೪೩ ನೇ ಬೆಳಕಿನೆಡೆಗೆ ಕಾರ್ಯಕ್ರಮ

ಕೊಪ್ಪಳ : ಸಂಸ್ಥಾನ ಶ್ರೀಗವಿಮಠದ ಕೆರೆಯ ದಡದ ಮೇಲೆ ಪ್ರತಿ ಅಮವಾಸ್ಯೆಯಂತೆ ಈ ಅಮವಾಸ್ಯೆಯ ದಿನವೂ ದಿ. ೧೦-೦೪-೨೦೧೩, ಬುಧವಾರದಂದು ಬೆಳಕಿನೆಡೆಗೆ ಕಾರ್ಯಕ್ರಮ ಜರುಗಲಿದೆ. ಸಂಜೆ ೬.೩೦ ಕ್ಕೆ ಆರಂಭವಾಗುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರು, ಸಾಹಿತಿಗಳೂ ಆದ ಭಾಗ್ಯನಗರದ ಅಕ್ಬರ್ ಸಿ. ಕಾಲಿಮಿರ್ಚಿ ವಹಿಸಲಿದ್ದು, ಕಲ್ಲೂರಿನ  ಮಹಾಂತಯ್ಯಶಾಸ್ತ್ರಿಗಳಿಂದ ಪ್ರವಚನ ಕಾರ್ಯಕ್ರಮವಿದೆ. ಆಕಾಶವಾಣಿ ಕಲಾವಿದರಾದ ಶ್ರೀನಿವಾಸ ಪುರೋಹಿತರಿಂದ ಸಂಗೀತ ಗಾಯನವಿದ್ದು, ಭಕ್ತರು ಪಾಲುಗೊಳ್ಳಬೇಕೆಂದು ಶ್ರೀಮಠ   ತಿಳಿಸಿದೆ.

Related posts

Leave a Comment