fbpx

ಕನ್ನಡ ಚಲನಚಿತ್ರ ರಂಗದ ಯಶಸ್ವಿಗೆ ಚಿತ್ರಗೀತೆಗಳ ಕೊಡುಗೆ ಮಹತ್ವದ್ದಾಗಿದೆ- ಅಮರೇಶ್ ಕುಳಗಿ.

ಕೊಪ್ಪಳ ನ. ೦೭ (ಕ ವಾ) ಪರಭಾಷೆ ಚಿತ್ರಗಳ ಸ್ಪರ್ಧೆಯ ನಡುವೆಯೂ ಕನ್ನಡ ಚಲನಚಿತ್ರ ರಂಗ ಉನ್ನತ ಪ್ರಗತಿ ಸಾಧಿಸಲು, ಸುಮಧುರ ಕನ್ನಡ ಚಿತ್ರಗೀತೆಗಳ ಕೊಡುಗೆ ಮಹತ್ವದ್ದಾಗಿದೆ ಎಂದು ಕೊಪ್ಪಳ ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ ಅವರು ಅಭಿಪ್ರಾಯಪಟ್ಟರು.
     ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜಿಲ್ಲಾಡಳಿತದ ಸಹಯೋಗದಲ್ಲಿ ನಗರದ ಸಾಹಿತ್ಯ ಭವನದಲ್ಲಿ ಶನಿವಾರದಂದು ಹಮ್ಮಿಕೊಂಡಿದ್ದ ‘ಗಾನಯಾನ’ ಕನ್ನಡ ಚಲನಚಿತ್ರ ಗೀತೆಗಳ ಭಾವಯಾನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
     ಕನ್ನಡ ಚಲನಚಿತ್ರ ರಂಗ ಅನೇಕ ಸ್ಪರ್ಧೆ, ಸಂಕಷ್ಟಗಳ ನಡುವೆಯೂ ಅತ್ಯುತ್ತಮ ಪ್ರಗತಿ ಸಾಧಿಸಿದೆ.  ಹೆಸರಾಂತ ಕಲಾವಿದರು, ತಂತ್ರಜ್ಞರು, ನಿರ್ದೇಶಕರು, ನಿರ್ಮಾಪಕರುಗಳನ್ನು ಈ ದೇಶಕ್ಕೆ, ಕನ್ನಡ ಚಲನಚಿತ್ರ ರಂಗ ನೀಡಿದೆ.  ಪರಭಾಷಾ ಚಿತ್ರಗಳ ನಡುವೆಯೂ, ಉತ್ತಮ ಕನ್ನಡ ಚಲನಚಿತ್ರಗಳು ನಿರ್ಮಾಣಗೊಳ್ಳುತ್ತಿದ್ದು, ಚಿತ್ರರಂಗ ಉತ್ತಮವಾಗಿ ಬೆಳೆಯುತ್ತಿದೆ.  ಕನ್ನಡ ಚಲನಚಿತ್ರ ರಂಗದ ಯಶಸ್ವಿಗೆ, ಪ್ರಗತಿಗೆ ಸುಮಧುರ ಕನ್ನಡ ಚಿತ್ರಗೀತೆಗಳ ಕೊಡುಗೆ ಅಪಾರವಾಗಿವೆ.  ಹಲವಾರು ಚಿತ್ರಗಳು, ಉತ್ತಮ ಚಿತ್ರಗೀತೆಗಳನ್ನು ಹೊಂದಿದ್ದಕ್ಕಾಗಿಯೇ ಯಶಸ್ವಿಗೊಂಡಿವೆ.  ಹಳೆಯ ಕನ್ನಡ ಚಿತ್ರಗಳ ಗೀತೆಗಳು ಕಿವಿಗೆ ಇಂಪಾಗಿ, ಅರ್ಥಪೂರ್ಣ ಸಂದೇಶವನ್ನು ಹೊಂದಿರುತ್ತಿರುವುದರಿಂದಲೇ ಅವು ಜನಮಾನಸದಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡಿವೆ.  ಎಷ್ಟೇ ವರ್ಷಗಳು ಗತಿಸಿದರೂ, ಹಳೆಯ ಹಾಡುಗಳನ್ನು ಮತ್ತೆ ಮತ್ತೆ ಕೇಳುವಂತೆ ಮಾಡುತ್ತದೆ.  ಆದರೆ ಈಗಿನ ಕಾಲದ ಚಿತ್ರಗೀತೆಗಳು ಆ ಮಾಧುರ್ಯವನ್ನು ಉಳಿಸಿಕೊಂಡಿಲ್ಲ ಅಲ್ಲದೆ ಸಮಾಜಕ್ಕೆ ಯಾವುದೇ ಸಂದೇಶವನ್ನೂ ನೀಡುವುದಿಲ್ಲ.  ಇಂತಹ ಗೀತೆಗಳು ಎಷ್ಟೇ ಜನಪ್ರಿಯಗೊಂಡರೂ, ಅದು ಕೆಲ ದಿನಗಳ ಮಟ್ಟಿಗೆ ಮಾತ್ರ ಸೀಮಿತವಾಗಿರುತ್ತವೆ.  ಈ ನಿಟ್ಟಿನಲ್ಲಿ ವಾರ್ತಾ ಇಲಾಖೆಯು ಆಯೋಜಿಸಿದ ಗಾನಯಾನ ಹಳೆಯ ಹಾಗೂ ಸುಮಧುರ ಹಾಡುಗಳನ್ನು ಕೊಪ್ಪಳದ ಜನ ಮತ್ತೊಮ್ಮೆ ಮೆಲುಕು ಹಾಕುವಂತೆ ಮಾಡಿದೆ ಎಂದು ಜಿ.ಪಂ. ಅಧ್ಯಕ್ಷ ಅಮರೇಶ್ ಕುಳಗಿ ಅವರು ಹೇಳಿದರು.
     ಉದ್ಘಾಟನೆ ಕಾರ್ಯಕ್ರಮದ ನಂತರ ನಗರದ ಸಾಹಿತ್ಯ ಭವನದಲ್ಲಿ ಕನ್ನಡದ ಹಳೆಯ ಹಾಡುಗಳ ಮಧುರ ಲೋಕವೊಂದು ಅನಾವರಣಗೊಂಡಿತು.  ಹೊರಗಡೆ ಸುಡುವ ಬಿಸಿಲಿದ್ದರೂ ಸಹ, ಸಾಹಿತ್ಯ ಭವನದೊಳಗೆ ಇಂಪಾದ ಗೀತೆಗಳು, ತಂಗಾಳಿ ಸುಳಿದ ಅನುಭವ ನೀಡಿತು.  ಬೆಂಗಳೂರಿನ ಶಬ್ಬೀರ್ ನೇತೃತ್ವದ ಸ್ವರ ಮಧುರ ತಂಡದ ಕಲಾವಿದರು ಹಾಡುಗಳನ್ನು ಹಾಡುತ್ತಿದ್ದರೆ, ನೆರೆದಿದ್ದ ನೂರಾರು ಭಾವಜೀವಿಗಳು ಗಾನಲೋಕದಲ್ಲಿ ವಿಹರಿಸಿದರು.  ಅಲ್ಲಿ ಕನ್ನಡ ನಾಡಿನ ಬಗ್ಗೆ ಹೆಮ್ಮೆ ಪಡುವಂತೆ ಮಾಡುವ ಗೀತೆಗಳು, ರಮ್ಯ ಪ್ರೇಮ ಗೀತೆಗಳು, ಈ ನಾಡಿನ ಖ್ಯಾತ ಕವಿಗಳ
     ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರಪ್ಪ ಚೋರನೂರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಅವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.  ಸ್ವರ ಮಧುರ ತಂಡದ ಗಾಯಕರುಗಳಾದ ಉದಯ ಅಂಕೋಲ, ಮಹೇಶ್, ದಾಕ್ಷಾಯಿಣಿ ಹಾಗೂ ವಸುಂಧರಾ ಅವರು ಪ್ರಸ್ತುತ ಪಡಿಸಿದ ಗಾಯನ ಜನರ ಮೆಚ್ಚುಗೆಗೆ ಪಾತ್ರವಾಯಿತು. 

