You are here
Home > Koppal News > ಎಂ.ಎಸ್.ಐ.ಎಲ್. ಮದ್ಯದಂಗಡಿಗೆ ಬೀಗ ಖಂಡನೆ.

ಎಂ.ಎಸ್.ಐ.ಎಲ್. ಮದ್ಯದಂಗಡಿಗೆ ಬೀಗ ಖಂಡನೆ.

ಗಂಗಾವತಿ ಹೊರವಲಯದಲ್ಲಿರುವ ಎಂ.ಎಸ್.ಐ.ಎಲ್. ಅಂಗಡಿಯನ್ನು ಸ್ಥಳಾಂತರಕ್ಕೆ ಒತ್ತಾಯಿಸುತ್ತಿರುವ ಜಿಲ್ಲಾಡಳಿತ ಮತ್ತು ಅಬಕಾರಿ ಇಲಾಖೆ ಮಧ್ಯಮಾಫಿಯಾಗೆ ಒತ್ತು ಬಿದ್ದಿದೆ ಎಂದು ಸಿಪಿಐಎಂಎಲ್ ಲಿಬರೇಷನ್ ರಾಜ್ಯ ಕಾರ್ಯದರ್ಶಿ ಭಾರದ್ವಾಜ್ ಪ್ರಕಟಣೆಯಲ್ಲಿ ಖಂಡಿಸಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಹಗಲಿರುಳು ನಡೆಯುತ್ತಿರುವ ಮರಳು ಲೂಟಿ, ಮರಮ್ ಲೂಟಿ ಅಕ್ರಮ ಮದ್ಯದ ಬೆಲ್ಟ್ ಅಂಗಡಿಗಳನ್ನು ನಿಯಂತ್ರಿಸಲಾಗದ ಜಿಲ್ಲಾಧಿಕಾರಿಗಳು ಮಧ್ಯದ ಮಾಫಿಯಾದ ನಕಲಿ ಮನವಿಗಳಿಗೆ ಸ್ಪಂದಿಸಿ ಹೊಸಳ್ಳಿ ರಸ್ತೆಯಲ್ಲಿರುವ ಎಂ.ಎಸ್.ಐ.ಎಲ್.ನ್ನು ಸ್ಥಳಾಂತರಿಸಲು ನೋಟಿಸ್ ನೀಡಿ ಬೀಗ ಹಾಕಿರುವುದು ಕೊಪ್ಪಳ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಇಲ್ಲದಂತಾಗಿದೆ. ಸಿಎಲ್-೭, ಸಿಎಲ್-೨, ಸಿಎಲ್-೯ ಅಂಗಡಿಗಳಲ್ಲಿ ಮಧ್ಯಮಾರಾಟ ಕನಿಷ್ಠ ದರಕ್ಕೆ ಮಾರದೇ ಒಂದು ಬಾಟಲಿಗೆ ರೂ. ೨೦ ರಿಂದ ೫೦ ರವರೆಗೆ ಹೆಚ್ಚಿನ ದರದಲ್ಲಿ ಮಾರುತ್ತಿದ್ದರೂ ಸಾರ್ವಜನಿಕರು ಅನೇಕ ದೂರುಗಳನ್ನು ನೀಡಿದರೂ ಕಣ್ಣು ಮುಚ್ಚಿ ಕುಳಿತ ಅಬಕಾರಿ ಇಲಾಖೆ ಮಧ್ಯ ಮಾಫಿಯಾ ಪ್ರೇರಿತ ದೂರುಗಳಿಗೆ ಮಾನ್ಯತೆ ಕೊಟ್ಟು ಮಧ್ಯದಂಗಡಿಗಳನ್ನು ಬಂದ್ ಮಾಡಿಸಿದ್ದು ಕಾನೂನಿನ ದ್ರೋಹವಾಗಿದೆ. ಜಿಲ್ಲಾಧಿಕಾರಿಗಳು ಕೂಡಲೇ ಮಧ್ಯದ ಮಾಫಿಯಾಗೆ ಕಡಿವಾಣ ಹಾಕಿ ಎಂ.ಎಸ್.ಐ.ಎಲ್. ಅಂಗಡಿ ಸ್ಥಳಾಂತರಿಸುವುದಕ್ಕಾಗಿ ದೂರು ನೀಡಿದವರ ಹಿನ್ನೆಲೆ ವಿಚಾರಿಸಬೇಕು. ಸರಕಾರಿ ಮಧ್ಯದಂಗಡಿ ಕೂಡಲೇ ಪ್ರಾರಂಭಿಸದಿದ್ದಲ್ಲಿ ಬಡಜನರು ಬೃಹತ್ ಸಂಖ್ಯೆಯಲ್ಲಿ ಗಂಗಾವತಿ ಅಬಕಾರಿ ಕಾರ್ಯಾಲಯವನ್ನು ಮುತ್ತಿಗೆಹಾಕಿ ಸರಕಾರಿ ಮಧ್ಯದಂಗಡಿ ಪ್ರಾರಂಭವಾಗುವವರೆಗೆ ಧರಣಿ ನಡೆಸಲಿದ್ದಾರೆಂದು ಎಚ್ಚರಿಸಿದ್ದಾರೆ.

Leave a Reply

Top