ಸರಕಾರಿ ಬಸ್ ಪಲ್ಟಿ ೧೨ ಜನರಿಗೆ ಗಾಯ

ಸರಕಾರಿ ಬಸ್ ಪಲ್ಟಿ ಆಗಿ ಶಾಲಾ ಮಕ್ಕಳು ಸೇರಿದಂತೆ ೧೨ ಜನರು ಗಾಯಗೊಂಡ ಘಟನೆ ಕೊಪ್ಪಳ ತಾಲೂಕಿನ ತಿಗರಿ ಗ್ರಾಮದ ಬಳಿ ನಡೆದಿದೆ ಇಂದು ಮುಂಜಾನೆ ಬೆಳಗಿನ ಜಾವ ಅನಕುಂಟೆ ಗ್ರಾಮದಿಂದ ಕೊಪ್ಪಳ ಕ್ಕೆ ಬರುತಿದ್ದ ಸರಕಾರಿ ಬಸ್ ಪಲ್ಟಿ ಆಗಿ ಶಾಲಾ ಮಕ್ಕಳು ಸೇರಿದಂತೆ ೧೩ ಜನ ಗಾಯಗೊಂಡಿದ್ದಾರೆ. 
       ಕೊಪ್ಪಳ ತಾಲುಕಿನ ತಿಗರಿ ಗ್ರಾಮದ ಹೊರವಲಯದಲ್ಲಿ ಮುಂಜಾನೆ ೭ ಘಂಟೆ ಸುಮಾರಿಗೆ ಈ ಘಟನೆ ನಡೆದಿದ್ದು ಗಾಯಗೊಂಡ ಗಾಯಾಳುಗಳನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.  ಅಲ್ಲದೇ ಘಟನೆಗೆ ಚಾಲನಕ ನಿರ್ಲಕ್ಷವೇ ಪ್ರಮುಖ ಕಾರಣ  ಎಂದು ಹೇಳಲಾಗುತ್ತಿದೆ. ಇಂದು ಪಿಯುಸಿ ಪರೀಕ್ಷೆಗೆ ಹೋಗಬೇಕಾದ ವಿದ್ಯಾರ್ಥಿಗಳೂ ಸಹ ಗಾಯಗೊಂಡಿದ್ದು ಆತಂಕ ಪಡುತ್ತಿದ್ದಾರೆ.  ಈ ಕುರಿತು ಅಳವಂಡಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ
Please follow and like us:
error