತರ ಕೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರರವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಕಾರ್ಯದರ್ಶಿ ಗುರುರಾಜ್ ದೇಸಾಯಿ ಅನುದಾನರಹಿತ ಪೂರ್ವ ಪ್ರಾಥಮಿಕ, ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಡ ಶಾಲೆಗಳಿಗೆ ಶುಲ್ಕ ನಿಗದಿಗೆ ಸಂಬಂದಿಸಿದಂತೆ ರಾಜ್ಯ ಸರಕಾರ ಕರಡು ವರದಿಯನ್ನು ರಚಿಸಿದ್ದು ಈ ಕರಡು ವರದಿಯು ಹಲವಾರು ದೋಷಗಳಿಂದ ಕೂಡಿದೆ. ಶಿಕ್ಷಣದ ಖಾಸಗಿಕರಣಕ್ಕೆ ಈ ವರದಿಯ ಮೂಲಕ ರತ್ನಗಂಬಳಿಯನ್ನು ಹಾಸಲು ಹವಣಿಸುತ್ತಿರುವ ಸರಕಾರದ ಕ್ರಮವನ್ನು ಖಂಡಿಸಿದರು. ಆಯುಕ್ತರ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಶುಲ್ಕ ನಿಗದಿ ಸಮಿತಿಯು ಸಹಾಯಕ್ಕಾಗಿ ಉಪಸಮಿತಿಯೊಂದನ್ನು ರಚಿಸಿಕೊಂಡಿತ್ತು. ಉಪಸಮಿತಿಯು ಶುಲ್ಕ ನಿಗದಿಗೆ ಸಂಬಂದಿಸಿದಂತೆ ವಿವಿಧ ಹಂತದ ಶಿಫಾರಸ್ಸುಗಳನ್ನು ಮಾಡಿದೆ. ಅಬಿವೃದ್ಧಿ ಶುಲ್ಕವನ್ನು ಮೂಲಭೂತ ಸೌಲಭ್ಯಗಳ ಆಧಾರದಲ್ಲಿ ಎ,ಬಿ,ಸಿ,ಡಿ,ಇ ಎಂದು ವಿಂಗಡಿಸಿ ಪಡೆಯಲು ಸೂಚಿಸಿದೆ. ಶಾಲೆಗಳನ್ನು ಶ್ರೇಣಿಕೃತವಾಗಿ ವಿಂಗಡಿಸುವ ಮೂಲಕ ಮಕ್ಕಳಲ್ಲಿ ಶ್ರೇಷ್ಟ ಕನಿಷ್ಟ ಎಂಬ ಭಾವನೆಯನ್ನು ತರುವಲ್ಲಿ ಸರಕಾರವೇ ಆಸಕ್ತಿ ತೋರುತ್ತಿರುವುದು ನಿಜಕ್ಕೂ ಆತಂಕಕಾರಿ ಹೆಜ್ಜೆಯಾಗಿದೆ. ಶಾಲಾ ಶುಲ್ಕ ಮತ್ತು ಅಭಿವೃದ್ದಿ ಶುಲ್ಕ, ಬೋಧಕೇತರ ಶುಲ್ಕ ಎಂದು ಮೂರು ರೀತಿಯಲ್ಲಿ ಶುಲ್ಕಗಳನ್ನು ಪಡೆಯಬೇಕು ಎಂದು ಹೇಳುವದರ ಮೂಲಕ ಕೋಠಾರಿ ಆಯೋಗದ ಶಿಫಾರಸ್ಸುಗಳನ್ನು ಉಲ್ಲಂಘಿಸಲಾಗಿದೆ. ಶಿಕ್ಷಣ ಹಕ್ಕು ಕಾಯ್ದೆಯ ನಿಯಮಗಳನ್ನು ಗಾಳಿಗೆ ತೋರಲಾಗಿದೆ. ಶಿಕ್ಷಣ ತಜ್ಞರು, ಬುದ್ದಿಜೀವಿಗಳು, ಪೋಷಕರು ಮತ್ತು ವಿದ್ಯಾರ್ಥಿ ಸಂಘಟನೆಗಳನ್ನು ಈ ಸಮಿತಿಯಿಂದ ದೂರ ಮಾಡುವ ಮೂಲಕ ಸಂವಿಧಾನಕ್ಕೆ ಅಪಮಾನ ಮಾಡಲಾಗಿದೆ. 
