ಮಾದಿನೂರು ಗ್ರಾಮದಲ್ಲಿ ಸೈಕಲ್ ವಿತರಣ ಸಮಾರಂಭ

೨೪-೧೧-೨೦೧೪ ರಂದು ೨೦೧೪-೧೫ ನೇ ಸಾಲಿನ ೮ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿದ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀಮತಿ ಗಿರಿಜಾ ಸುರೇಶ ಬೃಂಗಿ ಅಧ್ಯಕ್ಷರು ಎಸ್.ಡಿ.ಎಮ್ ಸಿ. ಮಾದಿನೂರು. ಮುಖ್ಯ ಅತಿಥಿಗಳು ಅಮರೇಶ ಉಪಲಾಪುರ ತಾಲೂಕ ಪಂಚಾಯತ ಸದಸ್ಯರು ಕಿನ್ನಾಳ ಇವರು ಸೈಕಲಗಳ ಉಪಯೋಗ ಹಾಗೂ ಸರ್ಕಾರದ ಸೌಲಭ್ಯಗಳ ಕುರಿತು ಹೇಳಿದರು. ಪ್ರಾಸ್ತವಿಕವಾಗಿ ನಾರಾಯಣಪ್ಪ ಚಿತ್ರಗಾರ ಮುಖ್ಯಗುರುಗಳು ಇವರು ಮಕ್ಕಳು ಸೈಕಲಗಳನ್ನು ಬಳಸುವುದರ ಬಗ್ಗೆ ತಿಳಿಸಿದರು. ಈ ಸಮಾರಂಭದಲ್ಲಿ ಅತಿಥಿಗಳಾಗಿ ಎಸ್.ಡಿ.ಎಮ್ ಸಿ. ಉಪಾಧ್ಯಕ್ಷರಾದ ಚನ್ನಕೇಶವ ನಂದಾಪೂರ ಸದಸ್ಯರುಗಳಾದ ರೇಣುಕಪ್ಪ ಕವಲೂರು, ಹನುಮಂತಪ್ಪ ಗುತ್ತೂರು, ನಿಂಗಮ್ಮ ನಂದಿಕೊಲ, ಕುಸುಮಾ ಕಮ್ಮಾರ, ಕಾಶೆವ್ವ ಕಡೆಮನಿ, ಗ್ರಾ.ಪಂ ಸದಸ್ಯರಾದ ರಾಮಣ್ಣ ಗಡ್ಡದ ವಿ.ಎಸ್.ಎಸ್.ಎನ್. ಕಿನ್ನಾಳ ಉಪಾಧ್ಯಕ್ಷರಾದ ಹನುಮಂತಪ್ಪ ಆವಣ್ಣಿ ಭಾಗವಹಿಸಿದ್ದರು ಹಾಗೂ ಊರಿನ ಹಿರಿಯರಾದ ದೇವೇಂದ್ರಗೌಡ ಮಾ||ಪಾ||, ನಾಗಪ್ಪ ಎಲಿಗಾರ, ಬಸವರಾಜ ಚಪ್ಪೆರದ, ಅಂದಪ್ಪ ಪಟ್ಟಣಶೆಟ್ಟಿ, ಗವಿಸಿದ್ದಪ್ಪ ಕವಲೂರು, ಕಿನ್ನಾಳದ ಅಶೋಕ ಮಹೆಂದ್ರಕರ್, ಮಂಜು, ಹಾಗೂ ಊರಿನ ಸಾರ್ವಜನಿಕರು ಈ ಕಾಯ್ಕ್ರಮದಲ್ಲಿ ಭಾಗವಹಿಸಿದ್ದರು.

      ಕಾರ್ಯಕ್ರಮದ ನಿರೋಪಣೆಯನ್ನು ದೇವಪ್ಪ ಆರೆರ್ ಶಿಕ್ಷಕರು ನಿರೂಪಿಸಿದರು, ಸ್ವಾಗತವನ್ನು ಹಾಲಪ್ಪ ಶಿಕ್ಷಕರು ಮಾಡಿದರು, ಕೊನೆಯಲ್ಲಿ ವಂದನಾರ್ಪಣೆಯನ್ನು ಮಂಜುನಾಥ ದೈ.ಶಿ ಮಾಡಿದರು ಹಾಗೂ ಉಳಿದ ಎಲ್ಲಾ ಶಿಕ್ಷಕ/ಶಿಕ್ಷಕಿಯರು ಪಾಲ್ಗೊಂಡಿದ್ದರು.

Leave a Reply