ಜಾತ್ಯತೀತ ಜನತಾದಳದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಎಂ.ವಿ. ಪಾಟೀಲ ಆಯ್ಕೆ

ಕೊಪ್ಪಳ, ೨೦ : ಕೊಪ್ಪಳದ ಎಂ.ವಿ ಪಾಟೀಲರು ಜಾತ್ಯಾತೀತ ಜನತಾದಳದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.  ಮೂಲ ಜನತಾದಳದಿಂದ ಬಂದ ಇವರು ಎರಡು ದಶಕಗಳಿಂದಲೂ ರಾಜಕೀಯ ಕ್ಷೇತ್ರದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ೪ ಅವಧಿಗೆ ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರ ಸುದೀರ್ಘ ಸೇವೆಯನ್ನು ಪರಿಗಣಿಸಿ ಮಾಜಿ ಮುಖ್ಯಮಂತ್ರಿ ಹಾಗೂ ಜೆ.ಡಿ.ಎಸ್. ರಾಜ್ಯಾಧ್ಯಕ್ಷರಾದ ಎಚ್.ಡಿ. ಕುಮಾರಸ್ವಾಮಿಯವರು ರಾಜ್ಯ ಜಾತ್ಯತೀತ ಜನತಾದಳದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಾತಿ ಅದೇಶ ಹೊರಡಿಸಿ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಹಾಗೂ ಪಕ್ಷ ಸಂಘಟನೆಗಾಗಿ ದುಡಿಯುವಂತೆ ಕರೆ ಕೊಟ್ಟಿದ್ದಾರೆ.
ಅಭಿನಂದನೆಗಳು :

ಎಂ.ವಿ. ಪಾಟೀಲರು ಜಾತ್ಯತೀತ ಜನತಾದಳದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಕ್ಕೆ ಕೊಪ್ಪಳ ವಿಧಾನಸಭಾ ಕ್ಷೇತ್ರದ ಜೆ.ಡಿ.ಎಸ್. ಪಕ್ಷದ ಅಭ್ಯರ್ಥಿ ಪ್ರದೀಪಗೌಡ, ಮಾಜಿ ಜಿ.ಪಂ. ಸದಸ್ಯ ಎಚ್. ಮೋತಿಲಾಲ್, ಪಕ್ಷದ ಯುವ ಮುಖಂಡ ವೀರೇಶ ಮಹಾಂತಯ್ಯನಮಠ, ಜೆ.ಡಿ.ಎಸ್. ತಾಲೂಕಾ ಅಧ್ಯಕ್ಷ ಅಂದಪ್ಪ ಮರೇಬಾಳ, ಜಿಲ್ಲಾ ಯುವ ಜನತಾದಳ ಅಧ್ಯಕ್ಷ ಸಿ. ರಮೇಶ, ಮಾಜಿ ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ನೀಲಕಂಠಯ್ಯ ಹಿರೇಮಠ, ವೀರನಗೌಡ ಪಾಟೀಲ ಹಲಗೇರಿ, ಭೀಮಪ್ಪ ಹಲಗೇರಿ, ಶಂಕರಗೌಡ ಗುಡ್ಲಾನೂರ, ಅಬ್ದುಲ್ ರವೂಫ್ ಕಿಲ್ಲೇದಾರ, ಕೊಟ್ರಪ್ಪ ಕೊರ್ಲಹಳ್ಳಿ, ಮಂಜುನಾಥ ಗಡ್ಡದ, ಎಂ.ಡಿ. ಹುಸೇನ್ ಮಾಸ್ತರ್, ಚಂದ್ರಮೋಹನ್ ಬಂಡಿ ಹರ್ಲಾಪೂರ, ಶಂಕರಗೌಡ ಬಂಡಿ ಹರ್ಲಾಪೂರ, ಮಂಜು ಗುತ್ತೇದಾರ, ಸಿದ್ಧಯ್ಯ ಸಾಲಿಮಠ, ಹೊಸಳ್ಳಿ, ಖಾಜಾವಲಿ ಮನಿಯಾರ, ರಶೀದ್ ಸಿದ್ಧಿಕಿ, ಯೂಸೂಫ್ ಖಾನ್ ಸೇರಿದಂತೆ ಅವರ ಅಪಾರ ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Related posts

Leave a Comment