ಹಸಿರಿನಂಗಳದಲ್ಲಿ ಗವಿಮಠ-ಶ್ರೀಗವಿಮಠದ ಜಾತ್ರೆಗೆ ಸಕಲ ಸಿದ್ದತೆ

ಕೊಪ್ಪಳ :  ದಕ್ಷಿಣ ಭಾರತದ ಮಹಾಕುಂಭ ಮೇಳವೆಂದೇ ಖ್ಯಾತಿಯಾದ ಕೊಪ್ಪಳದ ಶ್ರೀಗವಿಮಠದ ಜಾತ್ರೆಗೆ  ಸಕಲ ಸಿದ್ದತೆಯು ನಡೆಯುತ್ತಿದೆ. ದಿನದಿಂದ ದಿನಕ್ಕೆ ಜಾತ್ರೆ ತನ್ನದೇ ಆದ ರಂಗನ್ನು ಪಡೆದುಕೊಳ್ಳುತ್ತಿದೆ. ಈ ಸಾರೆ ಜಾತ್ರೆಗೆ ಆಗಮಿಸುವ ಭಕ್ತರನ್ನು ಶ್ರೀಗವಿಮಠದ ಹೊರಾಂಗಣ ಮತ್ತು ಒಳಾಂಗಣ ಆವರಣದಲ್ಲಿರುವ ಪ್ರಮುಖ ದೇಶಿಯ ಹಾಗೂ ವಿದೇಶಗಳ ವಿವಿಧ ಜಾತಿಯ ಸಸ್ಯಗಳು, ಬಣ್ಣ ಬಣ್ಣದ ಹೂ ಬಳ್ಳಿಗಳು, ಅಪಾರ ಸಸ್ಯರಾಸಿಗಳು ಭಕ್ತರನ್ನು ಆಕರ್ಷಿಸಲಿವೆ.  ಗವಿಮಠದ ಪ್ರವೇಶ ದ್ವಾರದ ಎರಡೂ ಕಡೆ ಬೆಳೆಸಲಾದ ಎತ್ತರದ  ಅಲಂಕಾರಿಕ

