fbpx

ಕೌಟುಂಬಿಕ ದೌರ್ಜನ್ಯ ವನ್ನು ತಡಗಟ್ಟಲಿಕ್ಕೆ ಆರ್ಥಿಕವಾಗಿ ಸಬಲರಾಗಲು ಮಹಿಳೆಯರಿಗೆ ಕರೆ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕೊಪ್ಪಳ, ಜಿಲ್ಲಾ ವಕೀಲರ ಸಂಘ ಕೊಪ್ಪಳ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಅಧಿನಿಯಮ ಕುರಿತು ತಾಲೂಕಾ ಮಟ್ಟದ ಸಂರಕ್ಷಣಾಧಿಕಾರಿಗಳಿಗೆ ೨ ದಿನಗಳ ಕಾನೂನು ಅರಿವು ಮೂಡಿಸುವ ಕಾರ್ಯಾಗಾರ.
                            ಈ ಕಾರ್ಯಾಗಾರದಲ್ಲಿ ೨ ನೇ ದಿನದ ಕಾರ್ಯಾಗಾರದಲ್ಲಿ ಅಬ್ದುಲ್ ನಜೀರಸಾಬ್ ರಾಜ್ಯ ಗ್ರಾಮೀಣಾ ಬೀವೃದ್ಧಿ ಸಂಸ್ಥೆ ಮೈಸೂರನ ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾದ ಹೆಚ್. ಎಸ್. ಹೊನ್ನುಂಚಿ ಅವರು ಮಾತನಾಡುತ್ತಾ, ಕೌಟಂಬಿಕ ಹಿಂಸೆಯಿಂದ ದೌರ್ಜನ್ಯ ಕ್ಕೊಳಗಾದ ಮಹಿಳೆಯರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಕಾರ್ಯಕ್ರಮಗಳಾದ ಎನ್. ಆರ್.ಇ.ಜಿ, ನಿರ್ಮಲ ಭಾರತ ಅಭಿಯಾನ, ಮತ್ತು ಎನ್. ಆರ್.ಎಲ್.ಎಂ, ಸಂಜೀವಿನಿ, ಹಾಗೂ ರಾಜೀವ್‌ಗಾಂಧಿ ಚೌತನ್ಯ ಯೋಜನೆ ಕೇಂದ್ರ ಹಾಗೂ ರಾಜ್ಯ ಸರಕಾರದ ಪುರಸ್ಕೃತ ಕಾರ್ಯಕ್ರಮಗಳು ಹಾಗೂ ಮಹಿಳೆಯರು ಸ್ವಾವಲಂಬಿಯಾಗಿ ಜೀವನ ನಡೆಸುವುದರ ಮೂಲಕ ಈ ಕೌಟುಂಬಿಕ ದೌರ್ಜನ್ಯ ವನ್ನು ತಡಗಟ್ಟಲಿಕ್ಕೆ ಆರ್ಥಿಕವಾಗಿ ಸಭಲರಾಗಲು ನೊಂದ ಮಹಿಳೆಯರಿಗೆ ಕರೆ ನೀಡಿದರು.
                        ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಲಾಖೆಯ ಉಪನಿರ್ದೇಶಕರಾದ ವಸಂತ ಪ್ರೇಮ, ಹಾಗೂ ವಕೀಲರಾದ ಹನಮಂತರಾವ್, ಶಿವಲಿಲಾ ಹೊನ್ನೂರ, ತಾಲೂಕಾ ವೈದ್ಯಾಧಿಕಾರಿಗಳಾದ ಪ್ರಶಾಂತ ಬಾಬೂ, ತಾಲೂಕಾ ಸಂರಕ್ಷಣಾ ಅಧಿಕಾರಿಗಳು, ಸೇವಾ ಸಂಸ್ಥೆಯ ಪದಾಧಿಕಾರಿಗಳು, ಸಾಂತ್ವಾನ ಸ್ವಾದಾರ ಕೇಂದ್ರಗಳ ಸಮಾಲೋಚಕರು, ಪೊಲೀಸ್ ಇಲಾಖೆ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಎಂದು ಪತ್ರಿಕಾ ಪ್ರಕಟಣೆಗೆ ಹೆಚ್. ಎಸ್. ಹೊನ್ನುಂಚಿ ತಿಳಿಸಿದ್ದಾರೆ. 
Please follow and like us:
error

Leave a Reply

error: Content is protected !!