ದತ್ತಿ ಪ್ರಶಸ್ತಿಗೆ ‘ಬೆತ್ತಲೆ’ ಕೃತಿ ಆಯ್ಕೆ.

ಕೊಪ್ಪಳ, ಜು.೦೯ ಕೊಪ್ಪಳ ಜಿಲ್ಲೆಯಲ್ಲಿ ಪ್ರಕಾಶನಗೊಂಡ ಜಿಲ್ಲೆಯ  ಬರಹಗಾರರ ಸೃಜನಶೀಲ ಕೃತಿಗೆ ಸಾಹಿತಿ ಮಹಾಂತೇಶ ಮಲ್ಲನಗೌಡರ ತಮ್ಮ ತಂದೆ ಮರಿಗೌಡ ಮಲ್ಲನಗೌಡರ ಅವರ ಹೆಸರಿನಲ್ಲಿ ಕರೆದ ದತ್ತಿ ಪ್ರಶಸ್ತಿಗೆ ಯಲಬುರ್ಗಾದ ಸಾಹಿತಿ ಮುನಿಯಪ್ಪ ಹುಬ್ಬಳ್ಳಿ ಅವರು ೨೦೧೪ ರಲ್ಲಿ ರಚಿಸಿದ ‘ಬೆತ್ತಲೆ’ ಕಾವ್ಯ ಕೃತಿ ಆಯ್ಕೆಗೊಂಡಿದೆ. ಕೃತಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಸಾಹಿತಿಗಳಾದ ಶಾಂತಾದೇವಿ ಹಿರೇಮಠ, ಈಶ್ವರ ಹತ್ತಿ ಹಾಗೂ ಪ್ರಮೋದ ತುರ್ವಿಹಾಳ ನಿರ್ಣಾಯಕರಾಗಿ ಪಾಲ್ಗೊಂಡಿದ್ದು, ಶೀಘ್ರದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಣ್ಣ ನಿಂಗೋಜಿ ತಿಳಿಸಿದ್ದಾರೆ.

Please follow and like us:
error

Related posts

Leave a Comment