ಬಸವಪ್ರಭು ಸ್ವಾಮೀಜಿಯವರ ಮೇಲೆ ಹಲ್ಲೆ ಖಂಡನೆ

 ಬಸವಕಲ್ಯಾಣದಲ್ಲಿ  ಸ್ಥಳೀಯ ಜೆ.ಡಿ.ಎಸ್. ಪಕ್ಷದ ಶಾಸಕರಾದ ಶ್ರೀ ಮಲ್ಲಿಕಾರ್ಜುನ ಖೂಬಾ ಇವರು ಬಸವ ಧರ್ಮ ಪೀಠದ ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರ ಮೇಲೆ ಏಕಾ ಏಕಿ ದಿನಾಂಕ :   ೧೮-೦೧-೨೦೧೪ ರಂದು ಹಲ್ಲೆ ನಡೆಸಿದ್ದು ಖಂಡನೀಯವಾಗಿದೆ. ಅಲ್ಲಿಯ ಸಹಾಯಕ ಆಯುಕ್ತರಾದ ಹೆಪ್ತಾ ರಾಣಿಯವರು ಇದಕ್ಕೆ ಸಾಕ್ಷಿಯಾಗಿದ್ದು ಮೂಕಪ್ರೇಕ್ಷಕರಾಗಿ ಏನೂ ಕ್ರಮ ಜರುಗಿಸದಿರುವುದು ಖಂಡನೀಯ.
ಇಂತಹ ದುರ್ವರ್ತನೆಗೆ ಆಸ್ಪದ ಕೊಡುವ ಆಡಳಿತಾಧಿಕಾರಿಗಳನ್ನು ತಕ್ಷಣವೇ ಅಮಾನತ್ತು ಗೊಳಿಸಬೇಕು ಮತ್ತು ಇಂತಹ ಗುಂಡಾ ವರ್ತನೆಯ ಶಾಸಕರಾದ ಶ್ರೀ ಮಲ್ಲಿಕಾರ್ಜುನ ಖೂಬಾ ಹಾಗೂ ಬಸವ ಉತ್ಸವ ಸಮಿತಿಯ ಪದಾಧಿಕಾರಿಗಳ ಮೇಲೆ ಮೊಕದ್ದಮೆ ಹೂಡಿ ತೀವ್ರ ಕ್ರಮ ಜರುಗಿಸುವಂತೆ ರಾಷ್ಟ್ರೀಯ ಬಸವದಳ, ಲಿಂಗಾಯತ ಧರ್ಮ ಮಹಾಸಭಾ ಮತ್ತು ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣ ಕೊಪ್ಪಳ ಹಾಗೂ ಇನ್ನಿತರ ಸಂಘಟನೆಗಳು ಸರ್ಕಾರವನ್ನು ತೀವ್ರವಾಗಿ ಒತ್ತಾಯಿಸುತ್ತವೆ.
ಇದಕ್ಕೆ ಸರ್ಕಾರವು ತೀವ್ರವಾಗಿ ಸ್ಪಂದಿಸದಿದ್ದಲ್ಲಿ ಈ ಘಟನೆಯ ಕುರಿತು ರಾಜ್ಯಾದ್ಯಂತ ಎಲ್ಲಾ ಸಂಘಟನೆಗಳು ಉಗ್ರ ಹೋರಾಟ ಕೈಗೊಳ್ಳುತ್ತವೆ ಎಂಬ ಅಂಶವನ್ನು ಈ ಮೂಲಕ ತಿಳಿಸುತ್ತೇವೆ ಎಂದು  ಕೆ. ವೀರಣ್ಣ ಲಿಂಗಾಯತ  ಗಣನಾಯಕರು, ಬಸವಧರ್ಮ ಪೀಠ, ಸುಂಕಪ್ಪ ಅಮರಾಪೂರ ಅಧ್ಯಕ್ಷರು, ಲಿಂಗಾಯತಧರ್ಮ ಮಹಾಸಭಾ ಕೊಪ್ಪಳ., ಸತೀಶ ಮಂಗಳೂರು ಅಧ್ಯಕ್ಷರು, ರಾಷ್ಟ್ರೀಯ ಬಸವದಳ ಕೊಪ್ಪಳ, ವೀರಮ್ಮ ಕೊಳ್ಳಿ ಅಧ್ಯಕ್ಷರು, ಕ್ರಾಂತಿಗಂಗೋತ್ರಿ ಅಕ್ಕನಾಗಲಾಂಬಿಕಾ  ಮಹಿಳಾ ಗಣ, ಕೊಪ್ಪಳ. ಇವರು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ. 

Leave a Reply