You are here
Home > Koppal News > ಹೆಚ್ಚುವರಿ ಶುಲ್ಕ ಹಿಂದುರುಗಿಸಲು ಆಗ್ರಹಿಸಿ ಪ್ರತಿಭಟನೆ

ಹೆಚ್ಚುವರಿ ಶುಲ್ಕ ಹಿಂದುರುಗಿಸಲು ಆಗ್ರಹಿಸಿ ಪ್ರತಿಭಟನೆ

 ಪದವಿ ಪೂರ್ವ ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕ ಪಡೆದಿರುವ ಪ್ರಾಚಾರ್ಯರರ ನೀತಿ ಖಂಡಿಸಿ  ಹೆಚ್ಚುವರಿ ಶುಲ್ಕ ಹಿಂದುರುಗಿಸಲು ಆಗ್ರಹಿಸಿ ಪ್ರತಿಭಟನೆ
           ರಾಜ್ಯ ಸರ್ಕಾರದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಥಮ ಪಿಯುಸಿ ಮಾರ್ಗದರ್ಶಿ ಶುಲ್ಕ ನೀತಿಯ ಪ್ರಕಾರ ಎಲ್ಲಾ ವಿದ್ಯಾರ್ಥಿನಿಯರಿಗೆ ೧೬೦ ರೂಪಾಯಿದಿಂ

ದ ೧೭೦ ರೂಪಾಯಿಗಳನ್ನು ಮಾತ್ರ ತೆಗೆದುಕೊಳ್ಳಬೇಕಿತ್ತು, ಆದರೆ ಇಲ್ಲಿನ ಪ್ರಾಚಾರ್ಯರು ಸರ್ಕಾರದ ನಿಯಮಗಳನ್ನು ಉಲ್ಲಂಘನೆ ಮಾಡಿ ಸುಮಾರು ೭೪೦ ರೂಪಾಯಿಗಳ ವರೆಗೂ ಹೆಚ್ಚುವರಿಯಾಗಿ ಶುಲ್ಕ ವಸೂಲಿ ಮಾಡಿರುತ್ತಾರೆ. ಮುಂದುವರೆದು ಎಸ್ಸಿ. ಎಸ್ಟಿ ವಿದ್ಯಾರ್ಥಿಗಳಿಗೆ ೧೬೦ ರೂಗಳನ್ನು ಮತ್ತು ಒಬಿಸಿ ವಿದ್ಯಾರ್ಥಿಗಳಿಗೂ ೬೭೭  ರೂಪಾಯಿಗಳನ್ನು ಮಾತ್ರ ತೆಗೆದುಕೊಳ್ಳಬೇಕು. ಆದರೆ ಇವರು ಇಲ್ಲೂ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ೯೭೫ ರುಗಳಿಂದ ೧೨೦೦ ರೂಗಳನ್ನು ಪಡೆದಿರುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳನ್ನು ಕಾಲೇಜಿಗೆ ಕಳುಹಿಸಿರುವುದೇ ವಿರಳ. ಇಂತಹ ಸನ್ನಿವೇಶಗಳಲ್ಲಿ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಪ್ರತ್ಸಾಹ ನೀಡಬೇಕಾದ ಕಾಲೇಜು ಪ್ರಾಚಾರ್ಯರೇ ಈ ರೀತಿ ವಿದ್ಯಾರ್ಥಿಗಳಿಂದ ಹಗಲು ದರೋಡೆ ಮಾಡುತ್ತಿರುವುದು ಕಾನೂನಿನ ಪ್ರಕಾರ ಅಕ್ಷಮ್ಯ ಅಪರಾಧವಾಗಿರುತ್ತದೆ. ಈ ಕೂಡಲೇ ವಿದ್ಯಾರ್ಥಿಗಳಿಗೆ ವಂಚನೆ ಮಾಡಿದ ಪ್ರಾಚಾರ್ಯರನ್ನು ಅಮಾನತು ಮಾಡಬೇಕು ಹಾಗೂ ವಿದ್ಯಾರ್ಥಿಗಳಿಂದ ವಸೂಲಿ ಮಾಡಿದ ಹೆಚ್ಚುವರಿ ಶುಲ್ಕಗಳನ್ನು ಕೂಡಲೇ ವಿದ್ಯಾರ್ಥಿಗಳಿಗೆ ಹಿಂದುರುಗಿಸತಕ್ಕದ್ದು. ಈ ಕುರಿತು ಕೂಡಲೇ ಸೂಕ್ತ ಕ್ರಮ ಕೈಗೊಳ್ಳದೇ ಇದ್ದಲ್ಲಿ ಮುಂದಿನ ಹಂತಗಳಲ್ಲಿ ಹೆಚ್ಚಿನ ರೀತಿಯ ಉಘ್ರ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದರು.

  ಪ್ರತಿಭಟನೆಗೆ ಮಣಿದ ಪ್ರಾಚಾರ್ಯರರು ದಿನಾಂಕ ೨೫-೧೧-೨೦೧೪ ರ ಒಳಗೆ ವಿತರಣೆ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಎಸ್ ಎಫ್ಐನ ಅಮರೇಶ ಕಡಗದ ,  ಹನ್ಮಂತ ಬಂಡಿಹರ್ಲಾಪುರ,    ಸುಭಾನ್ ಸೈಯದ್       ಬಾಳಪ್ಪ ಹುಲಿಹೈದರ್  ,ಈರಣ್ಣ,ಯಮನೂರಸಾಬ,ಬದ್ರಿನಾಧ ಸುಧಾ ಅನುಪಮಾ ವಿಜಯ ದಸ್ತಗಿರಿ ಇತರರು ಉಪಸ್ಥಿತರಿದ್ದರು. 

Leave a Reply

Top