ಸೆ.೨೫ ರಿಂದ ಸ್ವಚ್ಛ ಭಾರತ ಪಾಕ್ಷಿಕ ಸ್ವಚ್ಛತಾ ಕಾರ್ಯಕ್ರಮ.

ಕೊಪ್ಪಳ, ಸೆ.೨೮
(ಕ ವಾ) ಕೊಪ್ಪಳ ನಗರಸಭೆ ಕಾರ್ಯಾಲಯದ ವತಿಯಿಂದ ಸ್ವಚ್ಛ ಭಾರತ ಮಿಷನ್‌ನ
ವಾರ್ಷಿಕೋತ್ಸವದ ಅಂಗವಾಗಿ ಸೆ.೨೫ ರಿಂದ ಅಕ್ಟೋಬರ್.೧೧ ರವರೆಗೆ ಸ್ವಚ್ಛ ಭಾರತ ಪಾಕ್ಷಿಕ
ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
     ಅಕ್ಟೋಬರ್.೦೨ ರಂದು
ಸ್ವಚ್ಛ ಭಾರತ ಮಿಷನ್‌ನ ವಾರ್ಷಿಕೋತ್ಸವವನ್ನು ಆಚರಿಸಬೇಕಿರುವ ಹಿನ್ನೆಲೆಯಲ್ಲಿ ಸೆ.೨೫
ರಿಂದ ಅಕ್ಟೋಬರ್.೧೧ ರವರೆಗೆ ಈ ಸ್ವಚ್ಛ ಭಾರತ ಫೋರ್ಟ್‌ನೈಟ್ ಸ್ವಚ್ಛತಾ
ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದ ಮೊದಲನೇ ಹಂತವಾಗಿ ಸೆ.೨೫ ರಿಂದ
ಅಕ್ಟೋಬರ್.೦೧ ರವರೆಗೆ ನಗರದ ವಿವಿಧ ವಾರ್ಡುಗಳಲ್ಲಿ ಸಭೆಗಳನ್ನು ನಡೆಸಲಾಗುವುದು.
ಅಕ್ಟೋಬರ್.೦೨ ರಂದು ಮಹಾತ್ಮಾ ಗಾಂಧೀಜಿ ಜಯಂತಿ ಹಾಗೂ ಸ್ವಚ್ಛ ಭಾರತ್ ಮಿಷನ್
ವಾರ್ಷಿಕೋತ್ಸವ ಆಚರಿಸಲಾಗುವುದು. ಎರಡನೇ ಹಂತವಾಗಿ ಅಕ್ಟೋಬರ್.೦೩ ರಿಂದ ೧೧ ರವರೆಗೆ
ಒಂದು ದಿನ ಮಾರುಕಟ್ಟೆ ಸ್ವಚ್ಛತೆ, ಒಂದು ದಿನ ಶಾಲೆಗಳ ಆವರಣ ಸ್ವಚ್ಛತೆ, ಒಂದು ದಿನ
ಶೌಚಾಲಯಗಳ  ಸ್ವಚ್ಛತೆ, ಒಂದು ದಿನ ಸ್ಮಶಾನಗಳ ಸ್ವಚ್ಛತೆ ಸೇರಿದಂತೆ ಹೀಗೆ ಪ್ರತಿ ದಿನ
ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಪೌರಾಯುಕ್ತ ರಮೇಶ
ಪಟ್ಟೇದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.     
Please follow and like us:
error