ದೇವದಾಸಿ ಕುಟುಂಬಕ್ಕೆ ಸರಕಾರದ ಭಿಕ್ಷೆಬೇಡ ಪಾಲುಬೇಕು. – ರಾಜೇಂದ್ರ ಕರೆ

  ದೇವದಾಸಿ ಕುಟುಂಬಗಳ ಬದುಕಿನ ಬದಲಾವಣೆಗಾಗಿ ಸರಕಾರ ಭೀಕ್ಷೆ ನೀಡಬೇಕಾಗಿಲ್ಲ. ಅವರ ಪಾಲನ್ನು ಅವರಿಗೆ ನೀಡಬೇಕೆಂದು, ಮಾನವ ಹಕ್ಕುಗಳ ಹೋರಾಟ ಸಮಿತಿಯ ರಾಜ್ಯ ಕಾರ್ಯದರ್ಶಿ ವೈ. ಜೆ ರಾಜೇಂದ್ರ ಬೆಂಗಳೂರು ಅವರು ಹೇಳಿದರು.
   ಅವರು ನಗರದ ಸಮೂಹ ಸಾಮರ್ಥ್ಯ ಸಂಸ್ಥೆಯಲ್ಲಿ ಜರುಗಿದ ಕುಷ್ಟಗಿ ತಾಲೂಕಿನ ದೇವದಾಸಿ ತಾಯಂದಿರ ಎರಡು ದಿನದ ಉದ್ಯೋಗ ತರಬೇತಿ ಶಿಬಿರವನ್ನು ಉದ್ದೇಶಿಸಿ ಮಾತನಾಡುತ್ತ. ದಲಿತ ಸಮುದಾಯದ ಮಹಿಳೆಯರ ಬದುಕು ಇಂದು ಶೋಚನೀಯ ಸ್ಥಿತಿಯಲ್ಲಿದೆ. ಅದರಲ್ಲೂ ದೇವದಾಸಿ ಮಹಿಳೆಯರ ಬದುಕು ಇನ್ನೂ ಶೋಚನೀಯವಾಗಿದ್ದು, ಈ ತಾಯಂದಿರು ಹಾಗೂ ಅವರ ಕುಟುಂಬ ಸಮಾಜ ಮುಖಿಯಾಗಲು, ನಾಗರೀಕ ಸಮಾಜದ ಗೌರವ, ಮತ್ತು ಕಾಳಜಿ ಅವಶ್ಯವಿದೆ.ಮತ್ತು ಸರಕಾರ ಹಾಗೂ ನಾಗರೀಕ ಸಮಾಜದ ಎಲ್ಲಾ ಸಮುದಾಯಗಳು ಅವರ ಬದುಕಿನ ಪಾಲನ್ನು ಹಕ್ಕಾಗಿ ನೀಡಬೇಕು. ಮತ್ತು ಜಾತಿ ತಾರತಮ್ಯ ಮಾಡಬಾರದೆಂದು. ವೈ.ಜೆ ರಾಜೇಂದ್ರ ಕರೆ ನೀಡಿದರು.
    ಇದೇ ಸಂದರ್ಬದಲ್ಲಿ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಡಿ.ಆರ್.ಪಿ ಜಿಲ್ಲಾ ಯೋಜನಾಧಿಕಾರಿ ಶ್ರೀಮತಿ ಸುಧಾ ಚಿದ್ರಿ. ಅವರು ಮಾತನಾಡುತ್ತಾ ದೇವದಾಸಿ ಮಹಿಳೆಯರು ಸ್ವಾವಲಂಬಿಗಳಾಗಿ ಸ್ವ-ಉದ್ಯೋಗವನ್ನು ಹೊಂದಬೇಕು. ಮತ್ತು ಕುಟುಂಬ ಸದಸ್ಯರನ್ನು ಉನ್ನತ ಶಿಕ್ಷಣಕ್ಕಾಗಿ ಪ್ರೇರಣೆ ನೀಡಬೇಕೆಂದು ತಿಳಿಸಿದರು.
