ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ೮ ರಿಂದ ಬೃಹತ್ ರಕ್ತದಾನ ಶಿಬಿರ.

  ಕೊಪ್ಪಳ. : ನಗರದ ಐತಿಹಾಸಿಕ ಪ್ರಸಿದ್ಧ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿಇಂದು ೮ ಗುರುವಾರ ದಿಂದ ೧೨ ಸೋಮವಾರದ ವರೆಗೆ  ೦೫ ದಿನಗಳ ಕಾಲ ಬೃಹತ್ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ.
      ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳವರ ಇಂದು ಚಾಲನೆ ನೀಡಲಿದ್ದು ಶ್ರೀ ಮಠದ ಎಡ ಭಾಗದಲ್ಲಿರುವ ಕಲ್ಯಾಣ ಮಂಟಪದಲ್ಲಿ ಪ್ರತಿ ದಿನ ಬೆಳಿಗ್ಗೆ ೦೮ ರಿಂದ ಮದ್ಯಾಹ್ನ ೦೪ ಗಂಟೆವರೆಗೆ ಶಿಬಿರ ಆಯೋಜಿಸಲಾಗಿದೆ.     ಗುರುವಾರ ದಿ: ೦೮ ರಿಂದ ೦೫ ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ಸರ್ವ ಭಕ್ತಾದಿಗಳು ರಕ್ತದಾನ ಮಾಡಿ ಜೀವ ಉಳಿಸಲು ಶ್ರಮಿಸುವಂತೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಚೇರಮೆನ  ಡಾ. ಕೆ,ಜಿ,ಕುಲಕರ್ಣಿ  ತಿಳಿಸಿದ್ದಾರೆ. 

Leave a Reply