ನಗರಸಭೆಯ ಅಕ್ರಮ ಜಕಾತಿ ವಸೂಲಿ ವಿರುದ್ಧ ರ‍್ಯಾಲಿ

ದಿನಾಂಕ ೦೪-೦೫-೨೦೧೫ ರಂದು ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘದ ಸದಸ್ಯರು ನಗರಸಭೆಯ ಅಕ್ರಮ ಜಕಾತಿ ವಸೂಲಿ ವಿರುದ್ಧ ಸಿಬಿಎಸ್ ಸರ್ಕಲ್‌ನಿಂದ ನಗರಸಭೆವರೆಗೆ ರ‍್ಯಾಲಿ ಮಾಡಿ ಪೌರಾಯಕ್ತರ ಮುಖಾಂತರ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದ್ದಾರೆ.  ಈ ರ‍್ಯಾಲಿಯಲ್ಲಿ ಭಾರಧ್ವಾಜ್ ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘದ ಜಿಲ್ಲಾಧ್ಯಕ್ಷ ಖಾದರಭಾಷಾ, ಬಸವರಾಜ ಸುಳೇಕಲ್, ಜಿಲ್ಲಾ ಕಾರ್ಯದರ್ಶಿಗಳು, ಸಿಪಿಐಎಂಎಲ್(ಲಿಬರೆಷನ್), ಬೀದಿ ವ್ಯಾಪಾರಿಗಳಾದ ಶ್ರೀನಿವಾಸ, ಬುಡನ್‌ಸಾಬ್, ಗಂಗಮ್ಮ, ರಂಜಾನ್‌ಬೀ, ಇನ್ನು ನೂರಾರು ಬೀದಿ ವ್ಯಾಪಾರಿಗಳು ಪಾಲ್ಗೊಂಡಿದ್ದರು.
Please follow and like us:
error