ಕೊಪ್ಪಳ ಜಿ.ಪಂ. ಸ್ಥಾಯಿಸಮಿತಿಗಳಿಗೆ ಚುನಾವಣೆ : ಸದಸ್ಯರ ಆಯ್ಕೆ

ಕೊಪ್ಪಳ ಜ. ೦೯  ಕೊಪ್ಪಳ ಜಿಲ್ಲಾ ಪಂಚಾಯತಿಯ ಸಾಮಾನ್ಯ ಸ್ಥಾಯಿ ಸಮಿತಿ ಹಾಗೂ ಹಣಕಾಸು ಮತ್ತು ಲೆಕ್ಕ ಪರಿಶೋಧನೆ ಯೋಜನಾ ಸ್ಥಾಯಿ ಸಮಿತಿಗಳನ್ನು ಹೊರತುಪಡಿಸಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗಳಿಗೆ ಸದಸ್ಯರುಗಳನ್ನು ಚುನಾವಣೆ ಮೂಲಕ ಆಯ್ಕೆ ಮಾಡಲಾಯಿತು.  ಸಂಸದ ಶಿವರಾಮಗೌಡ, ಶಾಸಕರುಗಳಾದ ಸಂಗಣ್ಣ ಕರಡಿ, ಪರಣ್ಣ ಮುನವಳ್ಳಿ, ಶಿವರಾಜ್ ತಂಗಡಗಿ, ವಿಧಾನಪರಿಷತ್ ಸದಸ್ಯ ಹಾಲಪ್ಪ ಆಚಾರ್ ಅವರೂ ಸಹ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
  ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತಿಯ ವಿವಿಧ ಸ್ಥಾಯಿ ಸಮಿತಿಗಳಿಗೆ ಸದಸ್ಯರ ಆಯ್ಕೆಗಾಗಿ ಏರ್ಪಡಿಸಲಾಗಿದ್ದ ಚುನಾವಣೆಯಲ್ಲಿ ಸಾಮಾನ್ಯ ಸ್ಥಾಯಿ ಸಮಿತಿಗೆ ನಾಲ್ವರು ಹಾಗೂ ಹಣಕಾಸು ಮತ್ತು ಲೆಕ್ಕ ಪರಿಶೋಧನೆ ಸ್ಥಾಯಿ ಸಮಿತಿಗೆ ನಾಲ್ವರು ಸದಸ್ಯರು ಅವಿರೋಧವಾಗಿ ಆಯ್ಕೆಗೊಂಡರು.  ಪ್ರತಿ ಸ್ಥಾಯಿ ಸಮಿತಿಗೆ ಒಟ್ಟು ೦೭ ಜನ ಸದಸ್ಯರಾಗಲು ಅವಕಾಶವಿದೆ.
ಸಾಮಾನ್ಯ ಸ್ಥಾಯಿ ಸಮಿತಿ : ಸಾಮಾನ್ಯ ಸ್ಥಾಯಿ ಸಮಿತಿಗೆ ಒಟ್ಟು ೦೬ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು, ನಂತರ ಇಬ್ಬರು ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದರಿಂದ, ಹೇಮಲತಾ ಅಂದಾನಗೌಡ ಪೋ.ಪಾಟೀಲ, ಸೀತಾ ಹಲಗೇರಿ, ಲಕ್ಷ್ಮೀದೇವಿ ಹಳ್ಳೂರ, ಪರಸಪ್ಪ ಕತ್ತಿ ಅವರು ಸದಸ್ಯರುಗಳಾಗಿ ಅವಿರೋಧವಾಗಿ ಆಯ್ಕೆಯಾದರು.  ಜಿಲ್ಲಾ ಪಂಚಾಯತಿಯ ಉಪಾಧ್ಯಕ್ಷೆ ಅನ್ನಪೂರ್ಣ ಕಂದಕೂರಪ್ಪ ಅವರು ಈ ಸಮಿತಿಗೆ ಅಧ್ಯಕ್ಷರಾಗಿರುತ್ತಾರೆ.
ಹಣಕಾಸು ಮತ್ತು ಲೆಕ್ಕ ಪರಿಶೋಧನಾ ಸ್ಥಾಯಿ ಸಮಿತಿ : ಈ ಸಮಿತಿಗೆ ವನಿತಾ ಗಡಾದ್, ವಿಜಯಲಕ್ಷ್ಮೀ ರಾಮಕೃಷ್ಣ, ನಾಗನಗೌಡ ಪಾಟೀಲ ಹಾಗೂ ರಾಮಣ್ಣ ಸಾಲಭಾವಿ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ, ಎಲ್ಲರೂ ಸದಸ್ಯರುಗಳಾಗಿ ಅವಿರೋಧವಾಗಿ ಆಯ್ಕೆಯಾದರು.  ಜಿ.ಪಂ. ಅಧ್ಯಕ್ಷ ರಾಘವೇಂದ್ರ ಹಿಟ್ನಾಳ್ ಅವರು ಈ ಸಮಿತಿಗೆ ಅಧ್ಯಕ್ಷರಾಗಿರುತ್ತಾರೆ.
