ಎರಡನೇ ಬಾರಿಗೆ ಪ್ರಾಚಾರ್ಯರಾಗಿ ಅಧಿಕಾರ ಸ್ವೀಕರಿಸಿದರು – ತಿಮ್ಮಾರೆಡ್ಡಿ.

ಕೊಪ್ಪಳ-20- ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರದ ಪ್ರಾಧ್ಯಪಕರಾಗಿರುವ ಪ್ರೊ ತಿಮ್ಮಾರೆಡ್ಡಿ ಮೇಟಿ ಎರಡನೇ ಬಾರಿಗೆ ಪ್ರಾಚಾರ್ಯರಾಗಿ ಅಧಿಕಾರ ಸ್ವೀಕರಿಸಿದರು. ಮೊದಲಿನ ಪ್ರಾಚಾರ್ಯ ಪ್ರೊ ಶಿವಪ್ಪ ಶಾಂತಪ್ಪನವರು ಬೆಂಗಳೂರಿಗೆ ವರ್ಗವಾದುದರಿಂದ ಆ ಸ್ಥಾನಕ್ಕೆ  ಕಾಲೇಜು ಶಿಕ್ಷಣ ಇಲಾಖೆಯ ಆದೇಶದ ಮೇರೆಗೆ ಪ್ರಾಚಾರ್ಯರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಹಿರಿಯರು ಹಾಗೂ ಅನುಭವಿಗಳು ಆಗಿರುವ  ತಿಮ್ಮಾರೆಡ್ಡಿ ಮೇಟಿಯವರಿಗೆ ಅತಿಥಿ ಉಪನ್ಯಾಸಕ ಬಳಗವು ಹರ್ಷ ವ್ಯಕ್ತಪಡಿಸಿದೆ.

Please follow and like us:
error