ಕೊಪ್ಪಳ ಕಲಾವಿದರಿಂದ ಕಳಸಾ ಬಂಡೂರಿ ಯೋಜನೆ ಅನುಷ್ಠನಕ್ಕಾಗಿ ಒತ್ತಾಯ.

ಕೊಪ್ಪಳ-13- ಅಶೋಕವೃತ್ತದಲ್ಲಿ ಜಿಲ್ಲೆಯ ಎಲ್ಲಾ ಕಲಾವಿದರು ಒಟ್ಟಿಗೆ ಸೇರಿ ಕಳಸಾ ಬಂಡೂರಿ ಯೋಜನೆ ಅನುಷ್ಠಾನ ಗೊಳಿಸಲು ಸರಕಾರವನ್ನು ಒತ್ತಾಯಿಸಿದರು.
    
ರೈತ ಈ ದೇಶದ ಬೆನ್ನೆಲುಬು, ಬರುವ ಸರಕಾರಗಳೆಲ್ಲ ಈ ರೈತನ ಹೆಸರೇಳಿಕೊಂಡು ನಾವು ರೈತ
ಪರಎಂದು ಕೇವಲ ಭಾಷಣಗಳಲ್ಲಿ ಹೆಳುತ್ತಾಹೋದರೆ ಸಾಲದು, ಅವರ ನೋವು ನಲಿವುಗಳನ್ನು ಆಲಿಸಿ
ಕಣ್ಣಿರು ಒರೆಸುವ ಮನೋಭಾವ ತಮ್ಮಲ್ಲಿ ಬರಲಿ. ನಾವು ಕೇಳುತ್ತಿರುವುದು ಕುಡಿಯಲು ನೀರು.
ಬೇರೆನನ್ನು ಅಲ್ಲ. ಇದನ್ನು ಅರ್ಥ ಮಾಡಿಕೊಂಡು ಅತೀ ಶೀಘ್ರದಲ್ಲಿ ನಮ್ಮ ಈ ಕೋರಿಕೆಯನ್ನು
ಈಡೇರಿಸಬೇಕು ಎಂದರು.
    ಈ ಸಂದರ್ಭದಲ್ಲಿ ಕಲಾವಿದರು ರೈತಗೀತೆಗಳನ್ನು ಪ್ರಸ್ತುತ
ಪಡಿಸಿದರು, ಜೋತೆಗೆ ಕ್ರಾಂತಿಗೀತೆಗಳು, ದೇಶಭಕ್ತಿಗೀತೆಗಳು ಜನಪದ ಗೀತೆಗಳನ್ನು
ಹಾಡುವುದರ ಮೂಲಕ ವಿಬಿನ್ನವಾಗಿ ಪ್ರತಿಭಟಿಸಿದರು.
    ಈ ಸಂದರ್ಭದಲ್ಲಿ ಕಲಾವಿದರಾದ
ಬಾಷಾ ಹಿರೇಮನಿ, ಬಸವರಾಜ ಕೊಪ್ಪಳ, ಅಮರೇಶ ಜವಳಿ, ಮಾಜೀದ್ ಖಾನ್, ದೊಡ್ಡಣ್ಣ ಹಾವಿನಾಳ,
ಅಕ್ಬರ್ ಅಲಿ, ಮೆಹಬೂಬ ಕಿಲ್ಲೆದಾರ, ಮರಿಯಪ್ಪ ಜಿ. ಹೆಚ್, ಗಣೇಶ ಹೊರತಟ್ನಾಳ, ಪಕೀರಪ್ಪ
ಎಮ್ಮಿ, ಮಂಜುನಾಥ, ರಂಗ ಭೂಮಿಕಲಾವಿದ ತೋಟಪ್ಪ  ಕಾಮನೂರ, ಗಂಗಾವತಿ ತಾಲೂಕಿನಿಂದ
ಕೆ.ಎಫ್. ಮುದ್ದಾಬಳ್ಳಿ, ಜಲೀಲ್ ಪಾಶಾ, ಪರುಶುರಾಮ್, ಯಲಬುರ್ಗಾದ ಶರಣಯ್ಯ ಮ್ಯಾಗಳಮಠ, 
ಶರಣಪ್ಪ ಬಳಿಗೇರಿ ಮುಂತಾದ ಕೊಪ್ಪಳ ಜಿಲ್ಲೆಯ ಕಲಾವಿದರು  ಪಾಲ್ಗೊಂಡಿದ್ದರು.

Please follow and like us:
error