ಶಿಕ್ಞಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ : ಈ ಸಮಿತಿ ಸದಸ್ಯ ಸ್ಥಾನಕ್ಕಾಗಿ ಒಟ್ಟು ೧೩ ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ, ನಂತರ ಒಬ್ಬರು ಸದಸ್ಯರು ನಾಮಪತ್ರ ಹಿಂದಕ್ಕೆ ಪಡೆದರು.  ನಂತರ ನಡೆದ ಚುನಾವಣೆಯಲ್ಲಿ ಅರವಿಂದಗೌಡ ಪಾಟೀಲ್,  ಅಮರೇಶಪ್ಪ ಕುಳಗಿ, ಈರಪ್ಪ ಕುಡಗುಂಟಿ, ಚನ್ನಮ್ಮ ವಿರುಪಾಕ್ಷಗೌಡ ಹೇರೂರು, ಪರಸಪ್ಪ ಕತ್ತಿ, ವಿದ್ಯಾಶ್ರೀ ಈರಣ್ಣ ಗಜೇಂದ್ರಗಡ ಹಾಗೂ ಹನಮಕ್ಕ ಹನಮಂತಪ್ಪ ಚೌಡ್ಕಿ ಅವರು ಸದಸ್ಯರುಗಳಾಗಿ ಆಯ್ಕೆಯಾದರು.
ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ : ಈ ಸಮಿತಿ ಸದಸ್ಯ ಸ್ಥಾನಕ್ಕಾಗಿ ಒಟ್ಟು ೧೦ ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ ನಂತರ ಓರ್ವ ಸದಸ್ಯರು ನಾಮಪತ್ರ ಹಿಂದಕ್ಕೆ ಪಡೆದರು.  ಸ್ಥಾಯಿ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಲು ನಡೆದ ಚುನಾವಣೆಯಲ್ಲಿ ವೀರೇಶಪ್ಪ ಸಾಲೋಣಿ, ಈರಪ್ಪ ಕುಡಗುಂಟಿ, ಅಶೋಕ ತೋಟದ, ಕಸ್ತೂರಮ್ಮ ಪಾಟೀಲ್, ಉಮಾ ಶಿವಪ್ಪ ಮುತ್ತಾಳ, ಜನಾರ್ಧನ ಹುಲಗಿ, ಎಂ. ವಿನಯಕುಮಾರ ಮೇಲಿನಮನಿ ಅವರು ಸ್ಥಾಯಿ ಸಮಿತಿಗೆ ಸದಸ್ಯರುಗಳಾಗಿ ಆಯ್ಕೆಯಾದರು.
ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ : ಈ ಸಮಿತಿಯ ಸದಸ್ಯ ಸ್ಥಾನಕ್ಕಾಗಿ ಒಟ್ಟು ೧೪ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ, ನಂತರ ಇಬ್ಬರು ಸದಸ್ಯರು ನಾಮಪತ್ರ ವಾಪಸ್ ಪಡೆದಿದ್ದರು.  ತರುವಾಯ ನಡೆದ ಚುನಾವಣೆಯಲ್ಲಿ ಎಂ. ವಿನಯಕುಮಾರ ಮೇಲಿನಮನಿ, ಉಮಾ ಶಿವಪ್ಪ ಮುತ್ತಾಳ, ಕಸ್ತೂರಮ್ಮ ಪಾಟೀಲ್, ಪಿಲ್ಲಿ ವೆಂಕಟರಾವ್ (ಕೊಂಡಯ್ಯ), ಭಾಗೀರಥಿ ಶಂಕರಗೌಡ ಪಾಟೀಲ, ಬಿ. ಲಕ್ಷ್ಮೀದೇವಿ ಹಳ್ಳೂರ, ವಿದ್ಯಾಶ್ರೀ ಈರಣ್ಣ ಗಜೇಂದ್ರಗಡ ಅವರು ಸಮಿತಿಗೆ ಸದಸ್ಯರುಗಳಾಗಿ ಆಯ್ಕೆಯಾದರು. 
  ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ ಚುನಾವಣಾ ಅಧಿಕಾರಿಯಾಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ದೊರೈಸ್ವಾಮಿ, ಜಲಾನಯನ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ, ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ಮಾದಿನೂರ, ಕೊಪ್ಪಳ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ, ಮುಖ್ಯ ಯೋಜನಾಧಿಕಾರಿ ಟಿ.ಪಿ. ದಂಡಿಗದಾಸರ್ ಅವರು ಸಹಾಯಕ ಚುನಾವಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು.  ಜಿಲ್ಲಾ ಬಿಸಿಎಂ ಅಧಿಕಾರಿ ಕಲ್ಲೇಶ್ ಸೇರಿದಂತೆ ವಿವಿಧ ಅಧಿಕಾರಿಗಳು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.  ಒಟ್ಟಾರೆ ಜಿಲ್ಲಾ ಪಂಚಾಯತಿಯ ಸ್ಥಾಯಿ ಸಮಿತಿಗಳಿಗೆ ನಡೆದ ಚುನಾವಣಾ ಪ್ರಕ್ರಿಯೆ ಶಾಂತಿ, ಸುವ್ಯವಸ್ಥೆ ಹಾಗೂ ಸುಗಮವಾಗಿ ಜರುಗಿತು.   
Please follow and like us:
error