ನಗರ ಸಭೆ ಉಪಾಧ್ಯಕ್ಷರಿಂದ ಕಾಮಗಾರಿ ವಿಕ್ಷಣೆ

ಕೊಪ್ಪಳ ಮೇ, ೦೮: ನಗರದ ೩೦ ನೇ ವಾರ್ಡನ ದೇವರಾಜ ಕಾಲೋನಿಗೆ ಹೋಗುವ ಮುಖ್ಯ ರಸ್ತೆಯ ಚರಂಡಿ ಕಾಮಗಾರಿಯು ೨೦೧೦-೧೧ ನೇ ಸಾಲಿನ ಎಸ್.ಎಫ್.ಸಿ ಅನುದಾನ ಅಡಿಯಲ್ಲಿ ೫ ಲಕ್ಷ ರೂ. ಗಳ ಚರಂಡಿ ಕಾಮಗಾರಿಯು ಭಾರದಿಂದ ಸಾಗುತ್ತಿದ್ದು ಈ ಕಾಮಗಾರಿ ವೀಕ್ಷಣೆ ಮಾಡಲು ನಗರ ಸಭೆ ಉಪಾಧ್ಯಕ್ಷರಾದ ಅಮ್ಜದ್ ಪಟೇಲ್ ಇಂದು ಮಧ್ಹಾನ್ಯ ೧.೦೦ ಘಂಟೆಗೆ ಭೇಟೆ ನಿಡಿ ಚರಂಡಿ ಕಾಮಗಾರಿಯನ್ನು ವಿಕ್ಷಣೆ ಮಾಡಿದರು ಈ ಕಾಮಗಾರಿಯು ತೀವ್ರಗತಿಯಲ್ಲಿ ಹಾಗೂ ಗುಣಮಟ್ಟದ ಹಾಗೂ ನಿಗಧಿತ ಅವಧಿಯೊಳಗೆ ಕಾಮಗಾರಿಯನ್ನು ಮಾಡಲು ಸಂಬಂಧ ಪಟ್ಟ ಗುತ್ತಿಗೆದಾರರಿಗೆ ಆದೇಶ ಮಾಡಿದರು. ಈ ಸಂದಂರ್ಭದಲ್ಲಿ ನಗರ ಸಭ ಸ್ಥಾಯಿ ಸಮೀತಿಯ ಮಾಜಿ ಅಧ್ಯಕ್ಷರಾದ ಮಹೆಬೂಬ್ ಹುಸೇನ ನಾಲಬಂದ್ ಅಂಜುಮನ್ ಕಮೀಟಿಯ ಗೌರವ ಅಧ್ಯಕ್ಷರಾದ ಹುಸೇನ ಪೀರಾ ಮುಜಾವರ್, ಗುತ್ತಿಗೆದಾರರಾದ ಬಸವರಾಜ ಭೂವಿ ಇನ್ನೂ ಇತರರು ಉಪಸ್ಥಿತರಿದ್ದರು. 
Please follow and like us:
error