ಕುಕನೂರು ವೃದ್ಧಾಶ್ರಮದಲ್ಲಿ ಜ. ೩೦ ರಂದು ಸಾಂಸ್ಕೃತಿಕ ಕಾರ್ಯಕ್ರಮ.

ಕೊಪ್ಪಳ
ಜ. ೨೯ (ಕ ವಾ) ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಮಹಿಳಾ ಮತ್ತು ಮಕ್ಕಳ
ಅಬಿವೃದ್ಧಿ ಇಲಾಖೆ, ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಜ. ೩೦ ರಂದು
ಸಂಜೆ ೦೪ ಗಂಟೆಗೆ ಕುಕನೂರಿನ ವಿದ್ಯಾನಂದ ಗುರುಕುಲ ವೃದ್ಧಾಶ್ರಮದಲ್ಲಿ ಸಾಂಸ್ಕೃತಿಕ
ಕಾರ್ಯಕ್ರಮ ಹಮ್ಮಿಕೊಂಡಿದೆ.
     ಕಾರ್ಯಕ್ರಮದ ಅಂಗವಾಗಿ ಅಂದು ವಿದ್ಯಾನಂದ
ಗುರುಕುಲ ವೃದ್ಧಾಶ್ರಮದಲ್ಲಿ ಭಾಗ್ಯನಗರದ ಎ. ಚಂದ್ರಕಾ ಮತ್ತು ತಂಡದಿಂದ ಭಕ್ತಿ ಗೀತೆ
ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ
ಟಿ. ಕೊಟ್ರಪ್ಪ ಅವರು ತಿಳಿಸಿದ್ದಾರೆ.
Please follow and like us:
error