ಪ್ರಶಸ್ತಿಗಾಗಿ ಮಹಿಳಾ ಬರಹಗಾರರಿಂದ ಪುಸ್ತಕಗಳ ಆಹ್ವಾನ

ಕೊಪ್ಪಳ,: ಡಾ|| ಶಾಂತರಸ ಹೆಂಬೇರಾಳು ಅವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿರುವ ದತ್ತಿ ನಿಧಿಯಡಿ ಪ್ರಶಸ್ತಿ ನೀಡಲು ೨೦೧೦-೧೧ನೇ ಸಾಲಿಗಾಗಿ ಅರ್ಹ ಮಹಿಳಾ ಬರಹಗಾರರಿಂದ ಕಾದಂಬರಿ ಪ್ರಕಾರದ ಪುಸ್ತಕಗಳನ್ನು ಆಹ್ವಾನಿಸಲಾಗಿದೆ. 
ಈ ಪ್ರಶಸ್ತಿಯು ೫೦೦೦ ರೂ.ಗಳ ನಗದನ್ನು ಒಳಗೊಂಡಿರುತ್ತದೆ. ಪ್ರಶಸ್ತಿಗಾಗಿ ಕಳುಹಿಸುವ ಕಾದಂಬರಿ ಪ್ರಕಾರದ ಪುಸ್ತಕವು ೨೦೦೮ನೇ ಜನೇವರಿಯಿಂದ ೨೦೧೧ನೇ ಡಿಸೆಂಬರ್‌ವರೆಗಿನ ಅವಧಿಯಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಗೊಂಡಿದ್ದು, ಅನುವಾದ ಮಾಡಿರುವ ಪುಸ್ತಕವಾಗಿರಬೇಕು, ಸ್ಪರ್ಧೆಗೆ ಬಂದ ಪುಸ್ತಕಗಳನ್ನು ಹಿಂದಿರುಗಿಸಲಾಗುವುದಿಲ್ಲ, ಒಂದಕ್ಕಿಂತ ಹೆಚ್ಚು ಕೃತಿಗಳು ಅತ್ಯುತ್ತಮವೆಂದು ಪರಿಗಣಿತವಾದರೆ ಬಹುಮಾನದ ಹಣವನ್ನು ಹಂಚಿ ವಿತರಿಸುವ ಹಕ್ಕು ಪರಿಷತ್ತಿಗಿದೆ. ಆಸಕ್ತ ಮಹಿಳೆಯರು ಜುಲೈ ೨೦ ರೊಳಗಾಗಿ ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು ಇವರಿಗೆ ತಾವು ರಚಿಸಿದ ಪುಸ್ತಕಗಳ ೩ ಪ್ರತಿಗಳನ್ನು ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: ೦೮೦-೨೬೬೨೩೫೮೪ ನ್ನು ಸಂಪರ್ಕಿಸಬಹುದಾಗಿದೆ 
Please follow and like us:
error