ಉದ್ಯೋಗ ಪಡೆದು ಸ್ವಾವಲಂಬಿ ಬದುಕು ಪ್ರಾರಂಭಿಸಿ ಶಾಸಕ ಹಿಟ್ನಾಳ್.

ಕೊಪ್ಪಳ,ಏ.೦೩ ಈ ಹಿಂದೆ ಉದ್ಯೋಗ ಪುರುಷನ ಲಕ್ಷಣ ಎಂದು ಕರೆಯುತ್ತಿತ್ತು. ಆದರೆ ಈಗ ಉದ್ಯೋಗ ಮನುಷ್ಯನ ಲಕ್ಷಣ ಎಂದು ಹೇಳಬಹುದಾಗಿದೆ. ಏಕೆಂದರೇ ಈಗಿನ ಆಧುನಿಕ ಯುಗದಲ್ಲಿ ಗಂಡ ಹೆಂಡತಿ ಇಬ್ಬರು ಉದ್ಯೋಗ ಮಾಡಿ ಜೀವನಸಾಗಿಸುವಂತಹ ಪರಸ್ಥಿತಿ ನಿರ್ಮಾಣವಾಗಿದೆ. ನಿರುದ್ಯೋಗಿ ಯುವಕ/ಯುವತಿಯರು ಉದ್ಯೋಗ ಪಡೆದು ಸ್ವಾವಲಂಬಿ ಬದುಕು ಪ್ರಾರಂಭಿಸಲು ಮುಂದಾಗಿ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು. ಅವರು ರವಿವಾರ ಇಲ್ಲಿನ ಸಾಹಿತ್ಯ ಭವನದಲ್ಲಿ ಎಸಿಸಿಪಿಎಲ್ ಟ್ರೈನಿಂಗ್ ಡಿವಿಜನ್ ಬೆಂಗಳೂರು ಹಾಗೂ ಇದರ ಅಂಗ ಸಂಸ್ಥೆಯಾಗಿರುವ ಶ್ರೀ ಎಸ್.ಎಸ್.ಏಜ್ಯುಕೇಷನ್ ಸೊಸೈಟಿ (ರಿ) ಕೊಪ್ಪಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ ಬೃಹತ್ ಉದ್ಯೋಗ ಮೇಳ-೨೦೧೬ ರ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

Please follow and like us:
error