fbpx

ಚಾತುವರ್ಣ ಬಿಂಬಿಸುವ ಶಿಕ್ಷಣ ಪದ್ದತಿ ಕಿತ್ತೆಗೆಯೋಣ- ಅನಂತ ನಾಯಕ್

  ಪುರಾತನ ಚಾತುವರ್ಣ ಪತ್ರಿಕೆ ದಂತಿರುವ ಇಂದಿನ ತಾರತಮ್ಯದ ಶಿಕ್ಷಣ ಪದ್ದತಿಯನ್ನು ಕೊನೆಗಾಣಿಸಬೇಕೆಂದು ಎಸ್.ಎಫ್.ಐ ರಾಜ್ಯಾಧ್ಯಕ್ಷ ಅನಂತ ನಾಯಕ್ ಕರೆ ನೀಡಿದರು. ಎಸ್.ಎಫ್.ಐ.ನ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು ಇಂದು ದೇಶದಲ್ಲಿ ಐ.ಸಿ.ಎಸ್.ಇ, ಸಿ.ಬಿ.ಎಸ್.ಇ, ನವೋದಯ ಕೇಂದ್ರಿಯ, ರಾಜ್ಯ ಪಠ್ಯ ಕ್ರಮ ಸೇರಿದಂತೆ ೮ ರೀತಿಯ ತಾರಮತ್ಯದ ಶಿಕ್ಷಣ ಪದ್ದತಿ ಇದೆ ಇದು ಚಾತುವರರ್ಣ ವ್ಯವಸ್ಥೆಯ ಮುಂದುವರಿಕೆ ಯಾಗಿದೆ ಇದನ್ನು ಕಿತ್ತೋಗೆದು ಬಡವ -ಶ್ರೀ ಮಂತ ತಾರತಮ್ಯವಿಲ್ಲದೆ ಸಮಾನ ಶಿಕ್ಷಣ ವ್ಯವಸ್ಥೆ ಜಾರಿಗಾಗಿ ಹೋರಾಟ ರೂಪಿಸಬೇಕೆಂದರು. ಸ್ವಾತಂತ್ರ್ಯ ನಂತರದಲ್ಲಿ ಅಧಿಕಾರ ಅನುಭವಿಸಿದ ಕಾಂಗ್ರೆಸ್- ಬಿಜೆಪಿಗಳೆರಡು ಅನಕ್ಷರತೆ, ಬಡತನ, ನಿರೋಧ್ಯೋಗ, ಜಾತಿಪದ್ಧತಿ, ನಿರ್ಮೂಲನೆ ಮಾಡುವಲ್ಲಿ ವಿಪಲವಾಗಿವೆ. ಸರಕಾರಿ ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸಿ ಶಿಕ್ಷಣ ಮಾರಾಟ ಬಲಗೊಳ್ಳುತ್ತದೆ. ಶಿಕ್ಷಣ ಹಣ ಉಳ್ಳವರ ಪಾಲಾಗುತ್ತದೆ. ಕೊಠಾರಿ ಆಯೋಗದ ಶಿಪ್ಪಾರಸ್ಸಿನಂತೆ ರಾಜ್ಯ ಬಜೇಟ್‌ನಲ್ಲಿ ೩೦% ಕೇಂದ್ರ ಬಜೇಟ್‌ನ ೧೦% ಹಣ ಮಿಸಲಿಡಬೇಕೆಂದು ಒತ್ತಾಯಿಸಿದರು.
ನಮೋರಾಗ ತಿರಸ್ಕರಿಸಿ: ಕಾಂಗ್ರೆಸ್, ಬಿಜೆಪಿಗಳೆರಡು ನವ ಉದಾರಿಕರಣ ನೀತಿ ಗಳನ್ನು ಪ್ರತಿಪಾದಿಸುತ್ತಾ ಶಿಕ್ಷಣವನ್ನು ವ್ಯಾಪಾರಿಕರಿಸುತ್ತವೆ. ಶಿಕ್ಷಣ ಸಂವಿಧಾನ ಬದ್ದವಾಗಿ ಎಲ್ಲರಿಗೂ ಶಿಕ್ಷಣ- ಉದ್ಯೋಗ ಭದ್ರತೆ ನೀಡುವಲ್ಲಿ ವಿಪಲವಾಗಿರುವ ನಮೋ(ನರೇಂದ್ರ ಮೋದಿ) ರಾಗ (ರಾಹುಲ್ ಗಾಂಧಿ) ಯವರನ್ನು ಲೋಕಸಭೆಯಲ್ಲಿ ತಿರಸ್ಕರಿಸಬೇಕೆಂದು ಕರೆ ನೀಡಿದರು.
ಧಾರ್ಮಿಕ ಮೂಲಭೂತವಾದ ಸಂಘಟನೆಗಳು ಜಾತಿ, ಧರ್ಮ, ಪ್ರದೇಶ, ಭಾಷೆಯ ಹೆಸರಿನಲ್ಲಿ ವಿದ್ಯಾರ್ಥಿ ಐಕೈತೆಯನ್ನು ಚಿದ್ರಗೊಳಿಸಲು ಪ್ರಯತ್ನಿಸುತ್ತಿದ್ದು. ಈ ಚಿದ್ರಕಾರಿ ಶಕ್ತಿಗಳ ವಿರೂದ್ದ ಎಸ್.ಎಫ್.ಐ ಕಾರ್ಯಕರ್ತರು ಹೋರಾಟ ಮಾಡಲು ಸನ್ನದರಾಗಿರಬೇಕೆಂದು ಹೇಳಿದರು.
ಕಾರ್ಮಿಕ ಮುಖಂಡ ಖಾಸಿಮ್ ಸಾಬ್ ಸರ್ದಾರ, ಗೈಸಾಬ್ ನಧಾಫ, ಮಾತನಾಡಿದರು. ಜಿಲ್ಲಾಧ್ಯಕ್ಷ ಅಮರೇಶ ಕಡಗದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಪಾಧ್ಯಕ್ಷರಾದ ದುರುಗೇಶ ಡಗ್ಗಿ, ಹನುಮಂತ ಭಜಂತ್ರಿ, ಜಿಲ್ಲಾ ಕಾರ್ಯದರ್ಶಿ ಬಾಳಪ್ಪ ಹುಲಿಹೈದರ, ಜಿಲ್ಲಾ ಮುಖಂಡರುಗಳಾದ ಗ್ಯಾನೇಶ್ ಕಡಗದ, ಮಂಜುನಾಥ ಡಗ್ಗಿ, ವಿರೇಶ ಕುದುರಿತೋತಿ, ಮೇಘನಾ, ಉಪಸ್ಥಿತರಿದ್ದರು. ಸ್ವಾಗತ ಶಿವಕುಮಾರ, ನಿರೂಪಣೆ ಸುಭಾನ್ ಸೈಯದ್ ನಿರ್ವಹಿಸಿದರು.
Please follow and like us:
error

Leave a Reply

error: Content is protected !!