 ಫೈಕಾಸ ಪ್ಲಾಂಟ್ ಹಾಗೂ ಆವರಣದಲ್ಲಿ  ಬೆಳೆಸಲಾದ ಇತರೇ ಅಲಂಕಾರಿಕ  ಹಾಗೂ ಹೂ ಬಿಡುವ ಸಸ್ಯಗಳಾದ ಡುರಾಂಟ್, ಪ್ಲೂಮೇರಿಯಾ, ಸಪ್ಲೇರಿಯಾ, ಅಕೇಲಿಪಾ, ಇರಾಂತಮಂ, ಸಾನ್ಸವೀರ, ಟಕೋಮಾ, ಆಲ್ಟ್ರನೆಂತ್ರಾ, ಯೂಫರ‍್ಭಿಯಾ, ವರ್ಬಿನಾ, ಟೇಬಲ್ ರೋಜ್, ಲಂಟಾನ ಹಾಗೂ ಆಲ್ಮೊಂಡಾ ಎಂಬ ಮುಂತಾದ ವೈವಿಧ್ಯಮಯ ಸುಂದರ ಅಲಂಕಾರಿಕ ಹೂ ಗಿಡಗಳು ಶ್ರೀಗವಿಮಠದ ಸೌಂದರ್ಯವನ್ನುಇಮ್ಮಡಿಗೊಳಿಸದ್ದಲ್ಲದೇ ಜನಾಕರ್ಷಣೀಯವಾಗಿವೆ.  ಜೊತೆಗೆ  ವಿವಿಧ ಜಾತಿಯ ಸಸ್ಯಗಳಿಂದಾದ  ಅಲಂಕಾರಿಕ ಕಾರ್ಪೆಟ ಬೆಡ್ , ನೆರಳು ಮತ್ತು ಬಣ್ಣ ಬಣ್ಣದ ಹೂ ಬಿಡುವ  ವಿವಿಧ ಜಾತಿಯ  ಸ್ಪರ‍್ನ್,  ಫೆಥೋಡಿಯಾ, ಮ್ಯಾಗ್ನೋಲಿಯಾ, ತಬೂವೀಯಾ, ಟೆಕೋಮಾ, ಬವುನೀಯಾ, ಕಾಲಿವಿಲ್ಲಾಯಾ, ಸರೇಕಾ ಹಾಗೂ ಹಲವು ಸಸ್ಯಗಳು  ಗವಿಮಠದ ಆವರಣದಲ್ಲಿ ಕಂಗೊಳಿಸುತ್ತಾ ನೋಡುಗರ ಕಣ್ಮನ ಸೆಳೆಯುತ್ತಿವೆ.  ಶ್ರೀಗವಿಸಿದ್ದೇಶ್ವರ  ಆಯುರ್ವೇದ ಮಹಾವಿದ್ಯಾಲಯ, ಹರ್ಬಲ್ ಗಾರ್ಡನ್, ಶೀಗವಿಸಿದ್ದೇಶ್ವರ ಪದವಿ ಹಾಗೂ ಪದವಿಪೂರ್ವ ಮಹಾವಿದ್ಯಾಲಯ  ಹೀಗೆ ಶ್ರೀಮಠದ ಆವರಣದಲ್ಲಿ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿಯೂ  ಸಸ್ಯಕಾಶಿ ಪಸರಿಸಿದೆ. ಹೂ ಬನಗಳ ಹಸಿರಿನ ಸಿಂಚನ ಮೊಳಗಿದೆ. ಈ ಎಲ್ಲ ವೈವಿಧ್ಯಮಯಗಳಿಂದ  ಸೃಷ್ಠಿಯ ಸೊಬಗೇ ಧರೆಗಿಳಿದು ಬಂದಂತೆ ಆಕರ್ಷಣೀಯವಾಗಿದೆ.  ಹಸಿರು ವನ ಹಸಿರುಬನ ಕಂಗೊಳಿಸುವ  ಸುಂದರ  ಸುಶಾಂತ  ವಾತಾವರಣ ಹಸಿರು ನೆಲದ ಬನಸಿರಿ ಇಲ್ಲಿ ಮೇಳೈಸಿದೆ.  ಜಾತ್ರೆಯ ಸೊಬಗನ್ನು ಇಮ್ಮಡಿಗೊಳಿಸದ್ದಲ್ಲದೇ ಮನಕೆ ಮುದವನ್ನು ತನುವಿಗೆ ಶಾಂತಿಯನ್ನು ನೀಡುವ ತಾಣವಾಗಿದೆ.  ದಾಸೋಹ ಸ್ಥಳದಲ್ಲಿ ಸದಾ ಕಾಲ ಗಿಡ-ಮರಗಳ ನೆರಳಲ್ಲೇ ಕುಳಿತು ಊಟ ಮಾಡಲಿಕ್ಕಾಗಿ ಹಸಿರಿನೊಂದೊಗೆ ನೆರಳು ನೀಡುವ ಕದಂಬ, ಮಿಲೇಷಿಯಾ, ಕ್ಯಾಶಿಯಾ, ಫಂಗೇಮಿಯಾ, ಫರ‍್ಮ, ತಬೂಬೀಯಾ, ಈ ಮರಗಳ ನೆರಳಿನಡಿಯಲ್ಲಿ  ಭಕ್ತರು ಕುಳಿತು ಪ್ರಸಾದವನ್ನು ಸ್ವೀಕರಿಸುವಂತಹ ಸುವ್ಯವಸ್ಥೆ ದಾಸೋಹಮಂಟಪದ ಇನ್ನೊಂದು ವೈಶಿಷ್ಠ್ಯವಾಗಿದೆ.  ಇದಲ್ಲದೇ ಹರ್ಬಲನ ಗಾರ್ಡನನಲ್ಲಿ ವಿವಿಧ ಬಗೆಯ ನೂರಾರು ಜಾತಿ ಅಲಂಕಾರಿಕ ಸಸ್ಯಗಳು, ಬಣ್ಣ ಬಣ್ಣದ ಹೂ ಬಿಡುವ ಗಿಡಮರಬಳ್ಳಿಗಳು, ವಿವಿಧ ನೂರಾರು ಜಾತಿಯ ಸಸ್ಯಗಳು ಕುಂಡಲಿಗಳಲ್ಲಿ ಬೆಳೆಸಿ  ಅವುಗಳನ್ನು ವಿಶಿಷ್ಠ ಕಾರ್ಯಕ್ರಮಗಳಲ್ಲಿ ಅಲಂಕಾರ ಮಾಡಲು ಬಳಸಲಾಗುತ್ತದೆ.  ಹಸಿರು ಜೀವನದ ಉಸಿರು ಎಂಬ ಧ್ಯೇಯ ವಾಕ್ಯದೊಂದಿಗೆ ಪೂಜ್ಯ ಸನ್ನಿಧಿಯವರು ನಾಡಿನ ಎಲ್ಲಾ ಕಡೆಗಳಲ್ಲಿಯೂ ಹಾಗೂ ಶ್ರೀಮಠದಲ್ಲಿಯೂ ಗಿಡಗಳನ್ನು ನೆಡುವ ಮೂಲಕ ಅವುಗಳನ್ನು ಕಾರ್ಯಗತ ಗೊಳಿಸಿದ್ದಾರೆ. ತೋಟಗಾರಿಕಾ ಇಲಾಖೆಯ ನಿವೃತ್ತ  ಕ್ಷೇತ್ರಾಧಿಕಾರಿಗಳಾದ ಕೊಟ್ರಪ್ಪ ಸೋಂಪುರ ಇವರು ಸದ್ಯ ಶ್ರೀಗವಿಮಠದಲ್ಲಿ ಹಸಿರು ಹರಿಸುವ ಯೋಜನೆಯ ಉಸ್ತುವಾರಿ ವಹಸಿಕೊಂಡು ಯಶಸ್ವಿಯಾಗಿ ಸಾಗಿದ್ದಾರೆ.

                           ದವಸ ಧಾನ್ಯ ಅರ್ಪಣೆ
ಕೊಪ್ಪಳ: ಸಂಸ್ಥಾನ ಶ್ರೀಗವಿಮಠದ ಜಾತ್ರೆಯ ಅಂಗವಾಗಿ ಜರುಗುವ ಮಹಾದಾಸೋಹಕ್ಕೆ ಇಂದು ಕೂಡಾ ಬೆಳವನಾಳ ಗ್ರಾಮದ ಭಕ್ತರು ೩೦೩೦ ರೊಟ್ಟಿಗಳು, ೩ ಚೀಲ ದವಸ ದಾನ್ಯಗಳನ್ನು ಸಮರ್ಪಿಸಿದರು. ದಾನಿಗಳಿಗೆ ಪೂಜ್ಯ ಶ್ರೀಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು ಆಶೀರ್ವದಿಸಿದ್ದಾರೆ.

Leave a Reply