ಜಾನಪದ ಕಲಾವಿದರ ಮಾಸಾಶನ ಸಂದರ್ಶನ ಮುಂದೂಡಿಕೆ.

ಕೊಪ್ಪಳ ಫೆ. ೨೪ (ಕ
ವಾ) ಕರ್ನಾಟಕ ಜಾನಪದ ಅಕಾಡೆಮಿಯಿಂದ ಕಲಬುರಗಿ ವಿಭಾಗದ ಕಲಾವಿದರ ಮಾಸಾಶನ ಸಂಬಂಧ
ರಾಯಚೂರಿನಲ್ಲಿ ಮಾ. ೦೩ ರಂದು ನಡೆಸಲು ಉದ್ದೇಶಿಸಲಾಗಿದ್ದ ಸಂದರ್ಶನವನ್ನು
ಮುಂದೂಡಲಾಗಿದೆ.
     ಕರ್ನಾಟಕ ಜಾನಪದ ಅಕಾಡೆಮಿಯಿಂದ ಸಹಾಯಕ ನಿರ್ದೇಶಕರ ಕಚೇರಿ,
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ರಂಗಮಂದಿರ ಹಿಂಭಾಗ, ಕನ್ನಡ ಭವನ, ಸ್ಟೇಷನ್
ರಸ್ತೆ, ರಾಯಚೂರು ಇಲ್ಲಿ ಕಲಬುರಗಿ ವಿಭಾಗದ ಜಿಲ್ಲೆಗಳಾದ ಕೊಪ್ಪಳ, ಬಳ್ಳಾರಿ, ಯಾದಗಿರಿ,
ರಾಯಚೂರು, ಕಲಬುರಗಿ ಜಿಲ್ಲೆಯ ಜಾನಪದ ಕಲಾವಿದರ ಮಾಸಾಶನ ಸಂದರ್ಶನ ಆಯೋಜಿಸಲಾಗಿತ್ತು. 
ಅನಿವಾರ್ಯ ಕಾರಣಗಳಿಂದ ಮಾಸಾಶನ ಸಂದರ್ಶನ ದಿನಾಂಕವನ್ನು ತಾತ್ಕಾಲಿಕವಾಗಿ
ಮುಂದೂಡಲಾಗಿದ್ದು, ಮುಂದಿನ ಸಂದರ್ಶನ ದಿನಾಂಕವನ್ನು ಶೀಘ್ರ ಪ್ರಕಟಿಸಲಾಗುವುದು ಎಂದು
ಅಕಾಡೆಮಿಯ ರಿಜಿಸ್ಟ್ರಾರ್ ಎಸ್.ಹೆಚ್. ಶಿವರುದ್ರಪ್ಪ ತಿಳಿಸಿದ್ದಾರೆ.
Please follow and like us:
error