೩೮ ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಸಂಗಣ್ಣ ಕರಡಿ ಚಾಲನೆ

 ನಮ್ಮ ಊರು-ನಮ್ಮ ರಸ್ತೆ ಯೋಜನೆಯಡಿ ತಾಲೂಕಿನ ಹೊಸಳ್ಳಿ ಗ್ರಾಮದಿಂದ ಹ್ಯಾಟಿ ಗ್ರಾಮದವರೆಗಿನ ಕೂಡು ರಸ್ತೆಯನ್ನು ೩೮ ಲಕ್ಷ ರೂ. ವೆಚ್ಚದಲ್ಲಿ ಸಿ.ಸಿ. ರಸ್ತೆ ಹಾಗೂ ಡಾಂಬರೀಕರಣ ರಸ್ತೆಯನ್ನಾಗಿಸಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರು ಗುರುವಾರ ಚಾಲನೆ ನೀಡಿದರು.
  ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಸದಸ್ಯ ನಾಗನಗೌಡ ಪಾಟೀಲ್, ಬಹದ್ದೂರಬಂಡಿ ಗ್ರಾ.ಪಂ. ಉಪಾಧ್ಯಕ್ಷ ಖಾಜಾ ಹುಸೇನ್, ಬಸವರಾಜ ಪುರದ ಮುಂತಾದ ಗಣ್ಯರು ಉಪಸ್ಥಿತರಿದ್ದರು.
Please follow and like us:
error