fbpx

ಬಾಕಿ ವೇತನಕ್ಕಾಗಿ ನಗರಸಭೆ ಮುಂದೆ ಧರಣಿ.

೧೦ ತಿಂಗಳ ಬಾಕಿ ವೇತನ ಕೊಡಲು ಹಾಗೂ ನಿಷ್ಠ ವೇತನ ಕಾಯ್ದೆಯಡಿಯಲ್ಲಿ ರೂ. ೭,೦೨೨/- ಕಾರ್ಮಿಕರ ಬ್ಯಾಂಕ್ ಖಾತೆಗೆ ಜಮಾ ಮಾಡಲು, ಒಂದು ವರ್ಷದ ಭವಿಷ್ಯ ನಿಧಿ ತುಂಬಲು ಮತ್ತು ನಗರಸಭೆಯ ಕಾರ್ಮಿಕರ ಗುರುತಿನ ಚೀಟಿಗಳನ್ನು ಕೊಡಲು ಒತ್ತಾಯಿಸಿ ನಗರಸಭೆಯಲ್ಲಿ ಗುತ್ತಿಗೆ ಪೌರ ಕಾರ್ಮಿಕರಾಗಿ ದುಡಿಯುತ್ತಿರುವ ೧೪೦ ಜನ ದಿನಗೂಲಿ ಪೌರ ಕಾರ್ಮಿಕರು ನ್ಯಾಯಕ್ಕಾಗಿ ಒತ್ತಾಯಿಸಿ ನಗರಸಭೆ ಮುಂದೆ ಅನಿರ್ಧಿಷ್ಠ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆಂದು ಕೆ.ಜಿ.ಎಲ್.ಯು. ನಗರಘಟಕ ಅಧ್ಯಕ್ಷ ಪರಶುರಾಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹತ್ತು ತಿಂಗಳಿನಿಂದ ವೇತನವಿಲ್ಲದೇ ನಗರವನ್ನು ಸ್ವಚ್ಛಗೊಳಿಸುವ ಕಾರ್ಮಿಕರು ಬೀದಿಪಾಲಾಗಿದ್ದಾರೆ. ಅವರ ಮಕ್ಕಳ ವಿದ್ಯಾಭ್ಯಾಸ ನಿಂತು ಹೋಗಿದೆ, ಮನೆಯಲ್ಲಿರುವ ಹಿರಿಯ ನಾಗರಿಕರಿಗೆ ವೈದ್ಯಕೀಯ ಸೌಲಭ್ಯ ಕೊಡಿಸಲಾಗದೇ ಪರದಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಗಂಗಾವತಿ ನಗರಸಭೆ ಕಾರ್ಮಿಕರ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿ ಶೋಷಣೆ ಮಾಡುತ್ತಿರುವುದು ಖಂಡನಿಯವಾಗಿದೆ ಎಂದಿದ್ದಾರೆ. ಈ ಚಳುವಳಿಯ ಉದ್ಘಾಟನೆಯನ್ನು ಸಿಪಿಐಎಂಎಲ್ ಪಕ್ಷದ ರಾಜ್ಯ ಕಾರ್ಯದರ್ಶಿ ಭಾರಧ್ವಾಜ್ ನಿರ್ವಹಿಸಿದರು. ಅಯ್ಯರ್‍ಲಾ ಜಿಲ್ಲಾ ಸಂಚಾಲಕ ಎಂ. ಏಸಪ್ಪ, ಅಯ್ಯರ್‍ಲಾ ಕಾರಟಗಿ ಭಾಗದ ಅಧ್ಯಕ್ಷ ಸುಂದರರಾಜ್ ಇವರೊಂದಿಗೆ ನೂರಾರು ಕಾರ್ಮಿಕರು ಭಾಗವಹಿಸಿದ್ದಾರೆ.

Please follow and like us:
error

Leave a Reply

error: Content is protected !!