ನಿರ್ಮಲಾ ಬಳ್ಳೊಳ್ಳಿಯವರಿಗೆ ಬಸವರತ್ನ ರಾಷ್ಟ್ರಪ್ರಶಸ್ತಿ ಪ್ರದಾನ.

ಕೊಪ್ಪಳ-08- ವಿಜಯಪುರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಬುಧವಾರ ಆಹೇರಿಯ ಶ್ರೀ ಬಸವೇಶ್ವರ ಕರ್ಮವೀರ ಕಲಾ ಸಾಹಿತ್ಯ ಸಂಸ್ಕೃತಿ ವೇದಿಕೆಯ ವತಿಯಿಂದ ಕೊಪ್ಪಳ ಜಿಲ್ಲಾ ಕದಳಿ ವೇದಿಕೆ ಅಧ್ಯಕ್ಷರು, ಸಮಾಜ ಸೇವಕರಾದ ನಿರ್ಮಲಾ ವಿಶ್ವನಾಥ ಬಳ್ಳೊಳ್ಳಿಯವರಿಗೆ ಆಹೇರಿಯ ಬಂಥನಾಳ ವಿರಕ್ತಮಠದ ಚಿಲ್ಲಾಲಿಂಗ ಮಹಾಸ್ವಾಮಿಗಳು ಬಸವರತ್ನ ರಾಷ್ಟ್ರಪ್ರಶಸ್ತಿಯನ್ನು ಪ್ರದಾನ ಮಾಡಿದರು.
    ಕರ್ನಾಟಕ ಉಚ್ಛನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಅರವಿಂದ ಎಸ್.ಪಾಶ್ಚಾಪುರೆ, ಬೆಳಗಾವಿ ಉತ್ತರವಲಯ ಆರಕ್ಷಕ ಮಹಾನಿರೀಕ್ಷಕರಾದ ಉಮೇಶಕುಮಾರ,  ವಿಜಾಪುರ  ಜಿಲ್ಲಾ ವಾಣಿಜ್ಯ, ಉದ್ಯಮಿ ಹಾಗೂ ಕೃಷಿ ಸಂಸ್ಥೆಯ ಅಧ್ಯಕ್ಷರಾದ  ಡಿ.ಎಸ್.ಗುಡ್ಡೋಡಗಿ, ವಿಜಯಪುರ ಮಹಾನಗರಪಾಲಿಕೆಯ ಅಧ್ಯಕ್ಷರಾದ ಸಂಗೀತಾ ಪೋಳ, ಮಾಜಿ ಸಚಿವರಾದ ಎಸ್.ಎಸ್.ಪಾಟೀಲ, ಎಸ್.ಕೆ.ಬೆಳ್ಳುಬ್ಬಿ, ಎಂ.ಸಿ.ಮನಗೂಳಿ, ರೇವುನಾಯಕ ಬೆಳಮಗಿ, ವೇದಿಕೆಯ ಅಧ್ಯಕ್ಷರಾದ ಬಂಡೆಪ್ಪ ಜಿ.ತೇಲಿ ಮುಂತಾದವರು ವೇದಿಕೆ ಮೇಲೆ ಉಪಸ್ಥಿತರಿದ್ದರು.
Please follow and like us:
error