ಉತ್ತಮ ಹವ್ಯಾಸಗಳನ್ನು ವಿದ್ಯಾರ್ಥಿಗಳು ರೂಡಿಸಿಕೊಳ್ಳಬೇಕು: ಯಲ್ಲಪ್ಪ ಉಪ್ಪಾರ

 ವಚನಗಳ ಕಂಠಪಾಟ, ಕ್ರೀಡಾಸಕ್ತಿ, ಪತ್ರಿಕೆಗಳಲ್ಲಿನ ನುಡಿಮುತ್ತು ಸಂಗ್ರಹ ಸೇರಿದಂತೆ ಅನೇಕ ಪಠ್ಯೇತರ ಉತ್ತಮ ಹವ್ಯಾಸಗಳನ್ನು ವಿದ್ಯಾರ್ಥಿಗಳು  ರೂಡಿಸಿಕೊಳ್ಳಬೇಕು ಎಂದು ನರೇಗಲ್ಲ ಸ.ಹಿ.ಪ್ರಾ.ಶಾಲೆ ಮುಖ್ಯೋಪಾಧ್ಯಾಯ ಯಲ್ಲಪ್ಪ ಉಪ್ಪಾರ ಹೇಳಿದರು.
ಅವರು ಶನಿವಾರ ತಾಲೂಕಿನ ನರೇಗಲ್ಲ ಗ್ರಾಮದ ತಮ್ಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ನಡೆದ ’ನಾಣ್ಯ ಪ್ರದರ್ಶನ’ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳ ಮೂಲಕ ಜನರಲ್ ನಾಲೇಜ್ ಹೆಚ್ಚಿಸಿಕೊಳ್ಳುವಂತ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ದೇವೇಂದ್ರ ಬಾವಿಕಟ್ಟಿಯವರ ನಾಣ್ಯ ಸಂಗ್ರಹ ಹವ್ಯಾಸ ಅತ್ಯಂತ ಶ್ಲಾಘನೀಯ ಮತ್ತು ಇದು ಇತರರಿಗೆ ಮಾದರಿ ಎಂದು ಅವರಿಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯ ವಿರುಪಾಕ್ಷಗೌಡ, ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ವೀರಣ್ಣ ಕೊನಸಾಗರ, ಸದಸ್ಯ ಸುರೇಶ ಮೆಗನಾಳ, ಮುಖಂಡರಾದ ವೀರಣ್ಣ ಪಟ್ಟಣಶೆಟ್ಟಿ ಸೇರಿದಂತೆ ಶಾಲಾ ಶಿಕ್ಷಕರ ವೃಂದ ಉಪಸ್ಥಿರಿದ್ದರು. 
ಇದೇ ವೇಳೆ ವಿದ್ಯಾರ್ಥಿಗಳಿಗೆ ಕೊಪ್ಪಳದ ದೇವೇಂದ್ರಸಾ ಬಾವಿಕಟ್ಟಿ ಸಂಗ್ರಹಿಸಿದ ನಾಣ್ಯಗಳ ಸಂಗ್ರಹದ ಗ್ಯಾಲರಿ ಮೂಲಕ ನಾಣ್ಯ ಪ್ರದರ್ಶನ ನೀಡಲಾಯಿತು. 
Please follow and like us:
error