ಮಹಿಳಾ ವಿಶೇಷ ಯೋಗವಿಜ್ಞಾನ ಶಿಬಿರದ ಸಮಾರೋಪ

 ನಗರದಲ್ಲಿ ಬನ್ನಿಕಟ್ಟಿ ಪ್ರೌಢಶಾಲಾ ಆವಣದಲ್ಲಿ ದಿ:೮.೩.೨೦೧೪ರಂದು ವಿಶ್ವಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ವಿಶೇಷ ಯೋಗವಿಜ್ಞಾನ ಶಿಬಿರದ ಸಮಾರೋಪ ಸಮಾರಂಭ ಶನಿವಾರ ದಿ:೧೫.೩.೨೦೧೪ರ ಸಂಜೆ ಜರುಗಿತು ಯೋಗ ಶಿಕ್ಷಕ ವೀರಯ್ಯ ಕೆ ಒಂಟಿಗೋಡಿಮಠ ಇವರು ಯೋಗ ತರಬೇತಿ ನಡೆಸಿಕೊಟ್ಟರು.

    ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಪತಂಜಲಿ ಯೋಗ ಸಮಿತಿಯ ಗೌರವ ಅಧ್ಯಕ್ಷ ಹನುಮಂತಪ್ಪ, ಉಪಾಧ್ಯಕ್ಷ ಭೀಮಸೇನ ಮೇಘರಾಜ ಕಾರ್ಯದರ್ಶಿ ಮಲ್ಲಪ್ಪ ಬೇಲೂರು, ಭಾರತ್‌ಸ್ವಾಭಿಮಾನಿ ಟ್ರಸ್ಟ್‌ನ ಖಜಾಂಚಿ ರಾಮಗೋಪಾಲ ತಪಾಡಿಯಾ, ಯೋಗ ಸಾಧಕ ಗಿರೀಶ್ ಭಾಯ್ ಹೊಸಪೇಟೆ, ಲಕ್ಷ್ಮಣ ಭಾವಿಕಟ್ಟಿ, ಹಾಜರಿದ್ದರು ಈ ಸಂದರ್ಭದಲ್ಲಿ ಪತಂಜಲಿ ಮಹಿಳಾ ಯೋಗ ಸಮಿತಿ ಬನ್ನಿಕಟ್ಟಿ ಸಮಿತಿಯನ್ನು ರಚಿಸಲಾಯಿತು. ಮಹಿಳಾ ಪ್ರಭಾರಿಯಾಗಿ ಶ್ರೀಮತಿಜಯಶ್ರೀ ಹನುಮಂತಪ್ಪ, ಸಹಪ್ರಭಾರಿಯಾಗಿ ಸಿಂಧು ಕುಲಕರ್ಣಿ,ಕಾರ್ಯದರ್ಶಿಯಾಗಿ ಸಹನಾ ದೇಸಾಯಿ, ಸಹಕಾರ್ಯದರ್ಶಿಯಾಗಿ ಕಸ್ತೂರಿಬಾಯಿ ಮ್ಯಾಗೇರಿ, ಸಂಚಾಲಕರಾಗಿ ರೇಣುಕಾ ಮಡಿವಾಳರ, ಸಹಸಂಚಾಲಕರಾಗಿ ವಿಜಯಲಕ್ಷ್ಮೀ ಒಂಟಿಗೋಡಿಮಠ, ಸಂಘಟನಾ ಕಾರ್ಯದರ್ಶಿಯಾಗಿ ಮಂಜುಳಾ ಅಳವಂಡಿ, ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಯೋಗ ಶಿಕ್ಷಕರಾದ ಮತ್ತು ಕಾರ್ಯಕ್ರಮದ ಆಯೋಜಕರಾದ ವೀರಯ್ಯ ಒಂಟಿಗೋಡಿಮಠ,ಇನ್ನೂರ್ವ ಮಹಿಳಾ ಯೋಗ ಶಿಕ್ಷಕಿ ಭಾಗ್ಯನಗರದ  ಶ್ರೀಮತಿ ವಿದ್ಯಾಲಕ್ಷ್ಮೀ ಮೇಘರಾಜ ಈರ್ವರವನ್ನು ಸನ್ಮಾನಿಸಲಾಯಿತು.
 ನಂತರ ಕಾರ್ಯಕ್ರಮ ಉದ್ದೇಶಿಸಿ ಮಹಿಳಾ ಪ್ರಭಾರಿಗಳು ಮಾತನಾಡಿ ಬನ್ನಿಕಟ್ಟಿ ಏರಿಯಾದಲ್ಲಿ ನಿರಂತರ ಯೋಗ ಅಭ್ಯಾಸ ನಡೆಸಿ ಸಧೃಡ ಮತ್ತು ಆರೋಗ್ಯವಂತ ಸಮಾಜ ನಿರ್ಮಾಣಮಾಡಲು ಎಲ್ಲಾ ಮಹಿಳಾ ಪಧಾದಿಕಾರಿಗಳು ಶ್ರಮಿಸುವುದಾಗಿ ಈ ಸಂದರ್ಭದಲ್ಲಿ ಹೇಳಿದರೆಂದು ಪ್ರಕಟಣೆಯಲ್ಲಿ ಯೋಗ ಶಿಕ್ಷಕರಾದ ವೀರಯ್ಯ ಒಂಟಿಗೋಡಿಮಠ ತಿಳಿಸಿದರು
Please follow and like us:
error

Related posts

Leave a Comment