fbpx

ಯುವತಿ ಕಾಣೆ ಪತ್ತೆಗೆ ಸಹಕರಿಸಲು ಮನವಿ.

ಕೊಪ್ಪಳ, ಜ.೦೨
(ಕ ವಾ) ಕೊಪ್ಪಳ ತಾಲೂಕಿನ ಬೆಟಗೇರಿ ಗ್ರಾಮದ ಯಮನವ್ವ ತಂದೆ ತಿಮ್ಮಪ್ಪ
ತಳವಾರ (೨೨) ಎಂಬ ಯುವತಿಯ ಕಳೆದ ಡಿ. ೨೬ ರಿಂದ ಕಾಣೆಯಾಗಿದ್ದು, ಯುವತಿಯ ಪತ್ತೆಗೆ
ಸಹಕರಿಸುವಂತೆ ಅಳವಂಡಿ ಪೊಲೀಸ್ ಠಾಣೆಯ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಅವರು
ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
     ಯುವತಿಯು ಕಳೆದ ಡಿ.೨೬ ರಂದು
ಸಂಜೆ ೦೭ ಗಂಟೆಗೆ ಮನೆಯಿಂದ ಹೊರಗಡೆ ಹೋದವಳು ಇಲ್ಲಿಯವರೆಗೂ ವಾಪಸ್ ಮನೆಗೆ ಬಂದಿಲ್ಲ. 
ಅಲ್ಲದೆ ಯುವತಿಯ ಸುಳಿವು ಸಿಕ್ಕಿಲ್ಲ.
ಕಾಣೆಯಾದ ಯುವತಿಯ ವಿವರ ಈ ಕೆಳಗಿನಂತಿದೆ:
ಹೆಸರು: ಯಮನವ್ವ ತಂದೆ ತಿಮ್ಮಪ್ಪ ತಳವಾರ, ವಯಸ್ಸು: ೨೨, ಸಾ|| ಬೆಟಗೇರಿ,
ತಾ||ಜಿ||ಕೊಪ್ಪಳ, ಜಾತಿ: ವಾಲ್ಮೀಕಿ, ಉದ್ಯೋಗ: ಕೂಲಿ ಕೆಲಸ, ಎತ್ತರ: ೪.೧೦ ಫೀಟು,
ಕನ್ನಡ ಭಾಷೆ ಮಾತನಾಡುತ್ತಾಳೆ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ದುಂಡು ಮುಖ, ಕಪ್ಪು
ಕೂದಲು, ಸಾಧಾರಣ ಮೂಗು, ಸಾಧಾರಣ ಕಿವಿಗಳು, ಸಣ್ಣ ತುಟಿಗಳು. ಮನೆಯಿಂದ ಹೊರಡುವಾಗ ನೀಲಿ
ಬಣ್ಣದ ಹೂವಿನ ಡಿಸೈನಿನ ನೈಟಿ ಧರಿಸಿರುತ್ತಾಳೆ. 
     ಈ ಚಹರೆಯುಳ್ಳ ಯುವತಿಯು
ಯಾವುದೇ ಠಾಣಾ ವ್ಯಾಪ್ತಿಯಲ್ಲಿ ಯಾರಿಗಾದರೂ ಕಂಡಲ್ಲಿ ಅಥವಾ ಯುವತಿಯ ಬಗ್ಗೆ ಮಾಹಿತಿ
ಸಿಕ್ಕಲ್ಲಿ ಅಳವಂಡಿ ಪೊಲೀಸ್ ಠಾಣೆ, ಕೊಪ್ಪಳ ನಿಯಂತ್ರಣ ಕೊಠಡಿ, ದೂರವಾಣಿ ಸಂಖ್ಯೆ:
೦೮೫೩೯-೨೩೦೨೨೨ ಇವರಿಗೆ ಮಾಹಿತಿ ನೀಡುವಂತೆ ಅಳವಂಡಿ ಪೊಲೀಸ್ ಠಾಣೆಯ ಪೊಲೀಸ್
ಸಬ್‌ಇನ್ಸ್‌ಪೆಕ್ಟರ್ ಅವರು ತಿಳಿಸಿದ್ದಾರೆ.

Please follow and like us:
error

Leave a Reply

error: Content is protected !!