ಗೋರಕ್ಷಿಸಿ ಕಾಂಗ್ರೆಸ್ ಉರುಳಿಸಿ – ಸಂಗಣ್ಣ ಕರಡಿ

ಕೊಪ್ಪಳ : ನೂತನವಾಗಿ ಅಧಿಕಾರದ ಗದ್ದಿಗೆಯನ್ನು ಹಿಡಿದಿರುವ ಕಾಂಗ್ರೆಸ್ ಸರಕಾರವು ಹಿಂದಿನ ಬಿಜೆಪಿ ಸರಕಾರವು ಜಾರಿಗೊಳಿಸಲು ಸಿದ್ದಪಡಿಸಿದ್ದ ಗೋ ಹತ್ಯೆ ನಿಷೇದ ಕಾಯ್ದೆ ೨೦೧೦-೧೨ ಇದರಲ್ಲಿ ಕೈಗೊಂಡಿದ್ದ ತಿದ್ದುಪಡೆಯನ್ನು ಹಿಂದಕ್ಕೆ ಪಡೆಯುವುದರ ಮೂಲಕ ಕಾಯ್ಧೆಯನ್ನು ಹಲ್ಲು ಕಿತ್ತ ಹಾವಿನಂತೆ ಮಾಡಿದ್ದಾರೆ. ಹೊಸ ಸರಕಾರವು ಗೋ, ಭೂ ಮತ್ತು ಪ್ರಕೃತಿ ಪ್ರೇಮಿಗಳ ಭಾವನೆಗಳಿಗೆ ಕವಡೆ ಕಿಮ್ಮತ್ತು ನೀಡದೆ ಕೇವಲ ಮತಬ್ಯಾಂಕ ರಾಜಕಾರಣವನ್ನು ಮಾಡುತ್ತಿದ್ದು, ಗೋಹತ್ಯೆ ನಿಷೇಧ ಮಸೂದೆಯನ್ನು ಹಿಂದಕ್ಕೆ ಪಡದಿದೆ ಇಂತಹ ಭ್ರಷ್ಠ ಸರಕಾರವನ್ನು ಗೋವನ್ನು ರಕ್ಷಿಸಲು ಬಹು ಸಂಖ್ಯಾತರ ಭಾವನೆಗಳಿಗೆ ದಕ್ಕೆ ತರುತ್ತಿರುವ  ಕಾಂಗ್ರೆಸ್ ಸರಕಾರವನ್ನು ಕಿತ್ತೊಗೆಯಬೇಕೆಂದು ಬಿ ಜೆ ಪಿ ಜಿಲ್ಲಾಧ್ಯಕ್ಷರಾದ ಹಾಗೂ ಮಾಜಿ ಶಾಸಕರಾದ ಸಂಗಣ್ಣ ಕರಡಿ ಎಂದು ಮಾತನಾಡಿದರು. ಅವರು ದಿನಾಂಕ ೨೮ ರಂದು ಭಾರತೀಯ ಜನತಾ ಪಾರ್ಟಿ ಹಮ್ಮಿಕೊಂಡಿದ್ದ ಗೋ ಹತ್ಯೆ ನಿಷೇಧ ತಿದ್ದುಪಡಿ ವಿಧೇಯಕ ಜಾರಿ ಮಾಡುವ ಹಾಗೂ ದೇವಸ್ಥಾನಗಳ ಸಮಿತಿಯ ರದ್ದತಿಗಳನ್ನು ಕೂಡಲೇ ಹಿಂಪಡೆಯುವ ಪ್ರತಿಭಟನೆಯಲ್ಲಿ ಅಶೋಕ ವೃತ್ತದಲ್ಲಿ ಪ್ರತಿಭಟನಕಾರರನ್ನು ಉದ್ದೇಶಿಸಿ ಮತನಾಡಿದರು. 
ಸದರಿ ನಿರ್ಣಯದಿಂದ ಸಾಂಪ್ರದಾಯ ಕೃಷಿ ಪದ್ದತಿಗೆ ಬಲವಾಗಿ ಪೆಟ್ಟು ಬೀಳುವುದರಲ್ಲಿ ಯಾವುದೇ ಸಂಶಯವಿಲ್ಲ. ಹಸು, ಎತ್ತಗಳನ್ನು ಕಸಾಯಿಖಾನೆಗೆ ಕಳುಹಿಸುವ ಈ ನಿರ್ಣಯದಿಂದ ರೈತರು ಹೆಚ್ಚು ರಾಸಾಯನಿಕ ಗೊಬ್ಬರವನ್ನು ಅವಲಂಭಿಸುವಂತೆ ಮಾಡುತ್ತದೆ. ಒಂದಡೆ ಹಾಲು ಉತ್ಪಾದನೆ ಉತ್ತೇಜನ ನೀಡುವ ಯೋಜನೆಗೆ ಜಾರಿಗೆ ತರುವ ಸರಕಾರ ಅದೇ ಹಾಲು ಕೊಡುವ ಭೂಗಳನ್ನು ಕಸಾಯಿಖಾನೆಗೆ ಕಳುಹಿಸುವುದು ನಿರ್ಧಾರ ಕೈಗೊಂಡಿರುವುದು ಅತ್ಯಂತ ನೋವಿನ ಸಂಗತಿ ಎಂದು ವಿಷಾಧ ವ್ಯಕ್ತಪಡಿಸಿದರು. ಅಲ್ಲದೇ ಕಾಂಗ್ರೆಸ್ ಸರಕಾರವು ರಾಜ್ಯದ ವಿವಿಧ ಎ ಗ್ರೇಡ್ ದೇವಸ್ಥಾನ ಸಮಿತಿಗಳಿಗೆ ನೇಮಕವಾಗಿದ್ದ ದೇವಸ್ಥಾನ ವ್ಯವಸ್ಥಾಪನ ಮಂಡಳಿಯ ಸದಸ್ಯರನ್ನು ರದ್ದುಗೊಳಿಸಿ, ದೇವಸ್ಥಾನಗಳನ್ನು ಕಾಂಗ್ರೆಸ್ಸಿಕರಣ ಮಾಡಲು ಮುಂದಾಗಿರುವುದು ಖಂಡನಿಯ ಎಂದು ಮಾತನಾಡಿದರು. ಕುಷ್ಟಗಿಯ ಶಾಸಕರಾದ ದೊಡ್ಡನಗೌಡ ಪಾಟೀಲ ಮಾತನಾಡಿ ಗೋವುಗಳು ಭಾರತೀಯ ಕೃಷಿಗೆ ಬೆನ್ನೆಲುಬಾಗಿವೆ, ಅವುಗಳ ರಕ್ಷಣೆ ಪ್ರತಿಯೊಬ್ಬ ಭಾರತೀಯನ ಆಧ್ಯ ಕರ್ತವ್ಯವಾಗಿದೆ. ಅಲ್ಲದೇ ಧಾರ್ಮಿಕ ಕ್ಷೇತ್ರಗಳಲ್ಲಿ ರಾಜಕಾರಣ ಮಾಡುವುದು ಶೋಭೆ ತರುವಂತದ್ದಲ್ಲದು ಎಂದು ಹೇಳಿದರು. 
ಮಾಜಿ ಶಾಸಕರಾದ ಪರಣ್ಣ ಮನವಳ್ಳಿ, ನಗರಸಭೆ ಸದಸ್ಯರಾದ ಅಪ್ಪಣ್ಣ ಪದಕಿ ಮಾತನಾಡಿದರು. 
ಈ ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ನರಸಿಂಗರಾವ್ ಕುಲಕರ್ಣಿ ರಾಜೂ ಬಾಕಳೆ, ಮಂಡಲದ ಅಧ್ಯಕ್ಷರಾದ ಚಂದ್ರಶೇಖರ ಕವಲೂರು, ಸಿದ್ದರಾಮಸ್ವಾಮಿ ಹೇರೂರು, ಕೋಟ್ರೇಶ ಶೇಡ್ಮಿ, ಶಂಕ್ರಪ್ಪ ಪೊಳಟಗಿ, ಮುಖಂಡರಾದ ರಾಘವೇಂದ್ರ. ಪಾನಘಂಟಿ, ಚನ್ನವೀರಗೌಡ ಪಾಟೀಲ, ಸಂಗಮೇಶ ಡಂಬಳ, ಹಾಲೇಶ ಕಂದಾರಿ, ತೋಟಪ್ಪ ಮೇಟಿ, ಸದಾಶೀವಯ್ಯ ಹಿರೇಮಠ ಮಾರೇಶ ಮುಷ್ಠುರು, ಉಮೇಶ ಸಜ್ಜನ , ಶಿವಪ್ಪ  ಮುತ್ತಾಳ, ಫಕೀರಪ್ಪ ಆರೇರ, ಹೇಮಲತಾ ನಾಯ್ಕ, ಸುಜಾತ ಗೋರ್ಲೆಕೊಪ್ಪ, ಹೇಮಕ್ಕ ಮಂಗಳೂರು, ಮಧುರಕೈ, ಅಕ್ಕಮ್ಮ, ವೇದಾ ಜೋಷಿ, ಮಹೇಶ ಅಂಗಡಿ, ಮಂಜುನಾಥ ಪಾಟೀಲ, ದೇವಪ್ಪ ಗೂಡ್ಲಾನೂರು, ಪರಮಾನಂದ ಯಾಳಗಿ , ಫಕೀರೆಶ ಕುರ್ತಕೋಟಿ, ಎಲ್ಲಾ ನಗರಸಭಾ, ತಾಲೂಕ ಪಂಚಾಯತಿ, ಜಿಲ್ಲಾ ಮತ್ತು ಮಂಡಳ ಸದಸ್ಯರು ಭಾಗವಹಿಸಿದ್ದರೆಂದು ಬಿ ಜೆ ಪಿ ಜಿಲ್ಲಾ ವಕ್ತಾರರಾದ ಚಂದ್ರಶೇಖರಗೌಡ ಜಿ ಪಾಟೀಲ ಹಲಗೇರಿ ತಿಳಿಸಿದ್ದಾರೆ.  
Please follow and like us:
error

Related posts

Leave a Comment