ಪೂರ್ವ ಪ್ರಾಥಮಿಕ ಶಾಲೆಗಳಿಗೆ ಯಾವುದೆ ನಿಯಮ ಮತ್ತು ಪಠ್ಯಕ್ರಮ ಇಲ್ಲವೆಂದು ಒಪ್ಪಕೊಂಡಿರುವ ಸರಕಾರ ಪೂರ್ವಪ್ರಾಥಮಿಕ ಶಾಲೆಗಳಿಗೆ ಯಾವ ಆಧಾರದಲ್ಲಿ ಶುಲ್ಕವನ್ನು ನಿಗದಿ ಮಾಡಿದೆ? ಇದು ಖಾಸಗಿ ಶಾಲೆಗಳಿಗೆ ಹಣ ಲೂಟಿ ಮಾಡಿಕೊಡಲು ದಾರಿ ಮಾಡಿಕೊಟ್ಟಂತಾಗುವುದಿಲ್ಲವೆ? ಶುಲ್ಕ ನಿಗದಿ, ಶಾಲೆಗಳ ಸೌಲಭ್ಯವನ್ನು, ಶಿಕ್ಷಕರ ವೇತನವನ್ನು, ಅವರ ಅರ್ಹತೆಯನ್ನು ಪರೀಕ್ಷೆ ಮಾಡುವವರು ಯಾರು? ತಪ್ಪೆಸಗಿದ ಖಾಸಗಿ ಶಾಲೆಗಳಿಗೆ ಕ್ರಮವೇನು? ಎಂಬುದರ ಬಗ್ಗೆ ಉತ್ತರವೇ ಇಲ್ಲ. ಖಾಸಗಿ ಶಾಲೆಗಳು ಸೌಲಭ್ಯವಿಲ್ಲದಿದ್ದರೂ ಶಾಲೆಗಳನ್ನು ನಡೆಸಬಹುದು ಎಂದು ಅದೀಕೃತವಾಗಿ ಸರಕಾರ ಹೇಳಿರುವುದು ವ್ಯಾಪಕವಾಗಿ ಲೂಟಿ ಮಾಡಲು ಖಾಸಗಿ ಶಾಲೆಗಳಿಗೆ ಅವಕಾಶ ಕೊಟ್ಟಂತಾಗುತ್ತದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು. 
   ಈಲ್ಲಾಧ್ಯಕ್ಷ ಅಮರೇಶ್ ಕಡಗದ್ ಮಾತನಾಡಿ ಪ್ರಾಥಮಿಕ ಶಾಲೆಗಳಿಗೆ ಈ ಹಿಂದೆ ಇದ್ದ ಬೋದಕೇತರ ಶುಲ್ಕ ೩೮ ರೂ ಗಳ ಬದಲಾಗಿ ೩೬೦ ಗೆ ಹೆಚ್ಚಿಸಲಾಗಿದೆ. ಪ್ರೌಢಶಾಲೆಗಳಿಗೆ ೨೧೫ ರೂ ಗಳ ಬದಲಾಗಿ ೬೩೫ ರೂ ತೆಗೆದುಕೊಳ್ಳಬೇಕು ಹೇಳಲಾಗಿದೆ. ಅಚ್ಚರಿಯೇನಂದರೆ ಕರಡು ವರದಿಯ ಕೊನೆಯಲ್ಲಿ ಖಾಸಗಿ ಶಾಲೆಗಳ ಆಡಳಿತ ಮಂಡಳಿಯವರು ಹೆಚ್ಚಿನ ಸೌಲಭ್ಯ ನೀಡಿದರೆ ಪಾಲಕರ ಅನುಮತಿಯ ಮೇರೆಗೆ ಎಷ್ಟಾದರೂ ಹಣ ಪಡೆಯ ಬಹುದು ಎಂದು ಹೇಳಲಾಗಿದೆ. ಈಜುಕೊಳ, ಕುದರೆ ಸವಾರಿ, ಪ್ರವಾಸ ಇತ್ಯಾದಿಗಳಿಗೆ ಪ್ರತ್ಯೇಕ ಶುಲ್ಕ ಎಂದು ವಿವರಿಸಲಾಗಿದೆ. ಇದು ಪೋಷಕರಿಗೆ ಅನಗತ್ಯ ಹೊರೆಯಾಗುತ್ತದೆ. ಖಾಸಗಿ ಶಾಲೆಗಳು ಹಣ ಉಳ್ಳವರಿಗೆ ಮಾತ್ರ ಶಿಕ್ಷಣ ನೀಡಬೇಕು ಎಂಬದನ್ನು ಈ ವರದಿಯ ಮೂಲಕ ಸರಕಾರ ಕಡ್ಡಾಯ ಮಾಡಲು ಮುಂದಾಗಿದೆ. ಈ ವರದಿಯಲ್ಲಿ ಶುಲ್ಕ ನಿಯಂತ್ರಿಸುವ ಯಾವ ಸಲಹೆಗಳು ಕಾಣ ಸಿಗುವುದಿಲ್ಲ. ಬಡ ಮಧ್ಯಮ ವರ್ಗದ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚಿಸುವ. ಹುನ್ನಾರ ಇದರಲ್ಲಡಗಿದೆ. ಶಿಕ್ಷಣದ ಖಾಸಗೀಕರಣವನ್ನು ಕಡ್ಡಾಯ ಮಾಡಲು ಹೊರಟಿರುವ ಈ ಕರಡು ವರದಿಯನ್ನು ತಿರಸ್ಕರಿಸಬೇಕೆಂದರು. 
                                        ಬೇಡಿಕೆಗಳು
ಶಿಕ್ಷಣದ ಖಾಸಗೀರಣಕ್ಕೆ ಮುಂದಾಗಿರುವ, ಖಾಸಗಿ ಶಾಲೆಗಳಿಗೆ ಎಗ್ಗಿಲ್ಲದಂತೆ ಶುಲ್ಕ ಪಡೆಯಲು ಹೇಳಿರುವ ಶುಲ್ಕ ನೀತಿಯ ಕರಡು ವರದಿಯನ್ನು ತಿರಸ್ಕರಿಸಬೇಕು.
ಶಿಕ್ಷಣದ ಹಕ್ಕು ಕಾಯ್ದಯ ನೀಯಮಗಳನ್ನು ಹಾಗೂ ಕೋಠಾರಿ ಆಯೋಗದ ಶಿಫಾರಸ್ಸುಗಳನ್ನು ಜಾರಿ ಮಾಡಬೇಕು.
ಸಮಾನ ಶಿಕ್ಷಣ ನೀಡುವ ಹೊಸ ವರದಿಯನ್ನು ತಯಾರಿಸಲು ಸಮಿತಿ ರಚಿಸಬೇಕು. ಆ ಸಮಿತಿಯಲ್ಲಿ ಪೋಷಕರ ಸಂಘಟನೆಗಳ ಮುಖಂಡರು ಮತ್ತು ವಿದ್ಯಾರ್ಥಿ ಸಂಘಟನೆಗಳ ಮುಖಂಡರುಗಳನ್ನು ಸೇರಿಸಿಕೊಳ್ಳಬೇಕು. ಎಂಬ ಬೇಡಿಕೆಯುಳ್ಳ ಮನವಿ ಪತ್ರವನ್ನು ಸಲ್ಲಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾ ಕಾರ್ಯದರ್ಶಿ ಬಾಳಪ್ಪ ಹುಲಿಹೈದರ್, ಮುಖಂಡರಾದ್ ಶಿವಕುಮಾರ್, ಉಮೇಶ್ ರಾಠೋಡ್, ಹನಮಂತ್ ರಾಠೋಡ್, ನೇತ್ರಾವತಿ, ರೇಣುಕಾ, ಪವಿತ್ರಾ, ಪರಿಮಳಾ, ಮಹಾಲಕ್ಷ್ಮೀ ಸೇರಿದಂತೆ ಅನೇಕರಿದ್ದರು. 
Please follow and like us:
error