ಬಿಕ್ಕಳಿಕೆ

ಬಿಕ್ಕಳಿಕೆ
 
ಬೆಳಕಿಗಾಗಿ ಹಚ್ಚಿಟ್ಟ ದೊಂದಿ
ಬೆಂಕಿಯಾಗಿ ಸುಟ್ಟಿತ್ತು
ಬೆಳಕನರಸಿ ಹೊರಟ ಮೈ ಮನಸುಗಳ
ತುಂಬ  ಕಪ್ಪು ಇಲಾಣ ಹತ್ತಿತ್ತು
ಚರಿತ್ರೆಯ ಹಂಗಿಲ್ಲದೆ
ಬದುಕ ಹೊರಟ ನನಗೆ
ಬದುಕಿನೆಲ್ಲದರ ಬಗ್ಗೆ ಗಾಂಧಾರ ಪ್ರೀತಿ
ಅರ್ಥವಾಗುವುದೇ ಇಲ್ಲ
ಆಸೆಗಳ ತಲೆಹಿಡುಕತನದ ರೀತಿ
ಎಣ್ಣೆ ಇಲ್ಲದೆ ಉರಿದು ಹೋದ ಬತ್ತಿ
ಕಮಟು ವಾಸನೆ ನನ್ನ ಸುತ್ತ
ಮಾತು ಮುಗಿಯುವ ಮುನ್ನ
ಹೊಲಿದು ಹೋದ ತುಟಿಗಳು,
ನನ್ನೊಳಗೆ ಬಿಕ್ಕಳಿಸಿ ಅಳುತ್ತವೆ
ತಕರಾರು ಹೂಡುತ್ತಲೇ ಇವೆ
ನನ್ನ ನಿನ್ನೆಗಳು
ಉಳಿದ ಮಾತುಗಳು
– ಸಿರಾಜ್ ಬಿಸರಳ್ಳಿ

Leave a Reply