fbpx

ಮಂಗಳಾಪೂರ ಗ್ರಾಮದಲ್ಲಿ ಸರಕಾರಿ ಉರ್ದು ಹಾಗೂ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ೬೯ನೇ ಸ್ವಾತಂತ್ರ್ಯ ದಿನಾಚರಣೆ.

ಕೊಪ್ಪಳ – ತಾಲೂಕಿನ ಮಂಗಳಾಪೂರ ಗ್ರಾಮದಲ್ಲಿ ೬೯ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಎರಡು ಶಾಲೆಯ ಎಸ್.ಡಿ.ಎಮ್.ಸಿ. ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಪಂಚಾಯತಿಯ ಅಧ್ಯಕ್ಷರು, ಸರ್ವಸದಸ್ಯರು ಹಾಗೂ ಗ್ರಾಮದ ಗುರುಹಿರಿಯರು, ಯುವಕರು, ಮಹಿಳೆಯರು ಪಾಲ್ಗೊಂಡು ೬೯ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ  ಶಾಲಾ ಮಕ್ಕಳಿಂದ ಭಾಷಣ ವಿವಿಧ ಸ್ಪರ್ಧೆ ಇನ್ನೂ ಮುಂತಾದ ಸಾಂಸ್ಕೃತಿಕ  ಕಾರ್ಯಕ್ರಮ ಅಭಿನಯಿಸಿ ಪ್ರೇಕ್ಷಕರನ್ನು ಮನಸೆಳೆದರು. ಈ ಶುಭ ಸಮಾರಂಭದಲ್ಲಿ ಶ್ರೀಮತಿ ರಿಹಾನಾ ಬೇಗಂ ಕರಡಿ, ಯವರು ಎ.ಪಿ.ಜಿ ಅಬ್ದುಲ್ ಕಲಾಂ ಅವರ ಸವಿ ನೆನಪಿನ ಕಾಣಿಕೆಯಾಗಿ ಶಾಲಾ ಮಕ್ಕಳಿಗೆ ಉಚಿತ ಟೈ ಹಾಗೂ ಬೆಲ್ಟ್ ವಿತರಣೆ ಮಾಡಿದರು, ಅಂಜುಮನ್ ಕಮೀಟಿಯಿಂದ ಉರ್ದು ಶಾಲಾ ಮಕ್ಕಳಿಗೆ ಸ್ಕಾರ್ಪ ಹಾಗೂ ಟೋಪಿ ವಿತರಿಸಲಾಯಿತು, ಮಲ್ಲೇಶ ಕೊಪ್ಪಳ ಇವರು ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿದರು ಇದೇ ಸಂದರ್ಭದಲ್ಲಿ  ಸ್ಪಧೇಯಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಈ ಕಾರ್ಯಕ್ರಮವನ್ನು ಎರಡು ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಕಿಯರು, ಊರಿನ ಹಿರಿಯರು, ಯುವಕರು ಪಾಲ್ಗೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೋಳಿಸಿದರು.

Please follow and like us:
error

Leave a Reply

error: Content is protected !!