ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಿಸಲು ಒತ್ತಾಯ

ಕೊಪ್ಪಳ, ಅ.೦೮:  ಜಿಲ್ಲೆಯಲ್ಲಿ ಮೆಕ್ಕೆಜೋಳ ಬೆಲೆ ದೀಡಿರನೆ ಕುಸಿದ ಹಿನ್ನೆಲೆಯಲ್ಲಿ ರೈತರು ಕಂಗಾಲಾಗಿದ್ದು ಕೂಡಲೇ ಜಿಲ್ಲೆಯಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಿಸಿ ಸರಕಾರ ರೈತರ ಬೆಂಬಲಕ್ಕೆ ಬರಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ ಸರಕಾರಕ್ಕೆ ಓತ್ತಾಯಿಸಿದೆ.
ಈ ಕುರಿತು ಸಂಘದ ಜಿಲ್ಲಾಧ್ಯಕ್ಷ ಹನುಮಂತಪ್ಪ ಹೊಳೆಯಾಚೆ, ಕಾರ್ಯದರ್ಶಿ ಭೀಮಸೇನ ಕಲಕೇರಿ ಹಾಗೂ ಮುಖಂಡ ಚಿನ್ನಾರೆಡ್ಡಿ ಜಂಟಿ ಹೇಳಿಕೆ ನೀಡಿ, ಕಳೆದ ತಿಂಗಳ ದಿ.೨೬ ರಂದು ೧೫೭೦ ರೂ. ಮೆಕ್ಕೆಜೋಳ ಪ್ರತಿಕ್ವಿಂಟಲ್‌ಗೆ ಇದ್ದ ಬೆಲೆ ಕಳೆದ ಮೂರು ದಿನಗಳ ಹಿಂದೆ ೧೫೦೦ ರೂ. ಗಳಿಗೆ ಕುಸಿದ್ದು ಅಲ್ಲದೇ ನಿನ್ನೆ ೧೨೫೭ ರೂ.ಗಳಿಗೆ ಕುಸಿತ ಕಂಡಿದೆ. ಇದರಿಂದ ಸ್ಥಳಿಯರು ಕಂಗಾಲಾಗಿದ್ದಾರೆ. ಮೆಕ್ಕೆಜೋಳ ಬೆಳೆ ಬೆಳೆಗೆ ಪ್ರತಿ ಏಕರೆಗೆ ಸರಾಸರಿ ೧೮೦೦೦ ರೂಪಾಯಿಗಳ ವರೆಗೂ ಖರ್ಚಾಗುತ್ತಿದ್ದು ಅಲ್ಲದೇ ಪ್ರತಿ ಏಕರೆಗೆ ಇಳುವರಿ ಮಾತ್ರ ೨೦ ಕ್ವಿಂಟಲ್ ಮಾತ್ರ. ಹಿಗಾಗೀ ರೈತರು ಬಾರಿ ನಷ್ಟ ಅನುಭವಿಸುವಂತಾಗಿದೆ. ಇದೊಂದು ಅವೈಜ್ಞಾನಿಕ ಬೆಲೆಯಾಗಿದ್ದು ಕೂಡಲೇ ಸರಕಾರ ಖರೀದಿ ಕೇಂದ್ರ ಪ್ರಾರಂಭಕ್ಕೆ ಮುಂದಾಗಬೇಕು. ಅಲ್ಲದೇ ಇದೇ ದಿ.೧೦ ರಂದು ಬರುವ ಟೆಂಡರ್‌ನಲ್ಲಿ ೧೫೦೦ ರೂ.ಗಳಿಗಿಂತ ಕಡಿಮೆ ಟೆಂಡರ್ ಹಾಕಿದರೆ, ಟೆಂಡರ್ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘಟಕರು ಎಚ್ಚರಿಸಿದ್ದಾರೆ.
Please follow and like us:
error