fbpx

ನಳ ಹಾಗೂ ಒಳಚರಂಡಿ ಸಂಪರ್ಕ ಹಾಗೂ ತೆರಿಗೆ ಸಂಗ್ರಹಣೆ ಬಗ್ಗೆ ಕಾರ್ಯಕ್ರಮ

ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಉತ್ತರ ಕರ್ನಾಟಕ ನಗರ ವಲಯ ಬಂಡವಾಳ ಹೂಡಿಕೆ ಕಾರ್ಯಕ್ರಮದ ಪ್ರಯುಕ್ತ ಅನುಸ್ಠಾನ ಸಂಸ್ಥೆಯಾದ ಶ್ರೀಗುರು ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ ಕೊಪ್ಪಳ ಹಾಗೂ ನಗರ ಸಭೆ ಸಂಯುಕ್ತ ಆಶ್ರಯದಲ್ಲಿ ವಾರ್ಡ ನಂ ೧ ಮೈಬೂಬ್ ನಗರದಲ್ಲಿ ನಳ ಹಾಗೂ ಒಳಚರಂಡಿ ಸಂಪರ್ಕ ಹಾಗೂ ತೆರಿಗೆ ಸಂಗ್ರಹಣೆ ಬಗ್ಗೆ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಲತಾ ವೀರಣ್ಣ ಸೊಂಡೂರ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಹಿರಿಯರಾದ ವೀರಣ್ಣ ತೊಂಡಿಹಾಳ, ಮಹಮ್ಮದಸಾಬ್, ಹಾಶಿಮ್‌ಸಾಬ ಕವಲೂರ, ಬಸವರಾಜ ಗಾಳಿ, ನಾಗಪ್ಪ ಬಂಡಾರಿಯವರು, ಹಾಗೂ ಯೋಜನಾದಿಕಾರಿಗಳಾದ   ವಜೀರಸಾಬ್ ತಳಕಲ್, ಸಂಯೋಜಕರಾದ ಮೇಹರಾಜ ಮನಿಯಾರ್, ಅತಿಥಿಗಳಾಗಿ ಭಾಗವಹಿಸಿದ್ದರು. ಪ್ರಸ್ತಾವಿಕವಾಗಿ ಯೋಜನಾದಿಕಾರಿಗಳಾದ ವಜೀರಸಾಬ್ ತಳಕಲ್ ಯೋಜನೆಯ ಉದ್ದೆಶ ಕುರಿತು ಮಾತನಾಡುತ್ತಾ, ಸಾರ್ವಜನಿಕರು ಪ್ರತಿ ಮನೆಮನೆಗೆ ವೈಯಕ್ತಿಕ ನಳದ ಸಂಪರ್ಕ ಪಡೆದುಕೊಳ್ಳಬೇಕು, ಬಳಸಿದ ನೀರು ಹಾಗೂ ಶೌಚಾಲಯದ ನೀರು ಒಳಚರಂಡಿಗೆ ಸಂಪರ್ಕವನ್ನು ಕಲ್ಪಿಸಿಕೊಳ್ಳಬೇಕೆಂದು ತಿಳಿಸಿದರು, ನಂತರ ನಗರಸಭೆಗೆ ಕಾಲ ಕಾಲಕ್ಕೆ ತೆರಿಗೆಯನ್ನು ಕಟ್ಟಬೇಕು. ಇದರಿಂದ ಇನ್ನು ಹೆಚ್ಚಿನ ನಗರದ ಅಭಿವೃದ್ಧಿಗೆ ಸಹಾಯವಾಗುತ್ತದೆ ಎಂದು ತಿಳಿಸಿದರು, ಮತ್ತು ಮನೆಯ ಕಸ ಅಂಗಳದ ಕವನ್ನು ಗಟಾರಕ್ಕೆ ಹಾಕಲಾರದೆ, ಕಸ ಸಂಗ್ರಹಣೆಗೆ ಬರುವ ವಾಹನದಲ್ಲಿ ಹಾಕಬೇಕೆಂದು ಮನವಿ ಮಾಡಿದರು. ಮಹಮ್ಮದಸಾಬ್ ಮಾತನಾಡಿ, ನೀರು ಸರಬರಾಜಿಗಾಗಿ ಹೊಸ ಪೈಪುಗಳನ್ನು ಅಳವಡಿಸಬೇಕು ಜೊತೆಗೆ ಬೀದಿ ದೀಪಗಳನ್ನು ಹಾಕಿಕೊಡಬೇಕೆಂದು ಅಧ್ಯಕ್ಷರಿಗೆ ಮನವಿ ಮಾಡಿದರು. ಸಾರ್ವಜನಿಕ ಮಹಿಳಾ ಶೌಚಾಲಯಕ್ಕೆ ನೀರಿನ ಸಂಪರ್ಕ ಕಲ್ಪಿಸಬೇಕೆಂದರು. ಅಧ್ಯಕ್ಷರಾದ ಲತಾ ವೀರಣ್ಣ ಸೊಂಡೂರ  ಮಾತನಾಡಿ, ಈ ವಾರ್ಡಿಗೆ ಸಂಬಂದ ಪಟ್ಟಂತೆ ಇನ್ನು ಕೆಲವು ಕೆಲಸಗಳನ್ನು ಮಾಡಬೇಕಾಗಿದೆ ಅವುಗಳನ್ನು ತೀರ್ವಗತಿಯಲ್ಲಿ ಮಾಡಿಕೊಡುತ್ತೆವೆ ಎಂದು ಭರವಸೆ ನೀಡಿದರು. ಜೊತೆಗೆ ಜನರು ಸಹಕಾರ ಕೊಡಬೇಕೆಂದು ಮನವಿ ಮಾಡಿದರು.

ಪ್ರಾರ್ಥನೆಯನ್ನು ಶ್ರೀಮತಿ ರತ್ನಮ್ಮ ಬಾಣದ ನಡೆಸಿಕೊಟ್ಟರು. ಸಮುದಾಯ ಸಂಘಟಿಕರಾದ ಶಾಂತಕುಮಾರ ಸೊಂಪೂರ ನಿರೂಪಿಸಿದರು, ಕುಮಾರಿ ಮಾಲನ್ ಬಿ ವಂದಿಸಿದರು
Please follow and like us:
error

Leave a Reply

error: Content is protected !!