ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್ ಮುಂದೂಡಿಕೆ

  ಪ್ರಸಕ್ತ ಸಾಲಿನ ಶಿಕ್ಷಕರ ಘಟಕದ ಒಳಗಿನ ವರ್ಗಾವಣೆ ಮತ್ತು ಅಂತರ ಘಟಕ ವರ್ಗಾವಣೆ  ಕೌನ್ಸಿಲಿಂಗ್ ದಿನಾಂಕವನ್ನು ಮುಂದೂಡಲಾಗಿದೆ.
  ಘಟಕದ ಒಳಗಿನ ವರ್ಗಾವಣೆಯನ್ನು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆಯಾ ಜಿಲ್ಲೆಯ ಉಪನಿರ್ದೇಶಕರು ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಆಯಾ ವಿಭಾಗದ ವಿಭಾಗೀಯ ಸಹ ನಿರ್ದೇಶಕರು ಮೇ. ೧೦ ರಿಂದ ೧೫ ರೊಳಗೆ ನಡೆಸುವರು.  ಅಂತರ ಘಟಕ ವರ್ಗಾವಣೆಯನ್ನು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮೇ. ೧೭ ರಿಂದ ೨೪ ರವರೆಗೆ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಮೇ ೨೬ ರಿಂದ ೩೦ ರವರೆಗೆ ಸಂಬಂಧಪಟ್ಟ ನಿರ್ದೇಶಕರು ನಡೆಸುವರು.  ತೀವ್ರತರ ಖಾಯಿಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಶಿಕ್ಷಕರು ಯಾವ ವಿಭಾಗಕ್ಕೆ ಒಳಪಡುತ್ತಾರೋ ಆಯಾ ವಿಭಾಗಮಟ್ಟದಲ್ಲಿ ವೈದ್ಯಕೀಯ ತಪಾಸಣೆಯನ್ನು ಮೇ. ೭ ಮತ್ತು ೮ ರಂದು ನಡೆಸಲಿದ್ದು, ಎಲ್ಲಾ ವೈದ್ಯಕೀಯ ಪ್ರಕರಣಗಳ ಶಿಕ್ಷಕರು ಈ ತಪಾಸಣೆಗೆ ಸೂಕ್ತ ದಾಖಲೆಗಳೊಂದಿಗೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Please follow and like us:
error