ಫೆ.೦೭ ರಿಂದ ಕುಷ್ಟಗಿಯಲ್ಲಿ ಜಿಲ್ಲಾ ಮಟ್ಟದ ಯುವಜನ ಮೇಳ

ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಜಿಲ್ಲಾ ಮಟ್ಟದ ಯುವಜನ ಮೇಳ ಕಾರ್ಯಕ್ರಮ ಫೆ.೦೭ ರಿಂದ ೦೮ ರವರೆಗೆ, ಕುಷ್ಟಗಿ ಪಟ್ಟಣದ ರಾಜಕುಮಾರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ.
ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಏರ್ಪಡಿಸಲಾಗಿದ್ದ ತಾಲ್ಲೂಕು ಮಟ್ಟದ ಯುವಜನ ಮೇಳದಲ್ಲಿ ಭಾಗವಹಿಸಿ ವೈಯಕ್ತಿಕ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವೀತಿಯ ಸ್ಥಾನ ಪಡೆದವರು, ಗುಂಪು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಯುವಕ/ಯುವತಿಯರು ಭಾಗವಹಿಸಬಹುದು. ಸ್ಪರ್ಧಾಳುಗಳು ಎಂದಿನಂತೆ ತಮ್ಮ ವೇಶ ಭೂಷಣ ವಾದ್ಯಮೇಳಗಳೊಂದಿಗೆ ಫೆ.೦೭ ರ ಬೆಳಿಗ್ಗೆ ೯ ಗಂಟೆಗೆ ಸಂಘಟಕರಲ್ಲಿ ಹೆಸರು ನೋಂದಾಯಿಸಬಹುದು. ಸ್ಪರ್ಧಾಳುಗಳು ೧೫ ರಿಂದ ೩೫ ವರ್ಷದವರಾಗಿರಬೇಕು. ಅಭ್ಯರ್ಥಿಗಳಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ತಾಲ್ಲೂಕು ಮಟ್ಟದ ವಿಜೇತರಿಗೆ ಆಯಾ ತಾಲ್ಲೂಕು ಕೇಂದ್ರ ಸ್ಥಾನದಿಂದ ಕುಷ್ಟಗಿ ತಾಲ್ಲೂಕು ಕೇಂದ್ರ ಸ್ಥಾನಕ್ಕೆ ಬಂದು ಹೋಗುವ ಸಾಮಾನ್ಯ ಬಸ್‌ದರವನ್ನು ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿಗಳಾದ ಗಂಗಾವತಿ ತಾಲೂಕಿನ ತಿಪ್ಪಯ್ಯ ಸ್ವಾಮಿ ಹಿರೇಮಠ-೯೦೦೮೩೬೩೬೭೦, ಕೊಪ್ಪಳ-೯೯೮೦೮೫೨೭೩೫, ಕುಷ್ಟಗಿ -೯೬೬೩೦೫೮೬೬೦, ಯಲಬುರ್ಗಾ-೮೯೭೦೨೮೮೮೫೭ ಅಥವಾ ಇಲಾಖೆಯ ದೂರವಾಣಿ ಸಂಖ್ಯೆ: ೦೮೫೩೯-೨೦೧೪೦೦ ಗೆ ಸಂಪರ್ಕಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಟಿ.ರಾಮಕೃಷ್ಣಯ್ಯ   ತಿಳಿಸಿದ್ದಾರೆ.

Please follow and like us:
error