fbpx

ಶಾಸಕರಿಂದ ಮೂರಾರ್ಜಿ ದೇಸಾಯಿ ಪದವಿ ಪೂರ್ವ ವಿಜ್ಞಾನ ಕಾಲೇಜು ಉದ್ಘಾಟನೆ.

ಕೊಪ್ಪಳ:೦೪, ಹಿರೇಸಿಂದೋಗಿ ಗ್ರಾಮದಲ್ಲಿ ರೂ ೫ ಕೋಟಿ ಮೊತ್ತದ ಅಲ್ಪಸಂಖ್ಯಾತರ ಮೂರಾರ್ಜಿ ದೇಸಾಯಿ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜನ್ನು ಕೊಪ್ಪಳದ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳರವರು ಉದ್ಘಾಟನೆ ಮಾಡಿ ಮಾತನಾಡಿದ ಶಾಸಕರವರು ಕ್ಷೇತ್ರದ ಅಲ್ಪಸಂಖ್ಯಾತರ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಈ ಪದವಿ ಪೂರ್ವ ಕಾಲೇಜಿನ ಸದುಪಯೋಗ ಪಡೆದುಕೊಳ್ಳಬೇಕು. ಬಡ ವಿದ್ಯಾರ್ಥಿ-ವಿದ್ಯಾರ್ಥಿನಿಗಳಿಗೆ ಈ ಕಾಲೇಜು ಹೆಚ್ಚು ಅನುಕೂಲವಾಗಲಿದೆ. ಪೋಷಕರು ತಮ್ಮನ್ನು ಕಷ್ಟಪಟ್ಟು ಓದಿಸಿ ಉನ್ನತ ಹುದ್ದೆಯಲ್ಲಿ ಇರಬೇಕೆಂದು ಬಯಸುತ್ತಾರೆ. ಆದಕಾರಣ ಪ್ರತಿಯೊಬ್ಬ ವಿದ್ಯಾರ್ಥಿಗಳು ತಂದೆ-ತಾಯಿಯವರನ್ನು ನಿರಾಸೆ ಗೋಳಿಸದೆ ಕಷ್ಟಪಟ್ಟು ಓದಿ ಬರುವ ದಿನಗಳಲ್ಲಿ ಕೊಪ್ಪಳದಲ್ಲಿಯೇ ವೈದ್ಯಕೀಯ ಕಾಲೇಜು-ಇಂಜಿನೀಯರಿಂಗ್ ಕಾಲೇಜುಗಳು ಪ್ರಾರಂಭಗೊಳ್ಳಲಿದ್ದು ನಮ್ಮ ಜಿಲ್ಲೆಯು ೩೭೧ನೇಕಲಂ ಅಡಿಯಲ್ಲಿ ಬರುವುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಸವಲತ್ತು ಸಿಗಲಿದ್ದು, ಇದರ ಉಪಯೋಗವನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಮಾಡಿಕೊಳ್ಳಬೇಕೆ ಎಂದು ಹೇಳಿದರು.  ಈ ಸಂದರ್ಭದಲ್ಲಿ ಜಿ.ಪಂ. ಅದ್ಯಕ್ಷರಾದ ಅಮರೇಶ ಕುಳಗಿ, ತಾ.ಪಂ. ಅಧ್ಯಕ್ಷರಾದ ಶ್ರೀಮತಿ ಭಾನುಬೇಗಂ, ಗ್ರಾಮ.ಪಂ. ಅದ್ಯಕ್ಷರಾದ ಶ್ರೀಮತಿ ಮಂಜಮ್ಮ ಹೂಗಾರ, ಹೆಚ್.ಎಲ್. ಹಿರೇಗೌಡ್ರು, ಗುರುಮೂರ್ತಿಸ್ವಾಮಿ ಅಳವಂಡಿ, ಎ.ಪಿ.ಎಮ್.ಸಿ ಅಧ್ಯಕ್ಷರಾದ ಶಿವಲಿಂಗಪ್ಪ ಹಿಟ್ನಾಳ, ಈಶಪ್ಪ ಮಾದಿನೂರು, ಪ್ರಸನ್ನ ಗಡಾದ, ಕೇಶವರೆಡ್ಡಿ, ಗಾಳೆಪ್ಪ ಪೂಜಾರ, ಮಾಹಂತೇಶ ಮೈನಹಳ್ಳಿ, ಮುತ್ತುರಾಜ ಕುಷ್ಟಗಿ, ನಾಗರಾಜ ಚಳ್ಳೂಳ್ಳಿ, ಯಂಕಣ್ಣ ಕೊಳ್ಳಿ, ಶಿವಾನಂದ ಹೂದ್ಲೂರು, ಕೃಷ್ಣ ಗಲಿಬಿ, ವಿವಿಧ ಇಲಾಖೆಯ ಅಧಿಕಾರಿಗಳು ಗುತ್ತಿಗೆದಾರರು, ವಕ್ತಾರ ಅಕ್ಬರ ಪಾಷಾ ಪಲ್ಟನ್ ಉಪಸ್ಥಿತರಿದ್ದರು.

Please follow and like us:
error

Leave a Reply

error: Content is protected !!