fbpx

ವೇಶ್ಯಾವೃತ್ತಿ – ಹೀಗೊಂದು ಅಭಿಪ್ರಾಯ

 ಭಾರತದಲ್ಲಿ ದಿನದಿಂದ ದಿನಕ್ಕೆ ಏರುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ತಡೆಯಲು , ಲೈಂಗಿಕ ರೋಗಗಳನ್ನು ನಿಯಂತ್ರಿಸುವ ಸಲುವಾಗಿ ಸರ್ಕಾರ ವೇಶ್ಯಾವಾಟಿಕೆಯನ್ನು ಕಾನೂನು ಬದ್ಧವೆಂದು ಏಕೆ ಘೋಷಿಸಬಾರದು. ವಿಶ್ವದ ಶೇ.೫೦ ರಾಷ್ಟ್ರಗಳಲ್ಲಿ ಈ ವೃತ್ತಿಗೆ ಕಾನೂನಿನ ಮನ್ನಣೆ (ಚೌಕಟ್ಟು) ದೊರಕಿದೆ.  ಆ ದೇಶಗಳಲ್ಲಿ ಅತ್ಯಾಚಾರ ಪ್ರಕರಣಗಳು ಸಹ ಬಹು ವಿರಳವೆನಿಸಿದೆ. ಭಾರತದಲ್ಲಿಯೂ ಇಂತಹ ಪ್ರಯತ್ನವನ್ನು ಏಕೆ ಕೈಗೊಳ್ಳಬಾರದು? ಸಮಾಜದಲ್ಲಿ ಏರುತ್ತಿರುವ ಲೈಂಗಿಕ ರೋಗಗಳು, ಕದ್ದು ಮುಚ್ಚಿ ನಡೆಯುತ್ತಿರುವ ಅಕ್ರಮ ವೇಶ್ಯಾವಾಟಿಕೆಗಳನ್ನು ನಿಯಂತ್ರಿಸಲು ಈ ವೃತ್ತಿಯನ್ನು ಬದುಕಾಗಿಸಿಕೊಂಡಿರುವ ಜನರಿಗೆ ಅನ್ಯ ವೃತ್ತಿಯ ತರಬೇತಿ ನೀಡಿ ಅವರ ಮತ್ತು ಅವರ ಮಕ್ಕಳ ಆರೋಗ್ಯ, ಶಿಕ್ಷಣವನ್ನು ಒದಗಿಸಲು ಸಹಾಯಕವಾಗಬಹುದು. ಈ ವೃತ್ತಿಗೆ ಸಂಬಂಧಿಸಿದ ಎಲ್ಲಾ ನಿಖರ ಮಾಹಿತಿಯನ್ನು, ಸಮಸ್ಯೆಗಳನ್ನು ಕಲೆ ಹಾಕಲು ಇದು ದಾರಿ ಮಾಡಿಕೊಡಬಹುದು. 
    ಈ ಬಗ್ಗೆ ಸರ್ಕಾರ, ನ್ಯಾಯವಾದಿಗಳು, ಬುದ್ಧಿ ಜೀವಿಗಳು, ಸಮಾಜ ಪ್ರಗತಿಪರರೊಂದಿಗೆ ಚರ್ಚಿಸಿ, ಕಾಯ್ದೆ ರೂಪಿಸಿ ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕಾಗಿರುವುದು ಇಂದಿನ ಅಗತ್ಯವೆನಿಸಿದೆ.
ಕೆ.ಟಿ.ಆರ್.ಬೆಂಗಳೂರು
೭೮೯೯೩೨೪೫೩೩
Please follow and like us:
error

Leave a Reply

error: Content is protected !!