ರಚನೆಯ ಹಾಡುಗಳು, ಪ್ರೇಮ ಕಾವ್ಯದ ಗೀತೆಗಳ ಲೋಕ ತೆರೆದುಕೊಂಡಿತ್ತು.  ಕನ್ನಡ ಚಿತ್ರರಂಗದಲ್ಲಿ ಅಚ್ಚಳಿಯದೇ ಉಳಿದಿರುವ ಕಪ್ಪು ಬಿಳುಪು ಚಿತ್ರಗಳ ಹಾಡುಗಳು ಕೇಳಿಬಂದಾಗ ಶ್ರೋತೃಗಳು ತನ್ಮಯರಾಗುತ್ತಿದ್ದರು.  ದ.ರಾ. ಬೇಂದ್ರೆಯವರ ‘ಇಳಿದು ಬಾ ತಾಯೇ’, ಕಣ್ತೆರೆದು ನೋಡು ಚಿತ್ರದ ‘ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ, ಮಿಸ್ ಲೀಲಾವತಿ ಚಿತ್ರದ ‘ದೋಣಿ ಸಾಗಲಿ, ಮುಂದೆ ಹೋಗಲಿ’, ಕಸ್ತೂರಿ ನಿವಾಸದ ‘ಆಡಿಸಿ ನೋಡು ಬೀಳಿಸಿ ನೋಡು’, ಸಾಕ್ಷಾತ್ಕಾರ ಚಿತ್ರದ ‘ಒಲವೆ ಜೀವನ ಸಾಕ್ಷಾತ್ಕಾರ’, ಹಣ್ಣೆಲೆ ಚಿಗುರಿದಾಗ ಚಿತ್ರದ ‘ಹೂವು ಚೆಲುವೆಲ್ಲಾ ನಂದೆಂದಿತು’ ಸೇರಿದಂತೆ ಹತ್ತಾರು ಹಳೆಯ ಹಾಡುಗಳು ಭಾವ ಪರವಶರನ್ನಾಗಿಸಿದವು. 

Please follow and like us:
error

Leave a Reply

error: Content is protected !!