ಹುಲಿಹೈದರ ಗ್ರಾಮಕ್ಕೆ ಮಾನವ ಹಕ್ಕುಗಳ ಆಯೋಗದ ಸದಸ್ಯ ನ್ಯಾಯಮೂರ್ತಿ ಭೇಟಿ

 ತಾಲೂಕಿನ ಹುಲಿಹೈದರ ಗ್ರಾಮದ ಕರಡಿ ಆಡಿಸುವ ಕುಟುಂಬಗಳ ಅಹ್ವಾಲು ಸ್ವೀಕಾರಕ್ಕಾಗಿ ರಾಜ್ಯದ ಮಾನವ ಹಕ್ಕುಗಳ ಆಯೋಗದ ಗೌರವಾನ್ವಿತ ಸದಸ್ಯರಾದ ನ್ಯಾಯಮೂರ್ತಿ ಸಿ.ಜಿ.ಹುನಗುಂದ ರವರು ದಿ  ೧೧-೦೫-೨೦೧೪ ರಂದು ಗ್ರಾಮಕ್ಕೆ ಭೇಟಿ ನೀಡುತ್ತಿದ್ದಾರೆ. 
             ಕಳೆದ ಹತ್ತು ವರ್ಷಗಳಿಂದ ರಾಜ್ಯದ ಕರಡಿ ಆಡಿಸುವ ಖಲಂದರ ಕುಟುಂಬಗಳು ತಮ್ಮ ಸಾಕುಪ್ರಾಣಿ ಕರಡಿಯನ್ನು ಸರಕಾರಕ್ಕೆ ಒಪ್ಪಿಸಿದ ಮೇಲೆ ಪರಿಹಾರ ಬರಬೇಕಾಗಿದ್ದ ಪರಿಹಾರಕ್ಕಾಗಿ ಸುಮಾರು ವರ್ಷಗಳಿಂದ ಹೋರಾಟಗಳನ್ನು ಮಾಡುತ್ತಾ ಬಂದಿದ್ದು, ತದನಂತರ ಮಾನವ ಹಕ್ಕುಗಳ ಆಯೋಗಕ್ಕೆ ಸದರಿ ಕರಡಿ ಆಡಿಸುವ ಕುಟುಂಬಗಳ ಸ್ಥಿತಿಗತಿ ಕುರಿತು ಪಿಯುಸಿಎಲ್ ರಾಜ್ಯ ಸಮಿತಿ ಮನವಿ ಮಾಡಿತ್ತು. ಅದರ ನಿಮಿತ್ಯವಾಗಿ ಮಾನವ ಹಕ್ಕುಗಳ ಆಯೋಗದ ಸದಸ್ಯ ನ್ಯಾಯಮೂರ್ತಿಗಳಾದ ಸಿ.ಜಿ.ಹುನಗುಂದರವರು ದಿನಾಂಕ ೧೧-೦೫-೨೦೧೪ ರಂದು ಹುಲಿಹೈದರಕ್ಕೆ ಭೇಟಿ ನೀಡಿ ಕರಡಿ ಆಡಿಸುವ ಕುಟುಂಬಗಳ ವಾಸ್ತವ ಪರಿಸ್ಥಿತಿಯನ್ನು ಅಧ್ಯಯನ ಮತ್ತು ಅವರ ಸಮಸ್ಯೆಗಳ ಕುರಿತು ಅಹ್ವಾಲು ಸ್ವೀಕರಿಸಲು ಗ್ರಾಮಕ್ಕೆ ಆಗಮಿಸುತ್ತಿದ್ದಾರೆ.
Please follow and like us:
error