ಕೂಲಿ ಬಿಡಿಸಿ ಶಾಲೆಗೆ ಕಳುಹಿಸಿ – ಎಸ್.ಐ.ಓ. ಕರೆ

 ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಜೇಷನ್ ಆಫ್ ಇಂಡಿಯಾ ದ ವತಿಯಿಂದ ಕೊಪ್ಪಳ ನಗರದ ವಾರ್ಡ ನಂ. ೭ ಡಿಡ್ಡಿಕೇರಿ ಓಣಿಯಲ್ಲಿ ಬಾಲಕಾರ್ಮಿಕ ಪದ್ಧತಿಯ ವಿರುದ್ಧ ಜಾಗೃ

ತಿ ಮೂಡಿಸಲು ಜೂನ್-೧೨ ರಂದು ಮನೆಮನೆಗೆ ತೆರಳಿ ಜಾಗೃತಿ ಮೂಡಿಸಲಾಗಿತ್ತು. ಇಲ್ಲಿ ಬಹಳಷ್ಟು ಶಾಲೆ ಬಿಟ್ಟ ಮಕ್ಕಳು ಹಾಗೂ ಬಾಲಕಾರ್ಮಿಕರು ಹೆಚ್ಚಾಗಿ ಕಂಡುಬಂದಿದ್ದರಿಂದ ಜನರಲ್ಲಿ ಇನ್ನಷ್ಟು ಜಾಗೃತಿ ಮೂಡಿಸಲು ಇಂದು ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಡಿಡ್ಡಿಕೇರಿ ಶಾಲಾ ವಿದ್ಯಾರ್ಥಿಗಳ ಜೊತೆಗೂಡಿ ಓಣಿಯಲ್ಲಿ ಪ್ರಭಾತಫೇರಿ ಜರುಗಿತು. ಮಕ್ಕಳು ವಿವಿಧ ಘೋಷಣಾ ಫಲಕಗಳನ್ನು ಹಿಡಿದು ಕೂಲಿ ಬಿಡಿಸಿ ಶಾಲೆಗೆ ಕಳುಹಿಸಿ, ಶಿಕ್ಷಣವೇ ನಮ್ಮ ಹಕ್ಕು ಎಂಬ ವಿವಿಧ ಘೋಷಣೆಗಳನ್ನು ಕೂಗುತ್ತಾ ಸಾಗಿದರು. ಶಾಲೆ ಬಿಟ್ಟ ಬಾಲ ಕಾರ್ಮಿಕ ಮಕ್ಕಳ ಮನೆಗೆ ಭೇಟಿ ನೀಡಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಪಾಲಕರಲ್ಲಿ ಜಾಗೃತಿ ಮೂಡಿಸಲಾಯಿತು.

ಸಮಾಜದ ಎಲ್ಲಾ ಸಹೋದರ ಸಹೋದರಿಯರಲ್ಲಿ ಎಸ್.ಐ.ಓ. ವಿನಂತಿಸುವುದೇನೆಂದರೆ, ನಿಮ್ಮ ಮನೆಯಲ್ಲಿ ಇಂತಹ ಮಕ್ಕಳಿದ್ದರೆ ಅವರ ವಿದ್ಯಾಭ್ಯಾಸದ ಹೊಣೆಗಾರಿಕೆಯನ್ನು ನೀವು ವಹಿಸಿರಿ. ನಿಮಗೆ ಸಾಧ್ಯವಾಗದೇ ಇದ್ದರೆ ನಮಗೆ ತಿಳಿಸಿರಿ. ಜಾಥಾದಲ್ಲಿ ಎಸ್.ಐ.ಓ. ನ ಕೊಪ್ಪಳ ನಗರಘಟಕದ ಅಧ್ಯಕ್ಷರಾದ ಜಕ್ರಿಯಾ ಖಾನ್, ಟಿಪ್ಪುಸುಲ್ತಾನ, ಶಾಲಾ ಮುಖ್ಯಶಿಕ್ಷಕರಾದ ಮೈಲಾರಗೌಡ ಹೊಸಮನಿ, ಸಹಶಿಕ್ಷಕರಾದ ರಾಜಮಹಮ್ಮದ್, ಅಶೋಕ ಬಿ. ರಡ್ಡೇರ, ಎಲ್ಲಾ ಸಹಶಿಕ್ಷಕರು ಹಾಗೂ ಎಸ್.ಐ.ಓ. ನ ಪದಾಧಿಕಾರಿಗಳು ಭಾಗವಹಿಸಿದ್ದರು.

Leave a Reply