You are here
Home > Koppal News > ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರ ಪಟ್ಟಿ

ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರ ಪಟ್ಟಿ

 : ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಸೆ.೦೫ ರಂದು ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕರು ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಮತ್ತು ಶಿಕ್ಷಕಿಯರಿಗೆ ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
 ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪಟ್ಟಿ : ಸುಶೀಲಾ ಶಂಕರಗೌಡ ದೇಸಾಯಿ ಸಹ ಶಿಕ್ಷಕರು ಹಾಗೂ ಜಿಲ್ಲೆಯ ಕುಷ್ಟಗಿ ತಾಲೂಕು ತಾವರಗೇರಾದ ಶಶಿಧರ ಸ್ವಾಮಿ, ವಿದ್ಯಾನಿಕೇತನ ಸಂಯುಕ್ತ ಪ.ಪೂ.ವಿದ್ಯಾಲಯದ ಶಿಕ್ಷಕರು ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪಟ್ಟಿ (ಪ್ರಾಥಮಿಕ ವಿಭಾಗ) : ಕೊಪ್ಪಳ ತಾಲೂಕಿನ ಬೇವಿನಹಳ್ಳಿ ಸ.ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕ ಮಾರುತಿ ಯಲ್ಲಪ್ಪ ಆರೇರ, ಗಂಗಾವತಿ ತಾಲೂಕಿನ ಕಾರಟಗಿಯ ಬಾಲಕಿಯರ ಸ.ಹಿ.ಪ್ರಾ.ಶಾಲೆಯ ಸಹ ಶಿಕ್ಷಕಿ ಅನಸೂಯಾ ಆರ್. ಹಂಚಿನಾಳ, ಯಲಬುರ್ಗಾ ತಾಲೂಕಿನ ತಳಬಾಳನ ಸ.ಹಿ.ಪ್ರಾ.ಶಾಲೆಯ ಸಹ ಶಿಕ್ಷಕಿ ನಿಂಗವ್ವ ಇವರು ಆಯ್ಕೆಯಾಗಿದ್ದಾರೆ.
ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪಟ್ಟಿ (ಪ್ರೌಢವಿಭಾಗ) : ಕೊಪ್ಪಳ ತಾಲೂಕಿನ ಗಿಣಗೇರಿಯ ಸ.ಪ್ರೌ.ಶಾಲೆಯ ದೈಹಿಕ ಶಿಕ್ಷಕ ಎ.ಬಸವರಾಜ, ಗಂಗಾವತಿ ತಾಲೂಕಿನ ಚಿಕ್ಕಜಂತಕಲ್‌ನ ಸ.ಪ್ರೌ.ಶಾಲೆಯ ಸಹ ಶಿಕ್ಷಕಿ ವಿಜಯ ಆಲೂರು, ಯಲಬುರ್ಗಾ ತಾಲೂಕಿನ ಕುಕನೂರಿನ ವಿದ್ಯಾನಂದ ಗುರುಕುಲ ಸಂ.ಪ.ಪೂ.ಕಾಲೇಜಿನ ಚಿತ್ರಕಲಾ ಶಿಕ್ಷಕ ಎ.ಪಿ.ಮುಧೋಳ, ಕುಷ್ಟಗಿ ತಾಲೂಕಿನ ಹನುಮಸಾಗರದ ಬಾಲಕಿಯರ ಸ.ಪ್ರೌ.ಶಾಲೆಯ ಸಹ ಶಿಕ್ಷಕ ಅಮರಪ್ಪ ತಮ್ಮಣ್ಣವರ ಆಯ್ಕೆಯಾಗಿದ್ದಾರೆ.

Leave a Reply

Top