   ತರಬೇತಿಯ ಮೊದಲ ದಿನ ಗ್ರಾಮೀಣ ಅಭಿವೃದ್ಧಿ ತರಬೇತಿ ಕೃಂದ್ರ ಮುಖ್ಯಸ್ಥರಿಂದ ಸ್ವ ಉದ್ಯೋಗ ಮತ್ತು ಸ್ವಾವಲಂಬಿ ಬದುಕಿನ ಕುರಿತು ಮಾಹಿತಿ ನೀಡಿದರು. ನಂತರ ಸಂಪನ್ಮೂಲ ವ್ಯಕ್ತಿಗಳಿಂದ ದೇವದಾಸಿ ಕುಟುಂಬಗಳ ಬದುಕು  ಬವಣೆ, ಹೋರಾಡ ವಿಚಾರವಾಗಿ ಸಂಘಟನೆಯ ಮಹತ್ವ ಕುರಿತು ಮಾಹಿತಿ ಪಡೆಯಾಲಾಯಿತು.
    ತರಬೇತಿಯ ಎರಡನೇ ದಿನದದ್ದು ಶುಕ್ರವಾರದಂದು ಕೃಷಿ,ಅಂಬೇಡ್ಕರ ನಿಗಮ,ತೋಟಗಾರಿಕೆ,ಹೈನುಗಾರಿಕೆ,ಸಮಾಜ ಕಲ್ಯಾಣ, ಕೈಗಾರಿಕೆ ಕೇಂದ್ರ,ಮಹಿಳಾ ಅಭಿವೃದ್ಧಿ ಇಲಾಖೆ ಮತ್ತು ಸಮೂಹ ಸಾಮರ್ಥ್ಯ ಕೊಪ್ಪಳ ಇವರಿಂದ ಸ್ವ-ಉದ್ಯೋಗದ ಬಗ್ಗೆ ತರಬೇತಿ ನೀಡಲಾಯಿತು.
   ಸಂಜೆ ಜರುಗಿದ ಸಮಾರೋಪ ಸಮಾರಂಭದಲ್ಲಿ ದೇವದಾಸಿ ತಾಯಂದಿರು ಎರಡು ದಿನಗಳ ತರಬೇತಿ ಶಿಬಿರ ಕುರಿತು ಅನಿಸಿಕೆ ಅಭಿಪ್ರಾಯ ಹಂಚಿಕೊಂಡರು. ವಿಮುಕ್ತ ದೇವದಾಸಿ ಮಹಿಳಾ ವೇದಿಕೆ ಕುಷ್ಟಗಿ ಹಾಗೂ ದೇವದಾಸಿ ಸಂಪನ್ಮೂಲ ಕೇಂದ್ರ ಕನಕಗಿರಿ ಇವರ ಸಹಭಾಗಿತ್ವದಲ್ಲಿ ಜಾರಗಿದ ಎರಡು ದಿನದ ತರಬೇತಿ ಶಿಬಿರದ ಅಧ್ಯಕ್ಷತೆಯನ್ನು ಮಲೆಯಮ್ಮ ವಹಿಸಿಕೊಂಡಿದರು. ಈ  ಸಂದರ್ಬದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಎಮ್.ಆರ್ ಬೇರಿ ರಾಯಚೂರು, ಅಲ್ಲಾಗಿರಿರಾಜ್ ಕನಕಗಿರಿ, ಡಿ.ಆರ್.ಸಿ ಯೋಜನಾಧಿಕಾರಿ ಯಮನೂರಪ್ಪ. ಹೆಚ್ ಉಪಸ್ಥಿತರಿದ್ದರು. ವಿರುಪಮ್ಮ ಕಾರ್ರ‍ಕ್ರಮಕ್ಕೆ ಸ್ವಾಗತಿಸಿದರು. ಯಮನಪ್ಪ ಮನ್ನೆರಾಳ ವಂದಿಸಿದರು.

Leave a Reply