fbpx

ನಾಟಕದಲ್ಲಿ ಬರುವ ಒಳ್ಳೆಯ ಸನ್ನಿವೇಶಗಳು ಜೀವನದಲ್ಲಿ ಪಾಲಿಸಬೇಕು : ಸೈಯದ್

ಕೊಪ್ಪಳ,ಜ.೦೯: ಹಿಂದಿನ ಕಾಲದ ನಮ್ಮ ಕಲೆ ಸಂಸ್ಕೃತಿ ರಂಗ ಭೂಮಿ ಮೂಲಕ ಜನರಿಗೆ ಪರಿಚಯಿಸುವ ಕೆಲಸ ನಡೆಯುತ್ತಿದ್ದು ಇಂದಿನ ಆಧುನಿಕ ಯುಗದಲ್ಲಿ ರಂಗ ಭೂಮಿ ಕಲೆಗೆ ಹೆಚ್ಚು ಮಹತ್ವ ದೊರೆಯುತ್ತಿಲ್ಲ. ಆದರೆ ಪಟ್ಟಣ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದಲ್ಲಿ ಇದಕ್ಕೆ ಹೆಚ್ಚಿನ ಮಹತ್ವ ಇದೆ. ಇಂತಹ ನಾಟಕದಲ್ಲಿ ಬರುವಂತ ಒಳ್ಳೆಯ ಸನ್ನಿವೇಶಗಳನ್ನು ಪ್ರತಿಯೊಬ್ಬರು ತಮ್ಮ ತಮ್ಮ ಜೀವನದಲ್ಲಿ ಅಳವಡಿಕೊಂಡು ಜೀವನ ಸಾಗಿಸಬೇಕು ಎಂದು ಸೈಯದ್ ಫೌಂಡೇಷನ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಕೆ.ಎಂ.ಸೈಯದ್ ಹೇಳಿದರು.
ಅವರು ತಾಲೂಕಿನ ಹಟ್ಟಿ ಗ್ರಾಮದಲ್ಲಿ ಶ್ರೀ ಲಕ್ಕಾಂಭೆ ದುರ್ಗಾಂಭೆ ಜಾತ್ರೆಯ ಅಂಗವಾಗಿ ಶ್ರೀ ಕುಮಾರೇಶ್ವರ ಡ್ರಾಮ ಸೀನ್ಸ್ ಶ್ರೀ ಬೀರಲಿಂಗೇಶ್ವರ ನಾಟ್ಯ ಸಂಘ ಹಟ್ಟಿ ಇವುಗಳ ಸಂಯುಕ್ತ ಆಶ್ರಯದಲ್ಲಿ ದಿವಂಗತ ರಾಮಣ್ಣ ಮಾಸ್ಟರ್ ಗುರಿಕಾರರವರ ಶಿಷ್ಯ ಕಾಶೆಪ್ಪ ಮಾಸ್ಟರ ಚಿಕ್ಕಣ್ಣನವರ ಇವರಿಂದ ತಯಾರಿಸಲ್ಪಟ್ಟ ಹಾಲು ಮತದ ಹುಲಿ ಅರ್ಥಾತ್ ರೊಚ್ಚಿಗೆದ್ದ ರಾಯಣ್ಣ (ಹನುಮಂತ ಹಳ್ಳಿಕೇರಿ ) ಎಂಬ ಸುಂದರ ಕ್ರಾಂತಿಕಾರಿ ಸಾಮಾಜಿಕ ನಾಟಕದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಮುಂದುವರಿದು ಮಾತನಾಡಿದ ಅವರು, ಮನುಷ್ಯನ ಜೀವನವೇ ನಾಟಕ ರಂಗ ವಿದ್ದಂತೆ ಪ್ರತಿಯೊಬ್ಬ ಮನುಷ್ಯ ಇಲ್ಲಿ ಪಾತ್ರದಾರಿಯಾದರೆ. ಮೇಲೆ ಕುಂತ ಪರಮಾತ್ಮ ಸೂತ್ರಧಾರಿ ಇಂದಂತೆ. ಪರಮಾತ್ಮನು ಆಡಿಸಿದ ನಾಟಕ ನಾವು ಆಡಬೇಕಾಗಿದೆ ಎಂದ ಅವರು, ಇಂದಿನ ಸಂದರ್ಭದಲ್ಲಿ ರಂಗಭೂಮಿ ಕಲೆ ನಶಿಸಿ ಹೋಗುತ್ತಿದೆ. ಇದನ್ನು ಉಳಿಸಿ-ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ. ನಮ್ಮ ನಾಡಿನ ಪರಂಪರೆ ಕಲೆ ಇಂದಿನ ಯುವ ಪೀಳಿಗೆಗೆ ಪರಿಚಯಿಸಲು ರಂಗಭೂಮಿ ಕಲೆ ಅತ್ಯಂತ ಸಹಕಾರಿಯಾಗಿದೆ ಎಂದು ಸೈಯದ್ ಫೌಂಡೇಷನ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಕೆ.ಎಂ.ಸಯ್ಯದ್ ಹೇಳಿದರು.
ಈ ಸಂದರ್ಭದಲ್ಲಿ ಗುಡದಪ್ಪ ಹಲಗೇರಿ, ಶಿವಪ್ಪ ತಳಕಲ್, ಹಿರೇಸಿಂದೋಗಿ ಗ್ರಾ.ಪಂ.ಅಧ್ಯಕ್ಷ ಕೇಶವರೆಡ್ಡಿ, ಗೋಣೇಶ ಉಪ್ಪಾರ, ತೋಟಪ್ಪ, ಭರಮಪ್ಪ, ನೀಲಪ್ಪ ಕರಿಗಾರ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಸಾದಿಕ್ ಅಲಿ, ಉಪಾಧ್ಯಕ್ಷ ಹನುಮಂತ ಹಳ್ಳಿಕೇರಿ, ಯುವ ಸಾಹಿತಿ ಮಹೆಬೂಬ ಮುಲ್ಲಾ, ಮಾರುತಿ ಮಾಗಳದ, ಗುಂಡಪ್ಪ ಹಟ್ಟಿ, ತಾ.ಪಂ.ಮಾಜಿ ಉಪಾಧ್ಯಕ್ಷ ನಿಂಗಪ್ಪ ಯತ್ನಟ್ಟಿ, ಕೆ.ಎಂ.ಸಯ್ಯದ್‌ರವರ ಆಪ್ತ ಸಹಾಯಕ ವಾಸೀಮ್ ಅಕ್ರಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ನಂತರ ಹಾಲುಮತದ ಹುಲಿ ಎಂಬ ನಾಟಕ ಯಶಸ್ವಿಯಾಗಿ ಪ್ರದರ್ಶನಗೊಂಡು ಜನಮನ ಸೆಳೆಯಿತು.
Please follow and like us:
error

Leave a Reply

error: Content is protected !!