ಮತದಾರರ ಜಾಗೃತಿ : ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ

 ಲೋಕಸಭಾ ಚುನಾವಣೆಯಲ್ಲಿ ಮತದಾರರು ಮತಗಟ್ಟೆಗೆ ತೆರಳಿ ಕಡ್ಡಾಯವಾಗಿ ಮತದಾನ ಮಾಡುವಂತೆ ಮಾಡಲು, ಮತದಾರರ ಜಾಗೃತಿಗಾಗಿ ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ಮತದಾರರಾಗಿರುವ ಕಾಲೇಜು ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ರಂಗೋಲಿ ಸ್ಪರ್ಧೆ, ಭಾಷಣ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಯಿತು.  ನಂತರ ವಿಜೇತರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಣೆ ಸಮಾರಂಭ ಜರುಗಿತು.
  ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ, ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ, ಮತದಾರರ ಜಾಗೃತಿಗೆ ಹೆಚ್ಚಿನ ಶ್ರಮ ವಹಿಸುವಂತೆ ಮನವಿ ಮಾಡಿಕೊಂಡರು. ಪ್ರಾಂಶುಪಾಲ ತಿಮ್ಮಾರೆಡ್ಡಿ ಮೇಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಗಂಗಾವತಿಯ ಎಸ್‌ಕೆಎನ್‌ಜಿ ಕಾಲೇಜಿನ ಡಾ. ಅಬ್ದುಲ್ ರೆಹಮಾನ್, ಗಂಗಾವತಿ ಬಿಇಡಿ ಕಾಲೇಜಿನ ಡಾ. ಜಯರಾಮ ಮರಡಿತೋಟ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರಪ್ಪ ಚೋರನೂರ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸುದರ್ಶನರಾವ್, ರಾಮಕೃಷ್ಣಯ್ಯ, ಕಾಲೇಜಿನ ಸ್ವೀಪ್ ಸಂಚಾಲಕ ರಾಘವೇಂದ್ರಾಚಾರ್ ಪಾಲ್ಗೊಂಡಿದ್ದರು.  ಪ್ರೊ. ಪ್ರಭುರಾಜ್ ನಾಯಕ್ ನಿರೂಪಿಸಿದರು, ಜ್ಞಾನೇಶ್ವರ ಪತ್ತಾರ ವಂದಿಸಿದರು.  
  ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಜಶ್ವಿತ.ಬಿ.ಪಿ ತೋಟಗಾರಿಕೆ ಕಾಲೇಜು ಮುನಿರಾಬಾದ್- ಪ್ರಥಮ, ಶ್ರೀಕಂಠ ಸ್ವಾಮಿ ಸರಕಾರಿ ಪಾಲಿಟೇಕ್ನಿಕ್ ಕಾಲೇಜು ದದೇಗಲ್- ದ್ವಿತೀಯ.  ಲಕ್ಷ್ಮಣ ಸಿಂಗ್ ವಿ.ಹೆಚ.ಎಸ.ಬಿ.ಎಡ್ ಕಾಲೇಜು ಕುಷ್ಟಗಿ- ತೃತೀಯ ಬಹುಮಾನ ಪಡೆದುಕೊಂಡರು.  ರಂಗೋಲಿ ಸ್ಪರ್ಧೆಯಲ್ಲಿ ಸುಜಾತ ಸಪ್ರದಕಾ ಕುಷ್ಟಗಿ- ಪ್ರಥಮ. ಶಾರದ, ಸಂಕಲ್ಪ ಕಾಲೇಜು ಗಂಗಾವತಿ- ದ್ವಿತೀಯ.   ಮೇಘಾ ಎನ್ ಕುಲಕರ್ಣಿ ಸಪ್ರದಕಾ ಯಲಬುರ್ಗಾ- ತೃತೀಯ ಬಹುಮಾನ ಗಳಿಸಿದರು.  ಪ್ರಬಂಧ ಸ್ಪರ್ಧೆ ಯಲ್ಲಿ ಬಸಮ್ಮ ಕೊಳ್ಳಿ ಸಪ್ರದಕಾ ಕೊಪ್ಪಳ- ಪ್ರಥಮ, ಮಲ್ಲಮ್ಮ ಕುಂಬಾರ ತೋಟಗಾರಿಕೆ  ಸುರಭಿ ಬಿ,ಎಡ್ ಕಾ.ಮುನಿರಾಬಾದ- ದ್ವಿತೀಯ ಹಾಗೂ ವಿರುಪಾಕ್ಷ ಎಸ.ಕೆ.ಎನ.ಜಿ.ಸಪ್ರದಕಾ ಗಂಗಾವತಿ- ತೃತೀಯ ಬಹುಮಾನ ಪಡೆದುಕೊಂಡರು.  ಪ್ರೊ:ರಾಘವೇಂದ್ರಾಚಾರ್ ಸಂಚಾಲಕರಾಗಿ, ಡಾ:ಡಿ.ಎಚ್.ನಾಯ್ಕ, ಪ್ರೊ.ಪ್ರಭುರಾಜ ನಾಯಕ, ಪ್ರೊ:ದಾರುಕಸ್ವಾಮಿ, ಪ್ರೊ:ನಟರಾಜ ಪಾಟೀಲ್, ಡಾ:ತುಕರಾಮ ನಾಯ್ಕ, ಜ್ಞಾನೇಶ್ವರ ಪತ್ತಾರ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.

Leave a Reply