fbpx

ರಸಾಯನಿಕ ಮುಕ್ತ ಈರುಳ್ಳಿ ಬೆಳೆಯಲು ಸಲಹೆ.

ಕೊಪ್ಪಳ ಆ. ೧೮ (ಕ ವಾ) ಈರುಳ್ಳಿಯನ್ನು ಬಹಳಷ್ಟು ಸಂದರ್ಭಗಳಲ್ಲಿ ನೇರವಾಗಿ ಸೇವನೆ ಮಾಡುವುದರಿಂದ, ರೈತರು ರಸಾಯನಿಕ ಮುಕ್ತ ಈರುಳ್ಳಿ ಬೆಳೆಯಲು ಮುಂದಾಗಬೇಕು ಎಂದು ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ. ಎಂ.ಬಿ. ಪಾಟೀಲ್ ಸಲಹೆ ನೀಡಿದರು. ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವತಿಯಿಂದ ತಾಲೂಕಿನ ವದಗನಾಳ ಗ್ರಾಮದಲ್ಲಿ ರೈತರಿಗೆ ಈರುಳ್ಳಿ ಬೆಳೆಯ ಸುಧಾರಿತ ಬೇಸಾಯ ಕ್ರಮಗಳ ಕುರಿತು ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಕ್ರಮದಲ್ಲಿ ಡಾ. ಎಂ.ಬಿ ಪಾಟೀಲ ಮಾತನಾಡಿ ಈರುಳ್ಳಿಯನ್ನು ನೇರವಾಗಿ ಸೇವನೆಗೆ ಉಪಯೋಗಿಸುವುದರಿಂದ, ಈರುಳ್ಳಿ ಬೆಳೆಗೆ ಕಡಿಮೆ ಔಷಧಿಗಳ ಬಳಕೆ ಸೂಕ್ತ, ಆದ್ದರಿಂದ ಸಾವಯವ ಮತ್ತು ಸುಧಾರಿತ ಕ್ರಮಗಳನ್ನು ಅನುಸರಿಸಬೇಕೆಂದು ಸಲಹೆ ನೀಡಿದರು.  ಈ ಕಾರ್ಯಕ್ರಮದಲ್ಲಿ ತೋಟಗಾರಿಕಾ ವಿಷಯತಜ್ಞ ಸುಧಾಕರ್ ಟಿ ಅವರು ಈರುಳ್ಳಿ ತಳಿಗಳ ಆಯ್ಕೆ, ಭೂಮಿ ಸಿದ್ದತೆ, ಸಸಿ ಮಡಿ ತಯಾರಿಕೆ, ಬೀಜ ಬಿತ್ತನೆ ಮತ್ತು ಪೋಷಕಾಂಶಗಳ ನಿರ್ವಹವಣೆ ಬಗ್ಗೆ ಮಾಹಿತಿ ನೀಡಿದರು. ಬೇಸಾಯ ಮತ್ತು ಕೀಟಶಾಸ್ತ್ರ ತಜ್ಞರಾದ ಯೂಸುಪ್‌ಅಲಿ ನಿಂಬರಗಿ, ರೋಹಿತ್ ಅವರು ಈರುಳ್ಳಿಯಲ್ಲಿ ಕಳೆಗಳ ನಿರ್ವಹಣೆ, ಸೂಕ್ತ ಕಳೆನಾಶಕಗಳ ಬಳಕೆ, ಬಳಸುವ ಸಮಯ ಮತ್ತು ಕೀಟ ನಿರ್ವಹಣೆಯ ಬಗ್ಗೆ ವಿವರಿಸಿದರು.   ಕಾರ್ಯಕ್ರಮವನ್ನು ಬಸವನಗೌಡ ಬಿಳಿಎಲಿ ಅವರು ಆಯೋಜಿಸಿದ್ದರು. ರೈತರಾದ ರುದ್ರಪ್ಪ, ಸಕ್ರಗೌಡ ಪಾಟೀಲ, ಸಿದ್ದಪ್ಪ ಶಿವನಗೌಡ್ರ, ಹುಚ್ಚಪ್ಪ, ಬಸವರಾಜ ಹುಡೇದ ಮತ್ತಿತರು ಭಾಗವಹಿಸಿದ್ದರು.

Please follow and like us:
error

Leave a Reply

error: Content is protected !!